ಬೆಂಗಳೂರು: ಅನೂಪ್ ಭಂಡಾರಿ ನಿರ್ದೇಶನದ ,ನಟ ಕಿಚ್ಚ ಸುದೀಪ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ವಿಕ್ರಾಂತ್ ರೋಣ’ ಟ್ರೇಲರ್ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಉತ್ತಮ ಗುಣಮಟ್ಟದಲ್ಲಿ ಮೂಡಬಂದಿರುವ ಟ್ರೇಲರ್ನಲ್ಲಿ ಹಲವು ಕುತೂಹಲಕಾರಿ ಅಂಶಗಳು ಗಮನ ಸೆಳೆದಿವೆ. ಈ ಚಿತ್ರ ಜುಲೈ 28ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಹಾಗೂ ಇಂಗ್ಲಿಷ್ನಲ್ಲಿ ಗುರುವಾರ ಟ್ರೇಲರ್ ಬಿಡುಗಡೆಯಾಗಿದ್ದು, ಅಭಿಮಾನಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾಗಿರುವ ಟ್ರೇಲರ್ ಅನ್ನು ಕನ್ನಡದಲ್ಲಿ 72.14 ಲಕ್ಷ, ತೆಲುಗಿನಲ್ಲಿ 35.62 ಲಕ್ಷ, ಹಿಂದಿಯಲ್ಲಿ 27.12 ಲಕ್ಷ, ತಮಿಳಿನಲ್ಲಿ 19.99 ಲಕ್ಷ, ಮಲಯಾಳಂನಲ್ಲಿ 13.38 ಲಕ್ಷ ಹಾಗೂ ಇಂಗ್ಲಿಷ್ನಲ್ಲಿ 46.18 ಲಕ್ಷ ಮಂದಿ ವೀಕ್ಷಿಸಿದ್ದಾರೆ.

ಚಿತ್ರದಲ್ಲಿ ಸುದೀಪ್ ತನಿಖಾ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಅವರ ಪಾತ್ರ ಎಲ್ಲರನ್ನೂ ಸೆಳೆಯುತ್ತಿದೆ. ಸುದೀಪ್ಗೆ ಅನೇಕ ನಟ–ನಟಿಯರು, ತಂತ್ರಜ್ಞರು, ನಿರ್ಮಾಪಕರು ಶುಭ ಕೋರಿದ್ದಾರೆ.

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್, ಈ ಚಿತ್ರದ ಮೂಲಕ ಚಂದನವನಕ್ಕೆ ಹೆಜ್ಜೆ ಇಟ್ಟಿದ್ದು, ರಕೇಲ್ ಡಿಕೋಸ್ಟ ಉರ್ಫ್ ‘ಗಡಂಗ್ ರಕ್ಕಮ್ಮ’ನಾಗಿ ವಿಶೇಷ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಹಿಂದಿ ಹಾಗೂ ಇತರ ಭಾಷೆಗಳಲ್ಲಿ ಪ್ರಮೋಷನ್ಸ್ ಸೇರಿ ಚಿತ್ರದ ಬಜೆಟ್ ₹100 ಕೋಟಿ ದಾಟಿದೆ ಎಂದು ಇತ್ತೀಚೆಗೆ ಚಿತ್ರದ ನಿರ್ಮಾಪಕ ಜಾಕ್ ಮಂಜು ತಿಳಿಸಿದ್ದರು. ಜೀ ಸ್ಟುಡಿಯೋಸ್ ಹಾಗೂ ಕಿಚ್ಚ ಕ್ರಿಯೇಷನ್ಸ್ನಡಿ ಜಾಕ್ ಮಂಜು ಅವರ ಶಾಲಿನಿ ಆರ್ಟ್ಸ್ ಈ ಚಿತ್ರವನ್ನು ವಿತರಣೆ ಮಾಡಲಿದೆ. ಚಿತ್ರಕ್ಕೆ ಬಿ.ಅಜನೀಶ್ ಲೋಕನಾಥ್ ಸಂಗೀತವಿದೆ.

ನಿರೂಪ್ ಭಂಡಾರಿ ಹಾಗೂ ನೀತಾ ಅಶೋಕ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಚಿತ್ರವು ‘3ಡಿ’ ಯಲ್ಲಿ ತೆರೆಕಾಣಲಿದೆ. ಸ್ವತಃ ಸುದೀಪ್ ಅವರೇ ಕನ್ನಡದ ಜೊತೆಗೆ, ಹಿಂದಿ, ತಮಿಳು, ತೆಲುಗು ಹಾಗೂ ಇಂಗ್ಲಿಷ್ನ ಡಬ್ಬಿಂಗ್ ಮಾಡಿದ್ದಾರೆ.

ಚಿತ್ರದ ‘ರ.. ರ. ರಕ್ಕಮ್ಮ’ ಹಾಡು ಈಗಾಗಲೇ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇವನ್ನೂ ಓದಿ...

ಥೈಲ್ಯಾಂಡ್ನಲ್ಲಿ ನಯನತಾರಾ– ವಿಘ್ನೇಶ್ ಹನಿಮೂನ್: ಮತ್ತೊಂದು ಫೋಟೊ ವೈರಲ್

ನಟಿ ರಾಕುಲ್ ಪ್ರೀತ್ ಸಖತ್ ಡ್ಯಾನ್ಸ್: ಗೆಳೆಯ ಬಗ್ನಾನಿ ಪ್ರತಿಕ್ರಿಯೆ ಹೀಗಿತ್ತು?

ಕೋಸ್ಟರಿಕಾ ಪ್ರವಾಸದಲ್ಲಿ ಸೂರ್ಯ –ಜ್ಯೋತಿಕಾ ದಂಪತಿ: ವಿಡಿಯೊ ವೈರಲ್

ಅಪ್ಪನಾದ ವಿನಯ್ ಕುಮಾರ್; ಹೆಣ್ಣು ಮಗುವಿಗೆ ಜನ್ಮ ನೀಡಿದ ರಿಚಾ ಸಿಂಗ್

ಶರದ್ ಪವಾರ್ಗೆ ಅವಹೇಳನ ಮಾಡಿದ್ದ ಮರಾಠಿ ನಟಿ ಕೇತಕಿ ಚಿತಳೆ ಜೈಲಿನಿಂದ ಬಿಡುಗಡೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.