ಶನಿವಾರ, ಜನವರಿ 18, 2020
21 °C

ಗ್ಯಾಂಗ್‌ಸ್ಟರ್‌ ‘ಜಾನ್‌’ ಅಬ್ರಹಾಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಿರ್ದೇಶಕ ಸಂಜಯ್‌ ಗುಪ್ತಾ ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರ ‘ಮುಂಬೈ ಸಾಗಾ’ದ ಫಸ್ಟ್‌ ಲುಕ್‌ ಅನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಗ್ಯಾಂಗ್‌ಸ್ಟರ್‌ ಪಾತ್ರದಲ್ಲಿರುವ ಜಾನ್‌ ಅಬ್ರಹಾಂ ಗಮನ ಸೆಳೆಯುತ್ತಾರೆ.

ಈ ಚಿತ್ರದ ಮೂಲಕ ಜಾನ್‌ ಅಬ್ರಹಾಂ ಮತ್ತೊಮ್ಮೆ ಗ್ಯಾಂಗ್‌ಸ್ಟರ್‌ ಪಾತ್ರದಲ್ಲಿ ಮಿಂಚಲಿದ್ದಾರೆ. ಈ ಚಿತ್ರದಲ್ಲಿ ಅವರು ಗಣಪತ್‌ ರಾಯ್‌ ಎಂಬ ಪಾತ್ರ ನಿರ್ವಹಿಸಿದ್ದಾರೆ. ‘ಇದು ‘ಮುಂಬೈ ಸಾಗಾ’ ಸಿನಿಮಾದಲ್ಲಿನ ಫೇವರಿಟ್‌ ದೃಶ್ಯ. ಈ ಮುಂಚೆ ಜಾನ್‌ ಅಬ್ರಹಾಂ ಅವರನ್ನು ಈ ತರ ನೀವು ನೋಡಿರಲ್ಲ’ ಎಂದು ಸಂಜಯ್‌ ಗುಪ್ತಾ ಟ್ವೀಟ್‌ ಮಾಡಿರುವುದು ಚಿತ್ರದ ಬಗ್ಗೆ ಕುತೂಹಲ ಹೆಚ್ಚು ಮಾಡಿದೆ.

ಇದಕ್ಕೂ ಮೊದಲುಮಾನ್ಯ ಸುರ್ವೆ ಅವರ ‘ಶೂಟೌಟ್‌ ಎಟ್‌ ವಡಾಲಾ’ ಚಿತ್ರದಲ್ಲಿ  ಅಬ್ರಹಾಂ ಗ್ಯಾಂಗ್‌ಸ್ಟರ್‌ ಪಾತ್ರ ಮಾಡಿದ್ದರು. ಇದು 2013ರಲ್ಲಿ ಬಿಡುಗಡೆಯಾಗಿತ್ತು. ಈ ಚಿತ್ರವನ್ನೂ ನಿರ್ದೇಶಿಸಿದ್ದವರೂ ಸಂಜಯ್‌ ಗುಪ್ತಾ.

‘ಮುಂಬೈ ಸಾಗಾ’ ಚಿತ್ರದಲ್ಲಿ ಸುನಿಲ್‌ ಶೆಟ್ಟಿ, ಜಾಕಿ ಶ್ರಾಫ್‌, ಇಮ್ರಾನ್‌ ಹಶ್ಮಿ, ಕಾಜಲ್‌ ಅಗರ್‌ವಾಲ್‌, ಪ್ರತೀಕ್‌ ಬಬ್ಬರ್‌, ಗುಲ್ಶನ್‌ ಗ್ರೋವರ್‌ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ. ಈ ಚಿತ್ರ ಸೆಟ್ಟೇರುವುವ ಮಾಹಿತಿಯನ್ನು ಸಂಜಯ್‌ ಗುಪ್ತಾ 2019ರ ಜೂನ್‌ ತಿಂಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಜಾನ್‌ ಅಭಿನಯದ ‘ಪಾಗಲ್‌ಪಂತಿ’ ಸಿನಿಮಾವು 2019ರಲ್ಲಿ ಬಿಡುಗಡೆಯಾಗಿತ್ತು. 

ಇದನ್ನೂ ಓದಿ: ಜಾನ್‌ ಅಬ್ರಹಾಂ ಜತೆ ಕಾಜಲ್‌ ಅಗರ್‌ವಾಲ್‌

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು