ಭಾನುವಾರ, ನವೆಂಬರ್ 27, 2022
26 °C

ಜನರಂಗದಲ್ಲಿ ಎರಡು ದಿನಗಳ ಸಿನಿ ಹಬ್ಬ 27ರಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಮನುಜಮತ ಸಿನಿಯಾನ ಮತ್ತು ಜನರಂಗ ಸಂಘಟನೆಯ ಸಹಯೋಗಲ್ಲಿ ಇದೇ 27–28ರಂದು ನಗರದ ಕುಸನೂರ ರಸ್ತೆಯ ಜಿಡಿಎ ಲೇಔಟ್ ಸಮೀಪದ ಅಂಬಾಭವಾನಿ ದೇವಸ್ಥಾನದ ಬಳಿಯಿರುವ ‘ಜನರಂಗ’ದಲ್ಲಿ ‘ವರ್ತಮಾನದ ಸಿನಿಮಾ; ದಲಿತ ಮತ್ತು ಕಪ್ಪುಜನರ ಪ್ರತಿರೋಧ’ ಎಂಬ ಶೀರ್ಷಿಕೆಯಡಿ ಕಲಬುರಗಿ ಸಿನಿಹಬ್ಬವನ್ನು ಆಯೋಜಿಸಲಾಗಿದೆ ಎಂದು ಮನುಜಮತ ಸಿನಿಯಾನದ ಸದಸ್ಯರಾದ ಕಿರಣ ಗಾಜನೂರ, ಅಪ್ಪಗೆರೆ ಸೋಮಶೇಖರ, ಜನರಂಗದ ಅಧ್ಯಕ್ಷ ಶಂಕ್ರಯ್ಯ ಘಂಟಿ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿನಿಯಾನದ ವತಿಯಿಂದ ಈಗಾಘಲೇ ಕುಪ್ಪಳ್ಳಿ, ಹಾಸನ, ಬೆಂಗಳೂರು, ಶಿವಮೊಗ್ಗ, ಮೂಡಿಗೆರೆ ಸೇರಿದಂತೆ ಹಲವೆಡೆ ಸಿನಿಮಾ ಹಬ್ಬವನ್ನು ಆಯೋಜಿಸಲಾಗಿದೆ. ಈ ಬಾರಿ ಕಲಬುರಗಿಯಲ್ಲಿ ಸಿನಿಹಬ್ಬ ಆಯೋಜಿಸಲಾಗುತ್ತಿದ್ದು, ಎರಡು ದಿನಗಳ ಈ ಹಬ್ಬದಲ್ಲಿ ಮೊದಲ ದಿನ ಮೂರು ಸಿನಿಮಾಗಳು, ಎರಡನೇ ದಿನ ಎರಡು ಸಾಕ್ಷ್ಯಚಿತ್ರ ಮತ್ತು ಎರಡು ಕಿರುಚಿತ್ರಗಳನ್ನು ಪ್ರದರ್ಶಿಸಲು ಉದ್ದೇಶಿಸಲಾಗಿದೆ’ ಎಂದರು.

‘ಸಿನಿಮಾ ಸಾಮುದಾಯಿಕವಾಗಿ ನೋಡುವ ಒಂದು ಕಲೆಯ ಪ್ರಕಾರ ಎಂಬ ಚರ್ಚೆಯೊಂದು ವಾಟ್ಸ್ ಆ್ಯಪ್ ಗುಂಪಿನಲ್ಲಿ ಆರಂಭವಾಗಿ ಅಂತಿಮವಾಗಿ ಅದು ಮನುಜಮತ ಸಿನಿಯಾನ ತಂಡವಾಗಿ ರೂಪುಗೊಂಡಿತು. ಈ ತಂಡದ ಮುಖ್ಯ ಉದ್ದೇಶ ಕರ್ನಾಟಕದ ಬೇರೆಬೇರೆ ಭಾಗಗಳಲ್ಲಿ ಸಿನಿಮಾ ಹಬ್ಬಗಳನ್ನು ಆಚರಿಸುವ ಮೂಲಕ ಸಿನಿಮಾ ಎಂಬುದು ಸಾಮುದಾಯಿಕವಾಗಿ ಅರಿವನ್ನು ವಿಸ್ತರಿಸುವ ಪ್ರಯತ್ನವಾಗಿದೆ’ ಎಂದು ಹೇಳಿದರು.

‘ಆ 27ರಂದು ಮೋಹಿತ್ ಪ್ರಿಯದರ್ಶಿ ನಿರ್ದೇಶನದ ಕೋಸ್ (ಹಿಂದಿ), ಸುಷ್ಮಿತ್ ಘೋಷ್, ರಿಂಟು ಥಾಮಸ್ ಅವರ ದಿ ರೈಟಿಂಗ್ ವಿತ್ ಫೈರ್ (ಹಿಂದಿ), ಪಾ. ರಂಜಿತ್ ನಿರ್ದೇಶನದ ದಿ ಪಿಗ್ ಸೇತುಮಾನ್ (ತಮಿಳು), ಆ 28ರಂದು ವಿಕಾಸ್ ರಂಜನ್ ಮಿಶ್ರಾ ಅವರ ಚೌರಾಂಗ್ (ಹಿಂದಿ), ಸೆರಾಲ್ ಮುರ್ಮು ನಿರ್ದೇಶನದ ಸೋಂಧ್ಯಾನಿ, ರಾಜೇಶ್ ರಾಜಮಣಿ ಅವರ ದಿ ಡಿಸ್ಕ್ರೀಟ್ ಚಾರ್ಮ್ ಆಫ್ ಸವರ್ಣ (ಇಂಗ್ಲಿಷ್), ಪಾ ರಂಜಿತ್ ನಿರ್ದೇಶನದ ಧಮ್ಮಂ (ತಮಿಳು) ಸಿನಿಮಾಗಳು ಪ್ರದರ್ಶನಗೊಳ್ಳಲಿದೆ’ ಎಂದರು.

ಗುಲಬರ್ಗಾ ವಿಶ್ವವಿದ್ಯಾಲಯ, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ವಿವಿಧ ಸಂಘಟನೆ ಪ್ರಮುಖರು ಸೇರಿದಂತೆ 50ಕ್ಕೂ ಹೆಚ್ಚು ಜನರು ಪಾಲ್ಗೊಳ್ಳಲಿದ್ದಾರೆ. ಸಿನಿಮಾ ವೀಕ್ಷಣೆ ಬಳಿಕ ಸಿನಿಮಾ ಕುರಿತು ಸಂವಾದ ನಡೆಯಲಿದೆ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು