ಶನಿವಾರ, ಮೇ 21, 2022
23 °C

ಹುಟ್ಟುಹಬ್ಬ ಆಚರಣೆ ಬದಲು ಕೊರೊನಾ ಸಂತ್ರಸ್ತರಿಗೆ ಸಹಾಯ ಮಾಡಿ:ಪ್ರಜ್ವಲ್‌ ದೇವರಾಜ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಳೆದ ವರ್ಷದಂತೆ ಈ ವರ್ಷವೂ ತಮ್ಮ ಹುಟ್ಟುಹಬ್ಬದ ಆಚರಣೆ ಬೇಡ ಎಂದು ನಟ ಪ್ರಜ್ವಲ್ ದೇವರಾಜ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಹುಟ್ಟುಹಬ್ಬದ ಆಚರಣೆಯ ಹಣದಲ್ಲೇ ಕೊರೊನಾ ಸಂತ್ರಸ್ತರಿಗೆ ನೆರವಾಗಿ, ನಿಮ್ಮ ನಿಮ್ಮ ಊರುಗಳಲ್ಲಿ ಆರೋಗ್ಯದಿಂದ ಸುರಕ್ಷಿತವಾಗಿರಿ ಎಂದು ಆಶಿಸಿದ್ದಾರೆ. 

ಈ ಕುರಿತು ಒಂದು ನಿಮಿಷದ ವಿಡಿಯೊ ಮಾಡಿರುವ ಪ್ರಜ್ವಲ್‌ ಅದನ್ನು ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಪ್ರಜ್ವಲ್ ಹೇಳಿರುವುದು ಹೀಗೆ ‘ಎಲ್ಲರಿಗೂ ನಮಸ್ಕಾರ, ನಾನು ವಿಡಿಯೊ ಮಾಡುತ್ತಿರುವ ಕಾರಣ ಏನೆಂದರೆ ಜುಲೈ 4ಕ್ಕೆ ನನ್ನ ಹುಟ್ಟುಹಬ್ಬ. ಕಳೆದ ಬಾರಿ ಹುಟ್ಟುಹಬ್ಬದ ಸಮಯದಲ್ಲಿ ನಾನೊಂದು ಮನವಿ ಮಾಡಿದ್ದೆ. ಆ ಮನವಿಯನ್ನು ನೀವು ಮನ್ನಿಸಿದ್ದೀರಿ. ಹಾರಗಳು, ಕೇಕ್‌ ಬೇಡ. ನಿಮ್ಮಿಂದ ಆದಷ್ಟು ವಿದ್ಯಾರ್ಥಿಗಳು ಹಾಗೂ ಶಾಲೆಗಳಿಗೆ ಸಹಾಯ ಮಾಡಿ ಎಂದಿದ್ದೆ. ಆ ನಿಟ್ಟಿನಲ್ಲಿ ನಾನು ಕೂಡ ಒಂದು ಶಾಲೆಯನ್ನು ದತ್ತು ತೆಗೆದುಕೊಂಡಿದ್ದೆ. ಈ ಬಾರಿ ಕೊರೊನಾ ಹೆಮ್ಮಾರಿ ಎಲ್ಲರಿಗೂ ತೊಂದರೆ ನೀಡುತ್ತಿದೆ. ಹಾಗಾಗಿ ಗುಂಪಲ್ಲಿ ಸೇರುವುದು ಒಳ್ಳೆಯದಲ್ಲ. ಆ ಕಾರಣಕ್ಕೆ ನಾನು ಈ ಬಾರಿ ನಿಮ್ಮೆಲ್ಲರನ್ನೂ ಭೇಟಿ ಮಾಡಲು ಸಾಧ್ಯವಿಲ್ಲ.

ಕಳೆದ ಬಾರಿ ನೀವು ನನ್ನ ಮೇಲೆ ಇಟ್ಟಿರುವ ಪ್ರೀತಿಯಿಂದ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡಿದ್ದೀರಿ, ಅನೇಕ ಶಾಲೆಗಳಿಗೆ ಸಹಾಯ ಮಾಡಿದ್ದೀರಿ. ಈ ಬಾರಿ ಕೊರೊನಾದಿಂದ ಎಲ್ಲರಿಗೂ ಸಾಕಷ್ಟು ಕಷ್ಟ ಇದೆ. ನೀವು ನನ್ನ ಮೇಲೆ ಪ್ರೀತಿ ಇಟ್ಟು ಹಾರ, ಕೇಕ್‌ ತರುವುದು ಹಾಗೂ ಬಂದು ಭೇಟಿ ಮಾಡುವ ಬದಲು ಅದೇ ಹಣದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ. ರೇಷನ್ ಕಿಟ್‌ಗಳನ್ನು ನೀಡಿ. ಕೊರೊನಾದಿಂದ ಸಮಸ್ಯೆ ಅನುಭವಿಸುತ್ತಿರುವವರಿಗೆ ಸಾಕಷ್ಟು ರೀತಿಯಲ್ಲಿ ಸಹಾಯ ಮಾಡಬಹುದು. ಅದನ್ನು ಮಾಡಿ, ಮುಂದಿನ ವರ್ಷ ಖಂಡಿತ ನಿಮ್ಮೆಲ್ಲರನ್ನು ಭೇಟಿ ಮಾಡುತ್ತೇನೆ. ಎಲ್ಲರೂ ಆರೋಗ್ಯವಾಗಿರಿ ಸುರಕ್ಷಿತರಾಗಿರಿ. ನಿಮ್ಮ ಕುಟುಂಬದವರನ್ನು ಚೆನ್ನಾಗಿ ನೋಡಿಕೊಳ್ಳಿ. ಒಳ್ಳೆದಾಗ್ಲಿ’ ಎಂದು ವಿನಂತಿಸಿಕೊಂಡಿದ್ದಾರೆ. ಆ ಮೂಲಕ ಸಾಮಾಜಿಕ ಕಳಕಳಿ ತೋರಿದ್ದಾರೆ ಪ್ರಜ್ವಲ್‌. 

 
 
 
 

 
 
 
 
 
 
 
 
 
 
 

A post shared by Prajwal Devaraj (@prajwaldevaraj) on

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು