ಕರಣ್ ಜೋಹರ್ ನಡೆಸಿಕೊಡುವ'ಕಾಫಿ ವಿತ್ ಕರಣ್' ರಿಯಾಲಿಟಿ ಶೋನಲ್ಲಿ18 ವರ್ಷಗಳ ನಂತರ ಭಾಗವಹಿಸಿರುವಗೌರಿ ಖಾನ್ ತಮ್ಮ ಮಕ್ಕಳಿಗೆ ಡೇಟಿಂಗ್ ಕುರಿತು ಸಲಹೆ ನೀಡಿದ್ದಾರೆ.
ನಟ ಶಾರುಖ್ ಖಾನ್ ಪತ್ನಿಹಾಗೂನಿರ್ಮಾಪಕಿಯೂ ಆಗಿರುವ ಗೌರಿ ಖಾನ್, ಕಾರ್ಯಕ್ರಮದಲ್ಲಿ ಹಲವು ವಿಚಾರಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಶಾರುಖ್ ಜೊತೆಗಿನ ದಾಂಪತ್ಯ ಜೀವನ, ಮಕ್ಕಳಾದ ಆರ್ಯನ್, ಸುಹಾನಾ ಮತ್ತು ಅಬ್ರಹಾಂ ಕುರಿತು ಮಾತನಾಡಿದ್ದಾರೆ.ಡ್ರಗ್ಸ್ ಪ್ರಕರಣದಲ್ಲಿಆರ್ಯನ್ ಬಂಧನಕ್ಕೊಳಗಾಗಿದ್ದ ವಿಚಾರದ ಬಗ್ಗೆಯೂ ಹೇಳಿಕೆ ನೀಡಿದ್ದಾರೆ.
ಕಾರ್ಯಕ್ರಮದ ನಿರೂಪಕ ಕರಣ್ ಜೋಹರ್ ಅವರು ಕೇಳಿದ ರ‍್ಯಾಪಿಡ್ ಫೈರ್ ಪ್ರಶ್ನೆಗಳಿಗೆ ಗೌರಿ ಬೋಲ್ಡ್ ಆಗಿ ಉತ್ತರ ನೀಡಿದ್ದಾರೆ.
'ಡೇಟಿಂಗ್ ಬಗ್ಗೆ ಆರ್ಯನ್‌ಗೆ ಯಾವ ಸಲಹೆ ನೀಡುತ್ತೀರಿ' ಎಂದುಕರಣ್ ಕೇಳಿದ್ದಕ್ಕೆ ಪ್ರತಿಕ್ರಿಯಿಸಿರುವ ಗೌರಿ, 'ನೀನು ಮದುವೆಯಾಗಲು ನಿರ್ಧರಿಸುವವರೆಗೆ ಎಷ್ಟುಹುಡುಗಿಯರೊಂದಿಗೆ ಬೇಕಾದರೂ ಡೇಟ್ ಮಾಡು. ಆ ಮೇಲೆ ಅದಕ್ಕೆಲ್ಲ ಪೂರ್ಣವಿರಾಮ ಹಾಕು' ಎನ್ನುವುದಾಗಿ ಹೇಳಿದ್ದಾರೆ.
On 22nd, all set to spill some piping hot Koffee!
— Gauri Khan (@gaurikhan) September 19, 2022
#HotstarSpecials #KoffeeWithKaranS7, Episode 12 streaming from this Thursday 12am only on Disney+ Hotstar.@DisneyPlusHS@karanjohar @gaurikhan @maheepkapoor @bhavanapandey @apoorvamehta18 @aneeshabaig @jahnvio @Dharmatic_ pic.twitter.com/dpdPHMvZLK
'ಒಂದೇ ಸಲ ಇಬ್ಬರು ಹುಡುಗರೊಂದಿಗೆ ಎಂದಿಗೂ ಡೇಟಿಂಗ್ ಮಾಡಬೇಡ' ಎಂದುಸುಹಾನಾಗೆ ಸಲಹೆ ನೀಡುವುದಾಗಿ ತಿಳಿಸಿದ್ದಾರೆ.
'ಬೇಸರವಾಗಿದ್ದಾಗ ಏನು ಮಾಡುತ್ತೀರಿ?' ಎಂಬ ಪ್ರಶ್ನೆಗೆ, 'ಅಬ್ರಹಾಂ ಜೊತೆ ಸಮಯ ಕಳೆಯುತ್ತೇನೆ' ಎಂದಿದ್ದಾರೆ.
‘ತಮ್ಮ ಕಡೆಗೆ ಶಾರುಖ್ ಖಾನ್ ಗಮನ ಸೆಳೆದುಕೊಳ್ಳಲು ಏನು ಮಾಡುತ್ತೀರಿ?‘ ಎಂದದ್ದಕ್ಕೆ, 'ಶಾರುಖ್ ನನ್ನೊಂದಿಗೆ ಮಾತನಾಡುವಾಗಲೆಲ್ಲಾ, ನನ್ನತ್ತ ಗಮನ ಇರಿಸಿದ್ದಾರೆ ಎಂದೇ ಭಾವಿಸಲು ಬಯಸುತ್ತೇನೆ. ಆದರೆ, ಅವರ ಗಮನ ನನ್ನತ್ತ ಇರುತ್ತದೋ ಇಲ್ಲವೇ ಗೊತ್ತಿಲ್ಲ' ಎಂದು ಪ್ರತಿಕ್ರಿಯಿಸಿದ್ದಾರೆ.
ಗೌರಿ ಅವರೊಂದಿಗೆ ಸಂಜಯ್ ಕಪೂರ್ ಪತ್ನಿ ಮಹೀಪ್ ಕಪೂರ್ ಹಾಗೂನಟಿ ಅನನ್ಯಾ ಪಾಂಡೆ ತಾಯಿ ಭಾವನ ಪಾಂಡೆ ಅವರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.