ಬುಧವಾರ, ಸೆಪ್ಟೆಂಬರ್ 22, 2021
29 °C

ರಾಜ್‌ ಕುಂದ್ರಾ ಪ್ರಕರಣ: ಪೊಲೀಸರ ಮುಂದೆ ಹಾಜರಾಗದ ಗೆಹನಾ ವಶಿಷ್ಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Raj Kundra PTI Photo

ಮುಂಬೈ (ಪಿಟಿಐ): ಉದ್ಯಮಿ ರಾಜ್‌ ಕುಂದ್ರಾ ಅವರ ಬಂಧನಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಲು ನಟಿ, ಮಾಡೆಲ್‌ ಗೆಹನಾ ವಶಿಷ್ಠ ಅವರು ಇಲ್ಲಿನ ಕ್ರೈಂ ಬ್ರಾಂಚ್‌ ಠಾಣೆಗೆ ಹಾಜರಾಗಿಲ್ಲ.

ಅಶ್ಲೀಲ ಚಿತ್ರಗಳ ನಿರ್ಮಾಣ ಮತ್ತು ಆ್ಯಪ್‌ ಮೂಲಕ ಪ್ರಸಾರ ಮಾಡುತ್ತಿದ್ದದ್ದು, ಸಣ್ಣ ನಟಿಯರಿಗೆ ದೊಡ್ಡ ಅವಕಾಶಗಳ ಆಮಿಷ ನೀಡಿ ‘ಬೋಲ್ಡ್‌’ ದೃಶ್ಯಗಳಲ್ಲಿ ಅಭಿನಯಿಸುವಂತೆ ಒತ್ತಾಯಿಸಲಾಗುತ್ತಿತ್ತು ಎಂದು ಕುಂದ್ರಾ ವಿರುದ್ಧ ಇಬ್ಬರು ಮಹಿಳೆಯರು ಆರೋಪಿಸಿ ದೂರು ದಾಖಲಿಸಿದ್ದರು.

ಕುಂದ್ರಾ ಅವರ ಆ್ಯಪ್‌ಗೆ ಬೇಕಾಗುವ ಮೂರು ಕಾರ್ಯಕ್ರಮಗಳಲ್ಲಿ ಗೆಹನಾ ವಶಿಷ್ಠ ಕೆಲಸ ಮಾಡಿದ್ದರು. ರಾಜ್‌ ಜತೆ ಅವರೂ ಬಂಧನಕ್ಕೊಳಗಾಗಿದ್ದರು. ಬಳಿಕ ಅವರಿಗೆ ಜಾಮೀನು ಸಿಕ್ಕಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೆಡೆ ಮಾತನಾಡಿದ ಅವರು, ‘ರಾಜ್‌ ಅವರ ಅಪ್ಲಿಕೇಷನ್‌ನಲ್ಲಿ ತೋರಿಸಲಾದ ಕಾಮಪ್ರಚೋದಕ ದೃಶ್ಯಗಳು. ಅಶ್ಲೀಲ (Porn) ಎಂದು ಕರೆಯುವುದಕ್ಕಿಂತ ಭಿನ್ನವಾಗಿದೆ’ ಎಂದಿದ್ದರು.

ಈ ಹೇಳಿಕೆ ಮತ್ತು ಒಟ್ಟಾರೆ ಕುಂದ್ರಾ ಅವರ ನಿರ್ಮಾಣಗಳ ಬಗ್ಗೆ ಮಾಹಿತಿ ಪಡೆಯಲು ವಶಿಷ್ಠ ಹಾಗೂ ಮತ್ತಿಬ್ಬರನ್ನು ಮುಂಬೈನ ಕ್ರೈಂ ಬ್ರಾಂಚ್‌ನ ಪ್ರಾಪರ್ಟಿ ಸೆಲ್‌ಗೆ ಭಾನುವಾರ ಹಾಜರಾಗುವಂತೆ ಪೊಲೀಸರು ಸೂಚಿಸಿದ್ದರು. ಆದರೆ, ಅವರು ಯಾರೂ ಹಾಜರಾಗಿಲ್ಲ.

ರಾಜ್‌ ಕುಂದ್ರಾ ಜತೆ ನಿರ್ಮಾಪಕ ರೋಮಾ ಖಾನ್‌, ನಿರ್ದೇಶಕ ತನ್ವೀರ್‌ ಹಶ್ಮಿ ಮತ್ತು ಕುಂದ್ರಾ ಅವರ ವ್ಯವಹಾರ ನೋಡಿಕೊಳ್ಳುತ್ತಿದ್ದ ಉಮೇಶ್‌ ಕಾಮತ್‌ ಅವರು ಈಗ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ. ಪ್ರಕರಣದಲ್ಲಿ ಒಟ್ಟು 11 ಮಂದಿ ಬಂಧನಕ್ಕೊಳಗಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು