ಗುರುವಾರ , ಮಾರ್ಚ್ 30, 2023
21 °C

ವಿಡಿಯೊ ನೋಡಿ: ಬುರ್ಜ್ ಖಲೀಫಾ ಮೇಲಿಂದ ಶಾರುಕ್ ಖಾನ್‌ಗೆ ಜನ್ಮದಿನದ ವಿಶೇಷ ಶುಭಾಶಯ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ದುಬೈ: ಬಾಲಿವುಡ್ ನಟ ಶಾರುಕ್‌ ಖಾನ್ ಅವರು ನಿನ್ನೆಯಷ್ಟೇ (ನ.2) ತಮ್ಮ 56 ನೇ ವರ್ಷದ ಜನ್ಮದಿನಾಚರಣೆಯನ್ನು ಆಚರಿಸಿಕೊಂಡರು. ಭಾರತ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಶಾರುಕ್‌ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು.

ಇದೇ ವೇಳೆ ಶಾರುಖ್ ಬರ್ತಡೇ ಪ್ರಯುಕ್ತ ಜಗದ್ವಿಖ್ಯಾತ ದುಬೈನ ಬುರ್ಜ್ ಖಲೀಫಾದ ಮೇಲೆ ವಿಶೇಷವಾಗಿ ಜನ್ಮದಿನದ ಶುಭಾಶಯಗಳನ್ನು ಕೋರಲಾಗಿದೆ. ಲೈಟಿಂಗ್ ಮೂಲಕ ‘ಹ್ಯಾಪಿ ಬರ್ತಡೇ ಶಾರುಕ್‌, ವಿ ಲವ್ ಯು' ಎಂದು ಶುಭಾಶಯ ಕೋರಲಾಗಿದೆ.

‘ಎಮ್ಮಾರ್ ಪ್ರಾಪರ್ಟಿಸ್ ಇ–ಕಾಮರ್ಸ್ ವೆಂಚರ್ಸ್ ನೂನ್' ಸಂಸ್ಥೆಯ ಮೊಹಮ್ಮದ್ ಅಲಬಾರ್ ಅವರು ಇದಕ್ಕೆ ಸಂಬಂಧಿಸಿದ ವಿಡಿಯೊವನ್ನು ಹಂಚಿಕೊಂಡಿದ್ದು ಅದು ವೈರಲ್ ಆಗಿದೆ.

 

ಬಾಲಿವುಡ್‌ ಸಿನಿಮಾ ನಟ, ನಟಿಯರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು ಸೇರಿದಂತೆ ರಾಜಕೀಯ ನಾಯಕರು, ಉದ್ಯಮಿಗಳು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಶಾರುಕ್‌ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ.

ಡ್ರಗ್ಸ್ ಪ್ರಕರಣದಲ್ಲಿ ತಮ್ಮ ಪುತ್ರ ಆರ್ಯನ್ ಖಾನ್‌ನನ್ನು ಎನ್‌ಸಿಬಿ ಬಂಧಿಸಿದ್ದ ಹಿನ್ನೆಲೆಯಲ್ಲಿ ತಮ್ಮ ಚಿತ್ರದ ಶೂಟಿಂಗ್ ರದ್ದು ಮಾಡಿ ಮನೆಯಲ್ಲೇ ಇದ್ದ ಶಾರುಕ್ ಅವರು, ಈ ಸಾರಿ ಜನ್ಮದಿನವನ್ನು ವಿಶೇಷವಾಗಿ ಆಚರಿಸಿಕೊಂಡಿಲ್ಲ ಎಂದು ತಿಳಿದು ಬಂದಿದೆ.

ಬಾಲಿವುಡ್‌ನ ಬಾದ್‌ಶಾ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ಶಾರುಕ್‌ ಕಳೆದ 3 ದಶಕಗಳಿಂದ ಬಾಲಿವುಡ್‌ ಸಿನಿರಂಗದಲ್ಲಿ ಸ್ಟಾರ್ ನಟರ ‍ಪಟ್ಟಿಯಲ್ಲಿದ್ದಾರೆ. ಅನೇಕ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿರುವ ಕಿಂಗ್ ಖಾನ್‌ ರೊಮ್ಯಾಂಟಿಕ್ ಚಿತ್ರಗಳಿಂದಲೂ ಹೆಸರು ಗಳಿಸಿದ್ದಾರೆ.

ಇದನ್ನೂ ಓದಿ: ತೆಲುಗು ನಟ ನಂದಮೂರಿ ಬಾಲಕೃಷ್ಣ ಆಸ್ಪತ್ರೆಗೆ ದಾಖಲು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು