ಬೆಂಗಳೂರು: ಭಾರತೀಯ ಚಿತ್ರರಂಗದಲ್ಲಿ 1970ರ ದಶಕಕ್ಕಿಂತ ಮೊದಲಿನ ಶೇಕಡ 70ರಷ್ಟು ಹಳೆಯ ಸಿನಿಮಾಗಳು ಈಗ ಯಾವುದೇ ರೂಪದಲ್ಲಿ ಲಭ್ಯವಿಲ್ಲ. ಸಿನಿಮಾ ಕೂಡ ಸಂಸ್ಕೃತಿಯ ಒಂದು ಭಾಗವಾಗಿದ್ದು, ವರ್ಷಕ್ಕೆ ಕನಿಷ್ಠ 15 ಕನ್ನಡ ಸಿನಿಮಾಗಳನ್ನಾದರೂ ಡಿಜಿಟಲ್ ರೂಪದಲ್ಲಿ ಸಂರಕ್ಷಿಸಬೇಕಿದೆ ಎಂದು ಪುಣೆ ಫಿಲ್ಮ್ ಆ್ಯಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿನಿಮಾ ಸಂಶೋಧಕಿ ಅಪರ್ಣಾ ಸುಬ್ರಮಣಿಯನ್ ಹೇಳಿದರು.

17ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಅಂಗವಾಗಿ ಮಂಗಳವಾರ ನಡೆದ ‘ಸಿನಿಮಾಗಳ ಸಂಗ್ರಹಣೆ, ಸಂರಕ್ಷಣೆ ಮತ್ತು ಪುನಶ್ಚೇತನ’ ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಬಹಳಷ್ಟು ಚಿತ್ರ ನಿರ್ಮಾಪಕ, ನಿರ್ದೇಶಕರಿಗೆ ಸಿನಿಮಾಗಳ ಬೆಲೆ ಗೊತ್ತಿಲ್ಲದೆ ಹಳೆಯ ರೀಲ್ಗಳನ್ನು ಹಾಳು ಮಾಡಿದ್ದಾರೆ. ಕೆಲವರು ನೆಗೆಟಿವ್ ಪ್ರಿಂಟ್ಗಳನ್ನು ಗುಜರಿಗೆ ಮಾರಿದ್ದಾರೆ. ಇವತ್ತು ತಂತ್ರಜ್ಞಾನ ಬಹಳ ಮುಂದುವರಿದಿದೆ. ಹಳೆಯ ಸಿನಿಮಾಗಳನ್ನು ಉತ್ಕೃಷ್ಟ ಮಟ್ಟದಲ್ಲಿ ಡಿಜಿಟಲ್ ರೂಪಕ್ಕೆ ಪರಿವರ್ತಿಸಬಹುದಾಗಿದೆ. ಒಂದು ಸಿನಿಮಾವನ್ನು ಡಿಜಿಟಲ್ ರೂಪಕ್ಕೆ ಪರಿವರ್ತಿಸಲು ₹15–20 ಲಕ್ಷ ವೆಚ್ಚವಾಗಲಿದ್ದು, ನಮ್ಮಲ್ಲಿ ಈ ಕೆಲಸಕ್ಕೆ ಅನುದಾನದ ಕೊರತೆಯಿದೆ’ ಎಂದರು ಅವರು ಹೇಳಿದರು.

‘ಚಿತ್ರೋತ್ಸವದಲ್ಲಿ ಪ್ರದರ್ಶನವಾದ ಹಳೆಯ ಕನ್ನಡ ಕ್ಲಾಸಿಕ್ ಸಿನಿಮಾಗಳನ್ನು ವೀಕ್ಷಿಸಿದ ಬಳಿಕ ಅದರ ಗುಣಮಟ್ಟ ಸಮರ್ಪಕವಾಗಿಲ್ಲದೇ ಇರುವುದು ಅರಿವಿಗೆ ಬಂದಿದೆ. ಕನ್ನಡದಲ್ಲಿಯೂ ಸಾಕಷ್ಟು ಕ್ಲಾಸಿಕ್ ಸಿನಿಮಾಗಳಿವೆ. ಮುಂದಿನ ತಲೆಮಾರಿಗಾಗಿ ಅವುಗಳ ಸಂರಕ್ಷಣೆ ಅವಶ್ಯ. ಆ ನಿಟ್ಟಿನಲ್ಲಿ ಸರ್ಕಾರ ಹಾಗೂ ಸಂಬಂಧಿತ ಸಂಸ್ಥೆಗಳು ಯೋಚಿಸಬೇಕು’ ಎಂದು ಸಲಹೆ ನೀಡಿದರು.

‘ವಿದೇಶಗಳಲ್ಲಿ ಈ ಕಾರ್ಯಕ್ಕಾಗಿ ಸುಮಾರು ₹300 ಶತಕೋಟಿ ಅನುದಾನ ದೊರೆಯುತ್ತದೆ. ಅಷ್ಟಿದ್ದರೂ ಸಾಕಾಗುವುದಿಲ್ಲ ಎಂದು ಅವರು ಬೇಸರಿಸುತ್ತಾರೆ. ಆದರೆ ನಮ್ಮಲ್ಲಿ ₹1 ಕೋಟಿ ಅನುದಾನ ದೊರೆಯುವುದು ಕಷ್ಟ ಎಂಬ ಪರಿಸ್ಥಿತಿ ಇದೆ. ನ್ಯಾಷನಲ್ ಫಿಲ್ಮ್ ಆರ್ಕೈವ್ ಆಫ್ ಇಂಡಿಯಾ ಇದುವರೆಗೆ 5000 ಸಿನಿಮಾಗಳ ಸಂರಕ್ಷಣೆ ಮಾಡಿದೆ. ಇನ್ನೂ 2500 ಸಿನಿಮಾಗಳ ಸಂರಕ್ಷಣಾ ಕಾರ್ಯ ನಡೆಯುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.