ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಿತೆರೆಗೆ ಫೀಲ್ಡ್‌ ಮಾರ್ಷಲ್‌ ಕಾರ್ಯಪ್ಪ ಜೀವನ

ಕನ್ನಡ, ಹಾಲಿವುಡ್‌ ಚಿತ್ರಕ್ಕೆ ಸಿದ್ಧತೆ
Last Updated 2 ಅಕ್ಟೋಬರ್ 2021, 17:13 IST
ಅಕ್ಷರ ಗಾತ್ರ

ನವದೆಹಲಿ: ದೇಶ ಕಂಡ ಅಪ್ರತಿಮ ಸೇನಾಧಿಕಾರಿ, ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಜೀವನಾಧರಿತ ಕಥೆಯ ‘ಮಾರ್ಷಲ್‌’ ಚಿತ್ರವನ್ನು ಇಂಗ್ಲಿಷ್‌ನಲ್ಲಿ ನಿರ್ಮಿಸಲಾಗುತ್ತಿದ್ದು, ಕನ್ನಡ, ಹಿಂದಿ ಮತ್ತಿತರ ಭಾರತೀಯ ಭಾಷೆಗಳಲ್ಲೂ ಮೂಡಿಬರಲಿದೆ.

ಆರು ತಿಂಗಳೊಳಗೆ ಚಿತ್ರಕಥೆಯ ಸಿದ್ಧತಾ ಕಾರ್ಯ ಪೂರ್ಣಗೊಳ್ಳಲಿದ್ದು, ನಂತರವಷ್ಟೇ ಹಾಲಿವುಡ್‌ನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ‘ನೆನಪಿರಲಿ’ ಪ್ರೇಮ್‌ ಚಿತ್ರದ ನಾಯಕನಾಗಿ ಅಭಿನಯಿಸಲಿದ್ದಾರೆ. ಇತರ ಪಾತ್ರ ವರ್ಗಗಳ ಆಯ್ಕೆ ಪ್ರಕ್ರಿಯೆಯ ನಂತರ ನಡೆಯಲಿದೆ ಎಂದು ನಿರ್ಮಾಪಕರಾದ ಅರುಣ್‌ ಶನಿವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ದೇಶಪ್ರೇಮ ಸಾರುವ, ದೊಡ್ಡ ಬಜೆಟ್‌ನ ಈ ಚಿತ್ರದ ಚಿತ್ರೀಕರಣ ಆರಂಭಿಸುವ ಮುನ್ನ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಸಮಾಧಿ ಸ್ಥಳಕ್ಕೆ ಚಿತ್ರತಂಡದೊಂದಿಗೆ ಭೇಟಿ ನೀಡಿ ಗೌರವ ಸಮರ್ಪಿಸಿದ್ದಾಗಿ ನಟ ಪ್ರೇಮ್‌ ಹೇಳಿದರು.

ಕನ್ನಡದ ಹೆಮ್ಮೆಯ ಪುತ್ರ ಕಾರ್ಯಪ್ಪ ಅವರ ಸಾಹಸಗಾಥೆಯ ಈ ಚಿತ್ರಕ್ಕೆ ಬಹುರಾಷ್ಟ್ರೀಯ ಕಂಪೆನಿಗಳೂ ಬಂಡವಾಳ ಹೂಡಲು ಸಿದ್ಧವಾಗಿದ್ದು, ಶೀಘ್ರವೇ ತೆರೆ ಕಾಣಲಿರುವ ‘ಪ್ರೇಮಂ ಪೂಜ್ಯಂ’ ಚಿತ್ರದ ಬಿ.ಎಸ್‌. ರಾಘವೇಂದ್ರ ಅವರನ್ನೇ ಚಿತ್ರದ ನಿರ್ದೇಶನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಕಾರ್ಯಕಾರಿ ನಿರ್ಮಾಪಕ ಮಾಧವ ಕಿರಣ್‌ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT