ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೈಟರ್ ಫಸ್ಟ್‌ ಲುಕ್‌!

Last Updated 2 ಜುಲೈ 2018, 9:30 IST
ಅಕ್ಷರ ಗಾತ್ರ

ಇತ್ತೀಚೆಗಷ್ಟೇ ‘ರಗಡ್‌’ ಚಿತ್ರಕ್ಕಾಗಿ ಏಯ್ಟ್‌ ಪ್ಯಾಕ್‌ ಮಾಡಿ ಹುರಿಗೊಂಡು ಸುದ್ದಿಯಾಗಿದ್ದ ವಿನೋದ್ ಪ್ರಭಾಕರ್, ಈಗ ಫೈಟ್ ಮಾಡೋಕೆ ಸಿದ್ಧರಾಗಿದ್ದಾರೆ. ಯಾರ ಜತೆಗೆ ಫೈಟ್‌? ಯಾಕಾಗಿ ಫೈಟ್? ಇವರು ಮಾಡುವುದೆಲ್ಲವೂ ಸಿನಿಮಾಕ್ಕಾಗಿ. ವಿನೋದ್ ಪ್ರಭಾಕರ್ ಅವರ ಹೊಸ ಸಿನಿಮಾ ‘ಫೈಟರ್’. ಈ ಚಿತ್ರದ ಫಸ್ಟ್‌ ಲುಕ್‌ ಅನ್ನು ಇತ್ತೀಚೆಗೆ ಚಿತ್ರತಂಡ ಬಿಡುಗಡೆ ಮಾಡಿದೆ. ಬುಡಬುಡಕೆಯವರ ಹಾಗೆ ದಿರಿಸು ತೊಟ್ಟು ಹುಕ್ಕಾ ಸೇದುತ್ತಿರುವ ಅವರ ಚಿತ್ರ ಮೊದಲ ನೋಟಕ್ಕೇ ಗಮನ ಸೆಳೆಯುವಂತಿದೆ. ಅವರ ಹರಿತ ನೋಟವೂ ನೋಡುಗರ ಎದೆಯಲ್ಲಿ ಚುಳುಕು ಹುಟ್ಟಿಸುವ ಹಾಗಿದೆ.

ಆಕಾಶ್‌ ಎಂಟರ್‌ಪ್ರೈಸರ್ ಲಾಂಛನದಲ್ಲಿ ಕೆ. ಸೋಮಶೇಖರ್ ಕಟ್ಟಿಗೇನಹಳ್ಳಿ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನೂತನ್ ಉಮೇಶ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದೇ ತಿಂಗಳ 5ರಂದು ‘ಫೈಟರ್’ ಚಿತ್ರದ ಮುಹೂರ್ತ ನಡೆಯಲಿದೆ. ರಾಕೇಶ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್‌ ಅವರ ಸಂಕಲನ ಈ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT