ಗುರುವಾರ , ಜೂನ್ 30, 2022
24 °C

ನಾಯಕಿ ಇಲ್ಲದ ‘ಘೋಸ್ಟ್‌’ನಲ್ಲಿ ಶಿವಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಯಕಿ ಇಲ್ಲದ ಚಿತ್ರದಲ್ಲಿ ಶಿವಣ್ಣನಿಗೇನು ಕೆಲಸ?

ಹೌದು, ಇಂಥದ್ದೊಂದು ಕುತೂಹಲ ಉಳಿಸಿಕೊಂಡೇ ಶಿವರಾಜ್‌ಕುಮಾರ್‌ ನಟನೆಯ ‘ಘೋಸ್ಟ್‌’ ಚಿತ್ರ ಸೆಟ್ಟೇರಿದೆ. ಬೀರ್‌ಬಲ್‌, ಓಲ್ಡ್‌ಮಾಂಕ್‌ ಸಿನಿಮಾ ಖ್ಯಾತಿಯ ನಟ, ನಿರ್ದೇಶಕ ಶ್ರೀನಿ ಈ ಚಿತ್ರದ ನಿರ್ದೇಶಿಸುತ್ತಿದ್ದಾರೆ. ಸಂದೇಶ್‌ ನಾಗರಾಜ್‌ ನಿರ್ಮಾಪಕರು.

ಇದು ಆ್ಯಕ್ಷನ್‌ ಪ್ರಕಾರದ ಚಿತ್ರವಂತೆ. ಗೂಢಚಾರಿಕೆ, ಥ್ರಿಲ್ಲರ್‌ ಜಾಡಿನಲ್ಲಿ ಕಥೆ ಸಾಗುತ್ತದೆ. ಇಡೀ ಕಥೆ ನಡೆಯುವುದು ಜೈಲಿನಲ್ಲಿ. ಕಥೆಯೂ ಶ್ರೀನಿ ಅವರದ್ದೇ. ಉಳಿದ ತಾರಾಗಣ ಹೇಗಿದೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.  

ಶಿವರಾಜ್‌ಕುಮಾರ್‌ ಅಭಿನಯದ ಭೈರಾಗಿ ಟೀಸರ್‌ ಇತ್ತಿಚೆಗೆ ಬಿಡುಗಡೆಯಾಗಿದೆ. ಇಲ್ಲಿ ಶಿವರಾಜ್‌ಕುಮಾರ್‌ ಹುಲಿ ವರ್ಣದ ಚಿತ್ತಾರದಲ್ಲಿ ಕಾಣಿಸಿಕೊಂಡದ್ದು ಪ್ರೇಕ್ಷಕರಿಗೆ ನೆನಪಿರಬಹುದು. ತಮ್ಮದೇ ಬ್ಯಾನರ್‌ನ ‘ವೇದ’ ಚಿತ್ರದ ಶೂಟಿಂಗ್‌ನಲ್ಲೂ ಶಿವರಾಜ್‌ಕುಮಾರ್‌ ಬ್ಯುಸಿಯಾಗಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು