ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Golden Globes 2024: ನೊಲನ್‌ ಅತ್ಯುತ್ತಮ ನಿರ್ದೇಶಕ, ಮರ್ಫಿ ಅತ್ಯುತ್ತಮ ನಟ

‘ಓಪನ್‌ಹೈಮರ್‌’ ಚಿತ್ರಕ್ಕೆ ಐದು ಪ್ರಶಸ್ತಿ
Published 8 ಜನವರಿ 2024, 3:45 IST
Last Updated 8 ಜನವರಿ 2024, 3:45 IST
ಅಕ್ಷರ ಗಾತ್ರ

ವಾಷಿಂಗ್ಟನ್‌: 81ನೇ ವಾರ್ಷಿಕ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ ಪ್ರಕಟವಾಗಿದ್ದು, 'ಓಪನ್‌ಹೈಮರ್‌' ಚಿತ್ರ ಅತ್ಯುತ್ತಮ ಸಿನಿಮಾ ಎನಿಸಿದೆ. ಈ ಚಿತ್ರದ ನಿರ್ದೇಶಕ ಕ್ರಿಸ್ಟೋಫರ್‌ ನೊಲನ್‌ ಅವರಿಗೆ 'ಅತ್ಯುತ್ತಮ ನಿರ್ದೇಶಕ' ಹಾಗೂ ನಟ ಕಿಲಿಯನ್‌ ಮರ್ಫಿ ಅವರಿಗೆ 'ಅತ್ಯುತ್ತಮ ನಟ' ಪ್ರಶಸ್ತಿ ಲಭಿಸಿದೆ.

'ಪೂರ್‌ ಥಿಂಗ್ಸ್‌' ಚಿತ್ರದ ಅಭಿನಯಕ್ಕಾಗಿ ಎಮ್ಮಾ ಸ್ಟೋನ್‌ ಅವರಿಗೆ 'ಅತ್ಯುತ್ತಮ ನಟಿ' ಪ್ರಶಸ್ತಿ ದೊರೆತಿದೆ.

ಟಿವಿ ಸಿನಿಮಾ ವಿಭಾಗದಲ್ಲಿ 'ಬೀಫ್‌' ಚಿತ್ರಕ್ಕೆ ಎರಡು ಪ್ರಶಸ್ತಿಗಳು ಲಭಿಸಿವೆ. ಈ ಸಿನಿಮಾದ ಅಲಿ ವಾಂಗ್‌ ಮತ್ತು ಸ್ಟೀವನ್‌ ಯಿವೌನ್‌ ಕ್ರಮವಾಗಿ 'ಅತ್ಯುತ್ತಮ ನಟಿ' ಮತ್ತು 'ಅತ್ಯುತ್ತಮ ನಟ' ಎನಿಸಿದ್ದಾರೆ.

ಪ್ರಶಸ್ತಿ ಪಟ್ಟಿ
* ಅತ್ಯುತ್ತಮ ನಟ:
ಕಿಲಿಯನ್‌ಮರ್ಫಿ (ಓಪನ್‌ಹೈಮರ್‌)
* ಅತ್ಯುತ್ತಮ ನಟಿ: ಎಮ್ಮಾ ಸ್ಟೋನ್‌ (ಪೂರ್‌ ಥಿಂಗ್ಸ್‌) 
* ಅತ್ಯುತ್ತಮ ಸಹ ನಟ: ರಾಬರ್ಟ್‌ ಡಾವ್ನೇ (ಓಪನ್‌ಹೈಮರ್‌)
* ಅತ್ಯುತ್ತಮ ಸಹ ನಟಿ: ಡವೈನ್‌ ಜಾಯ್‌ ರಾಂಡಾಲ್ಫ್‌ (ದಿ ಹಾಲ್ಡೊವರ್ಸ್‌)
* ಅತ್ಯುತ್ತಮ ಚಿತ್ರ: ಓಪನ್‌ಹೈಮರ್‌
* ಅತ್ಯುತ್ತಮ ನಿರ್ದೇಶಕ: ಕ್ರಿಸ್ಟೋಫರ್‌ ನೊಲನ್‌ (ಓಪನ್‌ಹೈಮರ್‌)
* ಅತ್ಯುತ್ತಮ ಚಿತ್ರಕತೆ: ಜಸ್ಟೀನ್‌ ಟ್ರಿಯೆಟ್‌, ಅರ್ಥರ್‌ ಹರಾರಿ (ಅನಾಟಮಿ ಆಫ್‌ ಎ ಫಾಲ್‌)
* ಅತ್ಯುತ್ತಮ ನಟ (ಟಿವಿ ಸಿನಿಮಾ): ಸ್ಟೀವನ್‌ ಯಿವೌನ್‌ (ಬೀಫ್‌)
* ಅತ್ಯುತ್ತಮ ನಟಿ (ಟಿವಿ ಸಿನಿಮಾ): ಅಲಿ ವಾಂಗ್‌ (ಬೀಫ್‌)
* ಅತ್ಯುತ್ತಮ ನಟ (ಟಿವಿ ಸಿರೀಸ್‌): ಮ್ಯಾಥ್ಯೂ ಮ್ಯಾಕ್ಫೆಡೈನ್‌ (ಸಕ್ಸಸ್ಸನ್‌)
* ಅತ್ಯುತ್ತಮ ನಟಿ (ಟಿವಿ ಸಿರೀಸ್‌): ಎಲಿಜೆಬೆತ್‌ ಡೆಬಿಕ್ಕಿ (ದಿ ಕ್ರೌನ್‌)
* ಅತ್ಯುತ್ತಮ ಹಾಸ್ಯ ನಟ (ಟಿವಿ): ಜೆರೆಮಿ ಅಲೆನ್‌ ವೈಟ್‌ (ದಿ ಬಿಯರ್‌)
* ಅತ್ಯುತ್ತಮ ಹಾಸ್ಯ ನಟಿ (ಟಿವಿ): ಅಯೊ ಎಡೆಬಿರಿ (ದಿ ಬಿಯರ್‌)
* ಅತ್ಯುತ್ತಮ ಆ್ಯನಿಮೇಟೆಡ್‌ ಚಿತ್ರ: ದಿ ಬಾಯ್ ಅಂಡ್ ದಿ ಹೆರಾನ್‌
* ಅತ್ಯುತ್ತಮ ಸಿನಿಮಾ (ಇಂಗ್ಲಿಷ್‌ಯೇತರ): ಅನಾಟಮಿ ಆಫ್‌ ಎ ಫಾಲ್‌ (ಫ್ರಾನ್ಸ್‌)
* ಅತ್ಯುತ್ತಮ ಗೀತೆ: What Was I Made For? (ಬಿಲ್ಲೀ ಎಲಿಷ್‌ ಮತ್ತು ಫಿನ್ನೀಸ್‌ ಒ‘ಕೊನ್ನೆಲ್‌ – ಬಾರ್ಬೀ)‌‌‌

‘ಓಪನ್‌ಹೈಮರ್‌’ ಚಿತ್ರಕ್ಕೆ ಐದು ಪ್ರಶಸ್ತಿ

‘ಓಪನ್‌ಹೈಮರ್‌’ ಚಿತ್ರ ಅತ್ಯುತ್ತಮ ಸಿನಿಮಾ ಎನ್ನುವ ಶ್ರೇಯ ಗಿಟ್ಟಿಸಿಕೊಂಡು ಐದು ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ಅಣುಬಾಂಬ್‌ ಸೃಷ್ಟಿಕರ್ತನ ಜೀವನ ಚರಿತ್ರೆಯನ್ನು ಒಳಗೊಂಡ ‘ಓಪನ್‌ ಹೈಮರ್‌’ ಚಿತ್ರದ ನಿರ್ದೇಶಕ ಕ್ರಿಸ್ಟೋಫರ್‌ ನೋಲನ್‌ ಅವರಿಗೆ ‘ಅತ್ಯುತ್ತಮ ನಿರ್ದೇಶಕ’ ಹಾಗೂ ಈ ಚಿತ್ರದ ನಾಯಕ ಕಿಲಿಯನ್‌ ಮರ್ಫಿ ಅವರಿಗೆ ‘ಅತ್ಯುತ್ತಮ ನಟ’ ಹಾಗೂ ರಾಬರ್ಟ್‌ ಡೌನಿ ಜೂನಿಯರ್‌ ಅವರಿಗೆ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಲಭಿಸಿದೆ.

ಪ್ರಶಸ್ತಿಯ ಒಂಬತ್ತು ವಿಭಾಗಗಳಿಗೆ ನಾಮನಿರ್ದೇಶನಗೊಂಡಿದ್ದ ‘ಬಾರ್ಬಿ’ ಚಿತ್ರವನ್ನು ಹಿಂದಿಕ್ಕಿ, ‘ಪೂರ್‌ ಥಿಂಗ್ಸ್‌’ ಅತ್ಯುತ್ತಮ ಹಾಸ್ಯ ಚಿತ್ರ ಪ್ರಶಸ್ತಿಗೆ ಭಾಜನವಾಗಿದೆ. ಈ ಚಿತ್ರದ ಅಭಿನಯಕ್ಕಾಗಿ ಅಮೆರಿಕದ ನಟಿ ಎಮ್ಮಾ ಸ್ಟೋನ್‌ ಅವರಿಗೆ ‘ಅತ್ಯುತ್ತಮ ನಟಿ’ ಪ್ರಶಸ್ತಿ ದೊರೆತಿದೆ.

‘ಬಾರ್ಬಿ’ಗೆ ಅತ್ಯುತ್ತಮ ಗೀತೆ (ಬಿಲ್ಲೀ ಎಲಿಷ್‌ ಮತ್ತು ಆಕೆಯ ಸಹೋದರ ಫಿನ್ನಿಯಾಸ್‌ ಅವರು ರಾಗ ಸಂಯೋಜನೆ ಮಾಡಿರುವುದು) ಮತ್ತು ಗಲ್ಲಾಪೆಟ್ಟಿಗೆ ಗಳಿಕೆ ವಿಭಾಗಗಳಲ್ಲಿ ಎರಡು ಪ್ರಶಸ್ತಿಗಳು ಮಾತ್ರ ಒಲಿದವು. ಆರಂಭಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT