ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಶ್‌ ಹುಟ್ಟುಹಬ್ಬ: ದುಬೈನ ಬುರ್ಜ್‌ ಟವರ್‌ನಲ್ಲಿ ದೀಪ ಬೆಳಗಿಸಿದ ಅಭಿಮಾನಿಗಳು

Last Updated 8 ಜನವರಿ 2023, 13:22 IST
ಅಕ್ಷರ ಗಾತ್ರ

ಬೆಂಗಳೂರು: ಕೆಜಿಎಫ್‌ನ ರಾಕಿಂಗ್‌ ಸ್ಟಾರ್ ಯಶ್ ಹುಟ್ಟುಹಬ್ಬವನ್ನು ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದ್ದಾರೆ. ಕುಟುಂಬದೊಂದಿಗೆ ವಿದೇಶ ಪ್ರವಾಸದಲ್ಲಿರುವ ಯಶ್‌ ಹುಟ್ಟುಹಬ್ಬದ ಸಂಭ್ರಮಕ್ಕೆ ಅಭಿಮಾನಿಗಳಿಗೆ ಸಿಕ್ಕಿಲ್ಲ. ಆದಾಗ್ಯೂ ಅವರ ಅಭಿಮಾನಿ ಸಮೂಹವೊಂದು ದುಬೈನ ಐಕಾನಿಕ್ ಅಲ್ ಬುರ್ಜ್ ಟವರ್‌ನಲ್ಲಿ ವಿದ್ಯುತ್‌ ದೀಪ ಬೆಳಗುವ ಮೂಲಕ 'ರಾಕಿಂಗ್ ಸ್ಟಾರ್' ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿತು.

ಭಾನುವಾರ ಯಶ್‌ ಜನ್ಮದಿನ. ತಮ್ಮ ಹುಟ್ಟುಹಬ್ಬವನ್ನು ದೊಡ್ಡದಾಗಿ ಆಚರಿಸುವುದರಲ್ಲಿ ನನಗೆ ನಂಬಿಕೆ ಇಲ್ಲ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಪತ್ರ ಹಂಚಿಕೊಂಡಿದ್ದರು. ಆದರೂ ಅಭಿಮಾನಿಗಳು ಮಾತ್ರ ಮೂರು ದಿನದಿಂದ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ಅನೇಕ ನಗರಗಳು ಮತ್ತು ಪಟ್ಟಣಗಳಲ್ಲಿ ಯಶ್‌ ಚಲನಚಿತ್ರಗಳ ವಿಶೇಷ ಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಅವರ ಹುಟ್ಟುಹಬ್ಬದ ಕಟೌಟ್‌ಗಳನ್ನು ಹಾಕಿ, ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಿದ್ದಾರೆ. ಕಳೆದ ವಾರ, ಅಭಿಮಾನಿಗಳು 'ಯಶ್ ಟೈಮ್ಸ್' ಎಂಬ ಡಿಜಿಟಲ್ ಕಾರ್ಯಕ್ರಮ ಆಯೋಜಿಸಿದ್ದರು. ಯಶ್‌ ಸಿನಿ ಬದುಕಿನ ಪಯಣವನ್ನು ಪ್ರಸ್ತುಪಡಿಸಿದ್ದರು.

ಕೆಜಿಎಫ್‌–2 ನಂತರ ಯಾವುದೇ ಚಿತ್ರವನ್ನು ಯಶ್‌ ಘೋಷಿಸಿಲ್ಲ. ಹುಟ್ಟುಹಬ್ಬದಂದು ತಮ್ಮದೇ ಸ್ವಂತ ನಿರ್ಮಾಣದಲ್ಲಿ ಯಶ್‌ ಮುಂದಿನ ಚಿತ್ರ ಘೋಷಣೆ ಮಾಡುತ್ತಾರೆ ಎಂಬ ಸುದ್ದಿಯಿತ್ತು. ಆದರೆ ಕಾಯುವಂತೆ ಯಶ್‌ ಅಭಿಮಾನಿಗಳಲ್ಲಿ ವಿನಂತಿಸಿದ್ದಾರೆ. ಅವರ ಆಪ್ತ ಮೂಲಗಳ ಪ್ರಕಾರ ಕೆವಿಎನ್‌ ನಿರ್ಮಾಣ ಸಂಸ್ಥೆ ಮತ್ತು ಯಶ್‌ ಅವರ ನಿರ್ಮಾಣ ಸಂಸ್ಥೆ ಒಟ್ಟಾಗಿ ಮುಂದಿನ ಚಿತ್ರ ನಿರ್ಮಿಸಲಿದೆ. ಆದರೆ ಈ ಬಗ್ಗೆ ಯಶ್‌ ಅಥವಾ ಕೆವಿಎನ್‌ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT