ಸೋಮವಾರ, ಜನವರಿ 17, 2022
19 °C

ಅಮ್ಮನಾಗುವ ಖುಷಿಯಲ್ಲಿ ನಟಿ ಕಾಜಲ್‌ ಅಗರ್‌ವಾಲ್‌

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಹೈದರಾಬಾದ್: ಹೊಸ ವರ್ಷದ ಆರಂಭದಲ್ಲಿ ನಟಿ ಕಾಜಲ್‌ ಅಗರ್‌ವಾಲ್‌ ಅವರು ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ.

ನಟಿ ಕಾಜಲ್‌ ಅಗರ್‌ವಾಲ್‌ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿ ಇದ್ದಾರೆ. ಈ ವಿಚಾರವನ್ನು ಅವರ ಪತಿ ಉದ್ಯಮಿ ಗೌತಮ್‌ ಕಿಚ್ಲು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕಾಜಲ್‌ ಫೋಟೊವನ್ನು ಹಂಚಿಕೊಂಡಿರುವ ಗೌತಮ್, ’2022ನೇ ವರ್ಷ ನಿಮ್ಮನ್ನು ಎದುರು ನೋಡುತ್ತಿದೆ’ ಎಂದು ಬರೆದುಕೊಂಡಿದ್ದಾರೆ.  

ಸದ್ಯ ಪೋಸ್ಟ್‌ ನೋಡಿರುವ ಅಭಿಮಾನಿಗಳು ದಂಪತಿಗೆ ಶುಭ ಹಾರೈಸಿದ್ದಾರೆ.

ಕಾಜಲ್‌ ಅಗರ್‌ವಾಲ್‌ ಮತ್ತು ಗೌತಮ್‌ ಕಿಚ್ಲು ದಂಪತಿ 2020ರ ಅಕ್ಟೋಬರ್‌ 30ರಂದು ಮುಂಬೈನಲ್ಲಿ ವಿವಾಹವಾಗಿದ್ದರು.

ಪ್ರಸ್ತುತ ‘ಮೆಗಾಸ್ಟಾರ್’ ಚಿರಂಜೀವಿ ಹೀರೊ ಆಗಿರುವ ‘ಆಚಾರ್ಯ’ ಚಿತ್ರದಲ್ಲಿ ಕಾಜಲ್‌ ನಟಿಸುತ್ತಿದ್ದಾರೆ. ಇದನ್ನು ನಿರ್ದೇಶಿಸುತ್ತಿರುವುದು ಕೊರಟಾಲ ಶಿವ. ಶಂಕರ್‌ ನಿರ್ದೇಶನದ ‘ಇಂಡಿಯನ್‌ 2’ ಸಿನಿಮಾಕ್ಕೂ ಅವರೇ ಹೀರೊಯಿನ್. ಇದರಲ್ಲಿ ಕಮಲ ಹಾಸನ್‌ ನಟಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು