ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಫೈಟರ್‌‘ ಚಿತ್ರ ಜನವರಿ 25ಕ್ಕೆ ಬಿಡುಗಡೆ: ಪೈಲಟ್‌ಗಳಾಗಿ ಹೃತಿಕ್‌, ದೀಪಿಕಾ

Published 6 ಡಿಸೆಂಬರ್ 2023, 10:55 IST
Last Updated 6 ಡಿಸೆಂಬರ್ 2023, 10:55 IST
ಅಕ್ಷರ ಗಾತ್ರ

ಮುಂಬೈ: ಸಿದ್ದಾರ್ಥ್‌ ಆನಂದ್‌ ನಿರ್ದೇಶನದ ಬಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ ‘ಫೈಟರ್‌‘, 2024ರ ಜನವರಿ 25ರಂದು ವಿಶ್ವದಾದ್ಯಂತ ತೆರೆ ಕಾಣಲಿದೆ.

ಚಿತ್ರ ಬಿಡುಗಡೆ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ನಟ ಅನಿಲ್‌ ಕಪೂರ್‌ ಪೋಸ್ಟರ್‌ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ನಟ ಅನಿಲ್‌ ಕಪೂರ್‌ ವಾಯುಪಡೆಯ ಅಧಿಕಾರಿ (ಐಎಎಫ್) ರಾಕೇಶ್‌ ಜೈ ಸಿಂಗ್‌ (ರಾಕಿ) ಪಾತ್ರದಲ್ಲಿ ಮಿಂಚಲಿದ್ದಾರೆ.

ವಾಯುಪಡೆಯ ಅಧಿಕಾರಿ ಮಿನಲ್‌ ರಾಥೋರ್‌ ಪಾತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ( Minni) ಕಾಣಿಸಿಕೊಂಡರೆ, ಶ್ಯಾಮ್‌ಶೇರ್‌ ಪಟಾನಿಯಾ ( Patty) ಪಾತ್ರದಲ್ಲಿ ನಟ ಹೃತಿಕ್‌ ರೋಷನ್‌ ಅಭಿನಯಿಸಲಿದ್ದಾರೆ.

ನಿರ್ದೇಶಕ ಸಿದ್ದಾರ್ಥ್‌ ಆನಂದ್‌ ಅವರು ’ಫೈಟರ್’ ಸಿನಿಮಾ ಮೂಲಕ ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ, ದೇಶಭಕ್ತಿ ಮತ್ತು ತ್ಯಾಗದ ಕಥೆ ಹೇಳಲಿದ್ದಾರೆ.

ಈ ಚಿತ್ರವನ್ನು ವಯಾಕಾಮ್ 18 ಸ್ಟುಡಿಯೋಸ್ ಮತ್ತು ಮಾರ್ಫ್ಲಿಕ್ಸ್ ಪಿಕ್ಚರ್ಸ್ ನಿರ್ಮಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT