ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ ಸಿನಿಮೋತ್ಸವ: ಪನೋರಮಾ ವಿಭಾಗಕ್ಕೆ ಪ್ರವೇಶ ಪಡೆಯಲು ಅರ್ಜಿ ಆಹ್ವಾನ

ಅಕ್ಷರ ಗಾತ್ರ

ಗೋವಾದಲ್ಲಿ ನಡೆಯಲಿರುವ 52ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ(ಐಎಫ್ಎಫ್ಐ) ಇಂಡಿಯನ್ ಪನೋರಮಾ ವಿಭಾಗಕ್ಕೆ ಪ್ರವೇಶ ಪಡೆಯಲು ಆನ್‌ಲೈನ್‌ ಮೂಲಕ ಸಿನೆಮಾಗಳ ಹೆಸರುಗಳನ್ನು ನೋಂದಾಯಿಸಬಹುದಾಗಿದೆ.

'ಇಂಡಿಯನ್ ಪನೋರಮಾ' ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಪ್ರಮುಖ ವಿಭಾಗವಾಗಿದೆ. ಇದರ ಅಡಿಯಲ್ಲಿ ಅತ್ಯುತ್ತಮ ಸಮಕಾಲೀನ ಭಾರತೀಯ ಚಲನಚಿತ್ರಗಳನ್ನು ಆಯ್ಕೆ ಮಾಡಲಾಗುತ್ತದೆ.

ಇದೇ ವರ್ಷದ ನವೆಂಬರ್ 20ರಿಂದ 28ರ ವರೆಗೂ 9 ದಿನಗಳ ಕಾಲ ಗೋವಾ ಚಲನಚಿತ್ರೋತ್ಸವ ನಡೆಯಲಿದೆ.

ಆಗಸ್ಟ್ 12ರ ಒಳಗಾಗಿ ಇಂಡಿಯನ್‌ ಪನೋರಮಾ ವಿಭಾಗಕ್ಕೆ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಆನ್‌ಲೈನ್‌ನಲ್ಲಿ ಸಲ್ಲಿಸಿದ ಅರ್ಜಿಯ ಮುದ್ರಿತ ಪ್ರತಿಯನ್ನು ಆಗಸ್ಟ್ 23ರ ಒಳಗೆ ಅಗತ್ಯ ದಾಖಲೆಗಳೊಂದಿಗೆ ಸ್ವೀಕರಿಸಲಾಗುತ್ತದೆ.

ಗೋವಾ ಸಿನಿಮೋತ್ಸವಕ್ಕೆ ಮೊದಲೇ ಕೋಲ್ಕತ್ತ ಚಿತ್ರೋತ್ಸವ ನಡೆಯುತ್ತದೆ. ಬಳಿಕ ಚೆನ್ನೈ, ಬೆಂಗಳೂರು, ಹೈದರಾಬಾದ್, ಮುಂಬೈ, ದೆಹಲಿ, ಪುಣೆ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳು ನಡೆಯುವುದು ವಾಡಿಕೆ. ಇವೆಲ್ಲಾ ಆಯಾ ರಾಜ್ಯ ಸರ್ಕಾರಗಳು ಸಂಘಟಿಸುವ ಚಿತ್ರೋತ್ಸವಗಳಾಗಿವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವುದು ಮಾತ್ರ ಪಣಜಿ ಚಿತ್ರೋತ್ಸವ. ಇದು ದೇಶದ ಪ್ರತಿಷ್ಠೆಯ ಸಿನಿಮಾ ಉತ್ಸವವೂ ಹೌದು. ಈ ಬಾರಿ ಕೋವಿಡ್–19 ದೇಶದ ಪ್ರಮುಖ ನಗರಗಳಲ್ಲಿ ನಡೆಯುವ ಸಿನಿಮೋತ್ಸವಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.

2004ಕ್ಕಿಂತ ಮೊದಲು ಪ್ರತಿವರ್ಷ ದೇಶದ ಒಂದೊಂದು ಪ್ರಮುಖ ನಗರಗಳಲ್ಲಿ ಸಿನಿಮೋತ್ಸವ ನಡೆಯುತ್ತಿತ್ತು. ಈ ಸಂಚಾರಿ ವ್ಯವಸ್ಥೆಯ ಸಂಘಟನೆಯಲ್ಲಿ ಏರುಪೇರಾಗಿ ಕೆಲವು ವರ್ಷ ಚಿತ್ರೋತ್ಸವವೇ ರದ್ದಾದ ನಿದರ್ಶನಗಳೂ ಉಂಟು. 2004ರಲ್ಲಿ ಕೇಂದ್ರ ಸರ್ಕಾರ ಪಣಜಿಯಲ್ಲಿ ಕಾಯಂ ಆಗಿ ಚಿತ್ರೋತ್ಸವ ನಡೆಸಲು ನಿರ್ಧರಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT