ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನ್ ಕಿ ಬಾತ್‌ನಲ್ಲಿ ಫಿಟ್ನೆಸ್ ಪಾಠ ಹೇಳಿದ ಅಕ್ಷಯ್ ಕುಮಾರ್

Published 31 ಡಿಸೆಂಬರ್ 2023, 8:39 IST
Last Updated 31 ಡಿಸೆಂಬರ್ 2023, 8:39 IST
ಅಕ್ಷರ ಗಾತ್ರ

ನವದೆಹಲಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರ 'ಮನ್ ಕಿ ಬಾತ್' ರೇಡಿಯೊ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಭಾರತೀಯ ಚಲನಚಿತ್ರೋದ್ಯಮದಲ್ಲಿ ಕಟ್ಟುಮಸ್ತಿನ ದೇಹ ಹೊಂದಿರುವ ನಟರಲ್ಲಿ ಒಬ್ಬರಾದ ಅಕ್ಷಯ್, ಜನರು ತಮ್ಮ ಜೀವನದಲ್ಲಿ ಫಿಟ್ನೆಸ್ ಅನ್ನು ಗಂಭೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು. ಸಿನಿಮಾ ತಾರೆಯರ ಬಗ್ಗೆ ತಲೆಕೆಡಿಸಿಕೊಳ್ಳದೆ ವೈದ್ಯರ ಸಲಹೆಯಂತೆ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕೆಂದು ವಿನಂತಿಸಿದರು.

‘ಫಿಟ್ನೆಸ್‌ಗೆ ಯಾವುದು ಒಳ್ಳೆಯದು ಮತ್ತು ಯಾವುದು ಕೆಟ್ಟದು ಎಂಬುದನ್ನು ನಾವು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಚಲನಚಿತ್ರ ತಾರೆಯರ ದೈಹಿಕ ಗುಣಲಕ್ಷಣಗಳನ್ನು ನೋಡಿ ತಲೆಕೆಡಿಸಿಕೊಳ್ಳದೆ ವೈದ್ಯರ ಸಲಹೆಯ ಮೇರೆಗೆ ನಿಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಿ. ತೆರೆಯ ಮೇಲೆ ಕಾಣಿಸಿಕೊಂಡಂತೆ ಅವರ(ಸಿನಿಮಾ ತಾರೆಯರು) ದೇಹ ದಾರ್ಢ್ಯತೆ ಇರುವುದಿಲ್ಲ. ತೆರೆಯ ಮೇಲೆ ಅನೇಕ ರೀತಿಯ ಫಿಲ್ಟರ್‌ಗಳು ಮತ್ತು ಸ್ಪೆಷಲ್ ಎಫೆಲ್ಟ್ ಬಳಸಿ ಅವರನ್ನು ತೋರಿಸಲಾಗುತ್ತದೆ. ಅವುಗಳನ್ನು ನೋಡಿ ಶಾರ್ಟ್‌ಕಟ್‌ಗಳನ್ನು ಬಳಸಲು ಪ್ರಾರಂಭಿಸುತ್ತೀರಿ’ ಎಂದು ಅಕ್ಷಯ್ ಹೇಳಿದರು.

ಶಾರ್ಟ್‌ಕಟ್‌ಗಳನ್ನು ಆಯ್ಕೆ ಮಾಡುವ ಬದಲು ನೈಸರ್ಗಿಕವಾಗಿ ತಮ್ಮ ದೇಹದ ಫಿಟ್ನೆಸ್ ವೃದ್ಧಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.

ನಿಯಮಿತ ವ್ಯಾಯಾಮ, ಯೋಗ, ಉತ್ತಮ ಆರೋಗ್ಯಕರ ಆಹಾರ ಸೇವನೆ, ಸರಿಯಾದ ನಿದ್ರೆಯ ವೇಳಾಪಟ್ಟಿಯನ್ನು ನಿರ್ವಹಿಸುವುದು ಮತ್ತು ಧ್ಯಾನವನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು..

‘ಇತ್ತೀಚಿನ ದಿನಗಳಲ್ಲಿ ಹಲವರು ಸಿಕ್ಸ್ ಪ್ಯಾಕ್ ಮತ್ತು 8 ಪ್ಯಾಕ್‌ಗಳಿಗಾಗಿ ಸ್ಟಿರಾಯ್ಡ್‌ಗಳನ್ನು ತೆಗೆದುಕೊಳ್ಳುತ್ತಾರೆ. ಸ್ನೇಹಿತರೇ, ಅಂತಹ ಶಾರ್ಟ್‌ ಕಟ್‌ಗಳಿಂದ ದೇಹವು ಹೊರಗಿನಿಂದ ಊದಿಕೊಳ್ಳುತ್ತದೆ. ಆದರೆ, ಒಳಗಿನಿಂದ ಟೊಳ್ಳಾಗಿರುತ್ತದೆ. ನೆನಪಿಡಿ, ಶಾರ್ಟ್‌ ಕಟ್ ನಿಮ್ಮ ಆಯಸ್ಸನ್ನು ಕಡಿಮೆ ಮಾಡಬಹುದು’ಎಂದು ತಿಳಿ ಹೇಳಿದರು.

ಹೊಸ ವರ್ಷದಲ್ಲಿ , ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಬಗ್ಗೆ ಶಪಥ ಮಾಡಿ ಎಂದು ಕೇಳುಗರಿಗೆ ಅವರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT