ನಟ ಚಂದನ್ ಕುಮಾರ್ ನಿರ್ದೇಶಿಸಿ, ನಟಿಸಿರುವ ‘ಫ್ಲರ್ಟ್’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ನಟ ಸುದೀಪ್ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು.

ಎವರೆಸ್ಟ್ ಪಿಕ್ಚರ್ಸ್ ಮೂಲಕ ನಿರ್ಮಾಣದಲ್ಲೂ ಚಂದನ್ ಕೈಜೋಡಿಸಿದ್ದಾರೆ. ‘ಎ ಪ್ಯೂರ್ ಡವ್ ಸ್ಟೋರಿ’ ಎಂಬ ಅಡಿಬರಹವಿರುವ ಈ ಸಿನಿಮಾದಲ್ಲಿ ನಿಮಿಕಾ ರತ್ನಾಕರ್, ಅಕ್ಷತಾ ಬೋಪಣ್ಣ ನಾಯಕಿಯರಾಗಿ ನಟಿಸಿದ್ದಾರೆ.

ಇತ್ತೀಚೆಗಷ್ಟೇ ಚಿತ್ರದ ‘ನೀ ನನ್ನ ಜೀವ’ ಎಂಬ ಫ್ರೆಂಡ್ ಶಿಪ್ ಹಾಡು ಬಿಡುಗಡೆಯಾಗಿತ್ತು. ಇದಕ್ಕೂ ಸುದೀಪ್ ದನಿಯಾಗಿದ್ದರು. ನವೆಂಬರ್ 7ರಂದು ತೆರೆಗೆ ಬರಲು ಈ ಚಿತ್ರ ಸಿದ್ಧವಾಗಿದೆ.

ಈ ಸಂದರ್ಭದಲ್ಲಿ ಸಿನಿಮಾ ಬಗ್ಗೆ ಮಾತನಾಡಿದ ನಿರ್ದೇಶಕ ಚಂದನ್, ‘ಸಿನಿಮಾಗೆ ಆರಂಭದಿಂದಲೂ ಸುದೀಪ್ ಅವರು ಬೆಂಬಲ ನೀಡುತ್ತಲೇ ಬಂದಿದ್ದಾರೆ. ಇದೊಂದು ರೋಮ್ ಕಾಮ್ ಸಿನಿಮಾ ಆದರೂ ಸ್ನೇಹ, ಪ್ರೀತಿ ಹೀಗೆ ಎಲ್ಲಾ ಮನರಂಜನಾತ್ಮಕ ಅಂಶಗಳು ಸಿನಿಮಾದಲ್ಲಿವೆ. ಫ್ಲರ್ಟ್ ಎಂದರೆ ಬರೀ ಚುಡಾಯಿಸುವುದು ಎಂದರ್ಥವಲ್ಲ. ಗಾಢವಾದ ಪ್ರೀತಿಯನ್ನೂ ಫ್ಲರ್ಟ್ ಎಂದೇ ಕರೆಯುತ್ತಾರೆ. ಎಲ್ಲರ ಡವ್ನಲ್ಲೂ ಒಂದೊಂದು ಲವ್ ಇರುತ್ತದೆ. ಚಿತ್ರದಲ್ಲಿ ರೋಮ್ ಕಾಮ್ ಜೊತೆಗೆ ಸೈಕೋ ಪಾತ್ರವೂ ಇದೆ’ ಎಂದರು.

‘ಚಂದನ್ ನಮ್ಮನೆ ಹುಡುಗ. ತಾನು ನಿರ್ದೇಶನ ಮಾಡುತ್ತೇನೆ ಎಂದಾಗ ಖುಷಿಯಾಗಿತ್ತು. ನಾನು ಸಿನಿಮಾವನ್ನು ನೋಡಿದ್ದೇನೆ. ತುಂಬಾ ಚೆನ್ನಾಗಿ ಮೂಡಿಬಂದಿದೆ. ಕಥೆ ಚೆನ್ನಾಗಿದೆ’ ಎನ್ನುತ್ತಾರೆ ಸುದೀಪ್.

ಚಿತ್ರದಲ್ಲಿ ನ್ಯಾಯಾಧೀಶರಾಗಿ ನಟ ಅವಿನಾಶ್ ನಟಿಸಿದ್ದು, ಶ್ರುತಿ, ಸಾಧು ಕೋಕಿಲ, ಗಿರೀಶ್ ಶಿವಣ್ಣ, ವಿನಯ್ ಗೌಡ ತಾರಾಬಳಗದಲ್ಲಿದ್ದಾರೆ. ಸುದೀಪ್ ಅವರ ಹಾಡಿರುವ ಹಾಡಿಗೆ ನಕುಲ್ ಅಭಯಂಕರ್ ಸಂಗೀತ ನೀಡಿದ್ದು, ಜಸ್ಸಿ ಗಿಫ್ಟ್ ಉಳಿದ ಮೂರು ಹಾಡುಗಳ ಜೊತೆಗೆ ಹಿನ್ನೆಲೆ ಸಂಗೀತ ನೀಡಿದ್ದಾರೆ. ಎಚ್.ಸಿ.ವೇಣು ಛಾಯಾಚಿತ್ರಗ್ರಹಣ ಸಿನಿಮಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.