ಮಂಗಳವಾರ, ನವೆಂಬರ್ 24, 2020
25 °C

₹10 ಲಕ್ಷ ಮೌಲ್ಯದ ತೊಟ್ಟಿಲು ಖರೀದಿಸಿದ ಧ್ರುವ ಸರ್ಜಾ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಂಬು ಗರ್ಭಿಣಿ ಮೇಘನಾ ರಾಜ್‌ ಅವರ ಸೀಮಂತ ಕಾರ್ಯವನ್ನು ಎರಡೂ ಕುಟುಂಬಗಳು ಸೇರಿ ಇತ್ತೀಚೆಗಷ್ಟೇ ಅದ್ಧೂರಿಯಾಗಿ ಮಾಡಿದ್ದವು. ಮನೆಗೆ ಹೊಸ ಅತಿಥಿ ಅಂದರೆ ಚಿರು ಅವರ ವಾರಸುದಾರ/ಳನ್ನು ಬರಮಾಡಿಕೊಳ್ಳಲು ಇದೀಗ ದಿನಗಣನೆ ಮಾಡುತ್ತಿದ್ದಾರೆ ಕುಟುಂಬದ ಸದಸ್ಯರು.

ಈ ನಡುವೆ ಚಿರು ಸಹೋದರ ಧ್ರುವ ಸರ್ಜಾ ಅವರು, ತಮ್ಮ ಕುಟುಂಬಕ್ಕೆ ಬರಲಿರುವ ಪುಟಾಣಿಯನ್ನು ಅದ್ಧೂರಿಯಾಗಿ ಸ್ವಾಗತಿಸಲು ಬೆಳ್ಳಿಯ ತೊಟ್ಟಿಲನ್ನೇ ಖರೀಸಿದ್ದಾರೆ. ಅದರ ಬೆಲೆ ಬರೋಬರಿ ₹10 ಲಕ್ಷ.

ಮೇಘನಾ ಅವರ ಸೀಮಂತ ಶಾಸ್ತ್ರವನ್ನು ಜೆಪಿ ನಗರದ ತಮ್ಮ ಮನೆಯಲ್ಲಿ ಕುಟುಂಬ ಸದಸ್ಯರು ಇತ್ತೀಚೆಗಷ್ಟೇ ನೆರವೇರಿಸಿದ್ದರು. ಹೋಟೆಲ್‌ವೊಂದರಲ್ಲಿ ಬೇಬಿ ಶವರ್ ಆಯೋಜಿಸಿ, ಈ ಕಾರ್ಯಕ್ರಮಕ್ಕೆ ಅವರ ಕುಟುಂಬದ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು