ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್‌ ಸಾಧನೆಗೆ ಶಕ್ತಿಯಾಗಿದ್ದ ವರದಪ್ಪ: ನಟ ರಾಘವೇಂದ್ರ ರಾಜಕುಮಾರ್‌

Last Updated 13 ಫೆಬ್ರುವರಿ 2021, 19:22 IST
ಅಕ್ಷರ ಗಾತ್ರ

ಬೆಂಗಳೂರು: ‘ಮುತ್ತುರಾಜ ಎಂಬ ದೀಪವು ಪ್ರಕಾಶಮಾನವಾಗಿ ಬೆಳಗಲು ವರದರಾಜು ಎಂಬ ಎಣ್ಣೆಯು ಅದ್ಭುತ ಶಕ್ತಿಯಾಗಿ ಕೆಲಸ ಮಾಡಿತ್ತು’ ಎಂದು ಹಿರಿಯ ನಟ ರಾಘವೇಂದ್ರ ರಾಜಕುಮಾರ್‌ ತಿಳಿಸಿದರು.

ಎಸ್‌.ಪಿ.ವರದರಾಜು ಆತ್ಮೀಯರ ಬಳಗವು ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕುಕನೂರು ಬಾಬಣ್ಣ
(ರಂಗಭೂಮಿ) ಹಾಗೂ ಸುರೇಖಾ (ಚಲನಚಿತ್ರ ಕ್ಷೇತ್ರ) ಅವರಿಗೆ ಎಸ್‌.ಪಿ.ವರದರಾಜು ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಮಾರಂಭದಲ್ಲಿ ಮಾತನಾಡಿದ ಅವರು ‘ರಾಜಕುಮಾರ್‌ ಮತ್ತು ವರದ
ರಾಜು ರಾಮ–ಲಕ್ಷ್ಮಣರಂತಿದ್ದರು. ಅಪ್ಪಾಜಿಯವರು ಅಭಿನಯಿಸಿದ ಎಲ್ಲಾ ಚಿತ್ರಗಳು ಭಾರಿ ಯಶಸ್ಸು ಗಳಿಸುವಲ್ಲಿ ವರದಪ್ಪಣ್ಣನವರ ಕಾಣಿಕೆಯೂ ಇತ್ತು’ ಎಂದರು.

‘ವರದರಾಜು ಅವರು ಅಜಾತಶತ್ರುವಾಗಿದ್ದರು. ಕಥೆಯ ಆಯ್ಕೆಯ ವಿಚಾರದಲ್ಲಿ ಅವರಿಗೆ ಅಗಾಧ ಜ್ಞಾನವಿತ್ತು. ಯಾವ ಪಾತ್ರಕ್ಕೆ ಯಾರು ಜೀವ ತುಂಬಬಲ್ಲರು ಎಂಬುದನ್ನು ನಿರ್ಣಯಿಸಿ ಅಂತಹ ಕಲಾವಿದರನ್ನೇ ಆಯ್ಕೆಮಾಡುತ್ತಿದ್ದರು. ರಾಜಕುಮಾರ್‌ ಅಭಿನಯದ ಚಿತ್ರಗಳು ಶೇಕಡ 100ರಷ್ಟು ಯಶಸ್ಸು ಕಾಣಲು ಇದೇ ಕಾರಣ’ ಎಂದು ಹಿರಿಯ ನಟ ದೊಡ್ಡಣ್ಣ ತಿಳಿಸಿದರು.

‘ನಾನು ಚಿತ್ರರಂಗದ ಯಶಸ್ವಿ ನಟಿಯಾಗಿ ಬೆಳೆಯಲು ರಾಜಕುಮಾರ್‌ ಮತ್ತು ಪಾರ್ವತಮ್ಮನವರು ಕಾರಣ. ನನ್ನ ಯಶಸ್ಸಿನಲ್ಲಿ ವರದಪ್ಪಣ್ಣನವರ ಪಾತ್ರವೂ ಇದೆ’ ಎಂದು ನಟಿ ಸುಧಾರಾಣಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT