ದುನಿಯಾ ವಿಜಯ್ ನಿರ್ದೇಶಿಸಿ, ನಟಿಸಿರುವ ‘ಭೀಮ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನಟ ಶಿವರಾಜ್‌ಕುಮಾರ್ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು.
‘ನನಗೆ ಆ್ಯಕ್ಷನ್ ಸಿನಿಮಾಗಳೆಂದರೆ ಇಷ್ಟ. ಈ ಚಿತ್ರದಲ್ಲಿ ಸಾಕಷ್ಟು ಆ್ಯಕ್ಷನ್ ಇದೆ. ದುನಿಯಾ ವಿಜಯ್ ನಿರ್ದೇಶನದಲ್ಲಿ ನಾನು ಸಿನಿಮಾ ಮಾಡಬೇಕೆಂದು ಆಸೆಯಿದೆ. ಆ ಸಮಯ ಬೇಗ ಬರಲಿ. ‘ಭೀಮ’ ಗೆಲುವು ಇದಕ್ಕೆ ಬುನಾದಿಯಾಗಲಿ’ ಎಂದು ಶಿವಣ್ಣ ತಂಡಕ್ಕೆ ಶುಭ ಕೋರಿದರು.
‘ಒಂದೊಳ್ಳೆ ಸಿನಿಮಾ ಮಾಡಿರುವೆ ಎಂಬ ನಂಬಿಕೆ ಇದೆ. ಇಷ್ಟಪಟ್ಟು, ಕಷ್ಟಪಟ್ಟು ಈ ಸಿನಿಮಾ ಮಾಡಿದ್ದೇವೆ. ಇನ್ನು ಮುಂದೆ ಸಿನಿಮಾವೇ ಮಾತನಾಡಬೇಕು. ಜನರ ಪ್ರತಿಕ್ರಿಯೆಗಾಗಿ ಕಾಯುತ್ತಿರುವೆ’ ಎಂದು
ದುನಿಯಾ ವಿಜಯ್ ಹೇಳಿದರು.
ನಾಯಕಿಯಾಗಿ ಅಶ್ವಿನಿ ಅಂಬರೀಶ್ ಕಾಣಿಸಿಕೊಂಡಿದ್ದಾರೆ. ಡ್ರಗ್ಸ್ ಕುರಿತು ಸಂದೇಶ ನೀಡುವ ಕಥೆಗೆ ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಬಂಡವಾಳ ಹೂಡಿದ್ದಾರೆ. ರಂಗಾಯಣ ರಘು, ಅಚ್ಯುತ್ ಕುಮಾರ್, ನಯನಾ ಸೂಡ, ರಾಘು ಶಿವಮೊಗ್ಗ, ಗೋಪಾಲಕೃಷ್ಣ ದೇಶಪಾಂಡೆ, ಪ್ರಿಯಾ ಶಠಮರ್ಷಣ್ ಮೊದಲಾದವರು ತಾರಾಗಣದಲ್ಲಿದ್ದಾರೆ.
ಆ.9ಕ್ಕೆ ಚಿತ್ರ ತೆರೆಗೆ ಬರುತ್ತಿದೆ. ಚಿತ್ರಕ್ಕೆ ಚರಣ್‌ರಾಜ್ ಸಂಗೀತವಿದೆ. ಶಿವಸೇನಾ ಛಾಯಾಚಿತ್ರಗ್ರಹಣ, ದೀಪು. ಎಸ್. ಕುಮಾರ್ ಸಂಕಲನ, ಮಂಜು ಮಾಸ್ತಿ ಸಂಭಾಷಣೆಯಿದೆ.