ವಿಜಯ್ ರಾಘವೇಂದ್ರ, ಶ್ರುತಿ ಪ್ರಕಾಶ್, ಭಾವನಾರಾವ್ ಅಭಿನಯದ ‘ಗ್ರೇ ಗೇಮ್ಸ್’ ಟೀಸರ್‌ನಲ್ಲಿ ಸದ್ದು ಮಾಡಿದೆ. ಇದೊಂದು ಕೌಟುಂಬಿಕ ಕಥನ, ಥ್ರಿಲ್ಲರ್ ಅಂಶಗಳನ್ನು ಹೊಂದಿದೆ. ಸತ್ಯ ಮತ್ತು ಸುಳ್ಳಿನ ನಡುವಿನ ಗೆರೆಗಳನ್ನು ನಿರಂತರ ಬದಲಾವಣೆಗೆ ಒಳಪಡಿಸುತ್ತದೆ ಈ ಕಥೆ ಎಂದಿದೆ ಚಿತ್ರತಂಡ. ‘ಲೆಟ್ ದ ಗೇಮ್ ಬಿಗಿನ್ಸ್’ ಎನ್ನುವುದು ಚಿತ್ರದ ಅಡಿಬರಹ.
ಆನ್‌ಲೈನ್ ಗೇಮಿಂಗ್ ಗೆ ಸಂಬಂಧಿಸಿದ ಅಪರಾಧಗಳ ವಿಷಯಗಳ ಸುತ್ತ ಈ ಕಥೆಯಿದೆ. ವಿಜಯ್ ರಾಘವೇಂದ್ರ (ಮನಃಶ್ಶಾಸ್ತ್ರಜ್ಞ), ಭಾವನಾ ರಾವ್ (ಪೊಲೀಸ್ ಅಧಿಕಾರಿ), ಮತ್ತು ಶ್ರುತಿ ಪ್ರಕಾಶ್ (ಚಿತ್ರನಟಿ)ಯಾಗಿ ಪಾತ್ರಗಳನ್ನು ನಿರ್ವಹಿಸಿದ್ದಾರೆ, ಹೊಸ ಪ್ರತಿಭೆ ಜೈ ಇಲ್ಲಿ ಗೇಮರ್ ಪಾತ್ರವನ್ನು ನಿರ್ವಹಿಸಿದ್ದಾರೆ. ಅಪರ್ಣಾ, ರವಿ ಭಟ್ ಕೂಡಾ ತಾರಾಗಣದಲ್ಲಿದ್ದಾರೆ.
ತಂತ್ರಜ್ಞಾನ ಯುಗದಲ್ಲಿ ನಮ್ಮ ಮೇಲಾಗುವ ಮಾನಸಿಕ ಒತ್ತಡ ಸಂಬಂಧಿಸಿ ಚಿತ್ರದ ಕಥೆಯಿದೆ. ವಾಸ್ತವ ಮತ್ತು ವರ್ಚುವಲ್ ರಿಯಾಲಿಟಿ ಲೋಕದ ನಡುವಿನ ಸಂಗತಿಗಳನ್ನು ಚಿತ್ರಿಸಿದ್ದೇವೆ. ಮೂರು ಹಾಡುಗಳು ಮತ್ತು ಹೊಸ ಕಥಾವಸ್ತುವಿನ ಜೊತೆಗೆ ಭಾವನಾತ್ಮಕ ತಿರುವುಗಳು ಚಿತ್ರದಲ್ಲಿವೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಗಂಗಾಧರ ಸಾಲಿಮಠ ಈ ಚಿತ್ರದ ನಿರ್ದೇಶಕರು. ವರುಣ ಡಿ.ಕೆ. ಛಾಯಾಗ್ರಹಣವಿದೆ. ಆನಂದ ಎಚ್. ಮುಗದ್ ನಿರ್ಮಾಪಕರು. ಸತೀಶ ಗ್ರಾಮಪುರೋಹಿತ, ಅರವಿಂದ ಜೋಶಿ, ಡೋಲೇಶ್ವರ್ ರಾಜ್ ಸುಂಕು ಸಹ ನಿರ್ಮಾಪಕರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.