ಲೇಹ್‌ನಲ್ಲಿ ‘ಏಕ್ ಲವ್‌ಯಾ ತಂಡ’

ಪ್ರೇಮ್ ನಿರ್ದೇಶನದ ಏಕ್ ಲವ್‌ಯಾ ಚಿತ್ರದ ಹಾಡಿನ ಚಿತ್ರೀಕರಣ ಕಾಶ್ಮೀರ ಸುತ್ತಮುತ್ತ ಮುಕ್ತಾಯವಾಗಿದೆ. ಈಗ ತಂಡ ಲೇಹ್‌ನತ್ತ ಹೆಜ್ಜೆ ಹಾಕಿದೆ. ಅಲ್ಲಿ ತಂಡವು ಈಗಾಗಲೇ ಬೀಡುಬಿಟ್ಟಿದ್ದು ಚಿತ್ರೀಕರಣದ ಸ್ಥಳದ ವಿಡಿಯೋವೊಂದನ್ನು ಪ್ರೇಮ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಲಡಾಕ್‌ನಿಂದ ವಿಡಿಯೋದಲ್ಲಿ ಮಾತನಾಡಿರುವ ಪ್ರೇಮ್, ನಮ್ಮ ನಿಜವಾದ ಹೀರೋಗಳಿಗೆ (ಸೈನಿಕರು) ಧನ್ಯವಾದ ಹೇಳುತ್ತೇನೆ. ನಮ್ಮನ್ನು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ಮಾತನಾಡಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಕರ್ನಾಟಕದವರು ಇದ್ದಾರೆ. ಬೆಳಗಾವಿ ಭಾಗದ ನಮ್ಮ ಸೈನಿಕರು ಬಂದು ಮಾತನಾಡಿಸಿದಾಗ ತುಂಬಾ ಖುಷಿಯಾಯಿತು. ಎಲ್ಲ ಹೀರೋಗಳಿಗೆ ಥ್ಯಾಂಕ್ಸ್ ಎಂದು ಹೇಳಿಕೊಂಡಿದ್ದಾರೆ.
ಈಗ ತಂಡ ಲೇಹ್‌ನಲ್ಲಿದೆ. ತುಂಬಾ ಚಳಿ ಇರುವುದರಿಂದ ಇಲ್ಲಿ ಉಸಿರಾಟ ಮಾಡಲು ನಾವು ಹೊಂದಿಕೊಳ್ಳಬೇಕು. ಎರಡು ದಿನಗಳ ನಂತರ ಶೂಟಿಂಗ್ ಮುಂದುವರಿಸುತ್ತೇವೆ. ಮುಂದಿನ ವರ್ಷ ಆಡಿಯೋ ಬಿಡುಗಡೆ ಆಗಲಿದೆ ಎಂದು ಹೇಳಿದ್ದಾರೆ.
ಈ ಚಿತ್ರದಲ್ಲಿ ರಚಿತಾ ರಾಮ್ ನಾಯಕಿ. ರೀಶ್ಮಾ ನಾನಯ್ಯ ಮತ್ತು ರಾನಾ ಹೊಸ ಪರಿಚಯವಾಗಿ ಕಾಣಿಸಿಕೊಳ್ಳಲಿದ್ದಾರೆ. ಪ್ರೇಮ್ ಅವರ ಪತ್ನಿ ರಕ್ಷಿತಾ ಈ ಚಿತ್ರ ನಿರ್ಮಿಸುತ್ತಿದ್ದಾರೆ.
Hats off to all the real heroes🙏
Ekloveya song shoot is going on, thank you for all the love and support🙏❤️
Stay tuned for more updates 🤗#kashmir #army #realheroes #soilders #realfighters #lehladakh #rajasthan #gujarat #respect #ekloveya #songshoot #kashmirbeauty pic.twitter.com/ZZo7e2BtHN— PREM❣️S (@directorprems) December 2, 2020
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.