ಭಾನುವಾರ, ಅಕ್ಟೋಬರ್ 24, 2021
27 °C

’ಎಮ್ಮಿ’ ಪ್ರಶಸ್ತಿ ಪ್ರಕಟ: 'ದಿ ಕ್ರೌನ್' ವೆಬ್ ಸರಣಿಗೆ ಹೆಚ್ಚು ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಿರುತೆರೆ ಹಾಗೂ ಒಟಿಟಿ ವೆಬ್ ಸರಣಿಗಳ ’ಆಸ್ಕರ್’ ಎಂದೇ ಖ್ಯಾತಿಯಾಗಿರುವ  2021ನೇ ಸಾಲಿನ ’ಎಮ್ಮಿ’ ಪ್ರಶಸ್ತಿಗಳನ್ನು ಘೋಷಣೆ ಮಾಡಲಾಗಿದೆ. 

 'ದಿ ಕ್ರೌನ್' ವೆಬ್ ಸರಣಿ ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ನೆಟ್‌ಫ್ಲಿಕ್ಸ್‌,  ಎಚ್‌ಬಿಒ, ಎಬಿಸಿ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗುತ್ತಿರುವ ಹಲವು ವೆಬ್ ಸರಣಿಗಳು ಹಾಗೂ ಸಿನಿಮಾಗಳಿಗೆ ಪ್ರಶಸ್ತಿ ನೀಡಲಾಗಿದೆ. 

ನಟಿ, ನಿರ್ಮಾಪಕಿ, ನಿರ್ದೇಶಕಿ ಮಿಚೆಲ್‌ ಕೋಲ್ ಅವರು ಅತ್ಯುತ್ತಮ ಬರಹ ಪ್ರಶಸ್ತಿ ಪಡೆದಿದ್ದಾರೆ. ಎಚ್‌ಬಿಒನಲ್ಲಿ ಪ್ರಸಾರವಾಗುತ್ತಿರುವ ’ಐ ಮೆ ಡೆಸ್ಟ್ರಾಯ್‌ ಯೂ’ ಸರಣಿಗೆ ಈ ಪ್ರಶಸ್ತಿ ಸಂದಿದೆ. 

ಹಾಸ್ಯದ ವೆಬ್‌ ಸರಣಿಯಲ್ಲಿ 'ಟೆಡ್ ಲಾಸ್ಸೊ' ಹಾಗೂ ಸಿನಿಮಾ ವಿಭಾಗದಲ್ಲಿ 'ಮೇರ್ ಆಫ್ ಈಸ್ಟನ್' ಚಿತ್ರಕ್ಕೆ ಪ್ರಶಸ್ತಿಗಳು ಸಂದಿವೆ.

ಅತ್ಯುತ್ತಮ ಡ್ರಾಮಾ ಸರಣಿ: ದಿ ಕ್ರೌನ್

ಅತ್ಯುತ್ತಮ ಟಿವಿ ಸಿನಿಮಾ: ಡಾಲಿ ಪಾರ್ಟನ್ಸ್ ಕ್ರಿಸ್‌ಮಸ್‌ ಆನ್‌ ದಿ ಸ್ಕೇರ್

ಅತ್ಯುತ್ತಮ ಕಾಮಿಡಿ ಸರಣಿ: ಟೆಡ್-ಲಾಸ್ಸೊ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು