ನಟ ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಕೊನೆಯ ಚಿತ್ರ ‘ದಿಲ್ ಬೇಚಾರ’ ಸಿನಿಮಾದ ಟೈಟಲ್ ಟ್ರ್ಯಾಕ್‌ಗೆ ನೃತ್ಯ ನಿರ್ದೇಶನ ಮಾಡಿದವರುಬಾಲಿವುಡ್‌ನ ಖ್ಯಾತ ಕೊರಿಯೊಗ್ರಾಫರ್ ಫರ್‍ಹಾಖಾನ್. ಈ ಹಾಡಿಗೆ ನೃತ್ಯ ನಿರ್ದೇಶನ ಮಾಡುವ ಸಂದರ್ಭದ ಮೇಕಿಂಗ್ ವಿಡಿಯೊ ತುಣುಕನ್ನು ಅವರು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅದೀಗ ವೈರಲ್ ಆಗಿದೆ.

‘ದಿಲ್ ಬೇಚಾರ’ ಸಿನಿಮಾವು ಇದೇ ಜುಲೈ24ಕ್ಕೆ ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗುತ್ತಿದೆ.ಐದು ದಿನಗಳ ಹಿಂದೆ ಬಿಡುಗಡೆಯಾದ ಸಿನಿಮಾದ 2.43 ನಿಮಿಷದ ಟೈಟಲ್ ಹಾಡು 3 ಕೋಟಿಗಿಂತಲೂ ಹೆಚ್ಚು ‘ವೀವ್ಸ್’ ಪಡೆದಿದೆ.

ಈ ಹಾಡಿಗೆ ನೃತ್ಯ ನಿರ್ದೇಶನ ಮಾಡುವ ಸಂದರ್ಭದಲ್ಲಿ ಸೆರೆ ಹಿಡಿಯಲಾದಎರಡು ನಿಮಿಷದ ಬಿಟಿಎಸ್ ವಿಡಿಯೊವನ್ನುಫರ‍್ಹಾ ಹಂಚಿಕೊಂಡಿದ್ದು, ಸುಶಾಂತ್ ಪ್ರಾಕ್ಟೀಸ್ ಮಾಡುವ ದೃಶ್ಯಗಳಿವೆ. ನಟನ ನೃತ್ಯ, ಮೂಮೆಂಟ್‌ಗಳನ್ನು ನೋಡಿದ ಅಭಿಮಾನಿಗಳು ‘ಎಂಥ ಪ್ರತಿಭಾವಂತ ನಟ’ ಎಂದು ಮರುಗಿದ್ದಾರೆ.

ಈ ಟೈಟಲ್ ಟ್ರಾಕ್‌ಗೆ ಸಂಗೀತ ನಿರ್ದೇಶನ ಮಾಡಿದವರು ಎ.ಆರ್. ರೆಹಮಾನ್. ಸಾಹಿತ್ಯ ಅಮಿತಾಭ್ ಭಟ್ಟಾಚಾರ್ಯ ಅವರದು. ಈ ಹಾಡಿನ ಚಿತ್ರೀಕರಣ ಮಾಡುವ ಮೊದಲು ಸುಶಾಂತ್ ದಿನವಿಡಿ ಡಾನ್ಸ್ ರಿಹರ್ಸಲ್‌ನಲ್ಲಿ ಪಾಲ್ಗೊಂಡಿದ್ದರು. ಬಳಿಕ ಹಾಡನ್ನು ಅರ್ಧದಿನದಲ್ಲಿ ಚಿತ್ರೀಕರಣ ಮಾಡಲಾಯಿತು.

‘ಕೆಲವು ನೆನಪುಗಳು ನಮ್ಮನ್ನು ಬಿಟ್ಟು ಹೋಗುವುದಿಲ್ಲ. ಪದೇ ಪದೇ ಆ ನೆನಪುಗಳು ನಮ್ಮನ್ನು ಕಾಡುತ್ತಲೇ ಇರುತ್ತವೆ. ಈ ಹಾಡು ನನ್ನ ವೃತ್ತಿಜೀವನದ ವಿಶೇಷ. ಸುಶಾಂತ್ ಮತ್ತು ನಾನು ಅನೇಕ ವರ್ಷಗಳಿಂದ ಸ್ನೇಹಿತರು. ಆದರೆ ಜೊತೆಗೆ ಕೆಲಸ ಮಾಡುವ ಅವಕಾಶ ಸಿಕ್ಕಿರಲಿಲ್ಲ.‘ದಿಲ್ ಬೇಚಾರ’ದಲ್ಲಿ ಆ ಅವಕಾಶ ದೊರೆಯಿತು’ ಎಂದು ಫರ್‍ಹಾ ಖಾನ್ ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.