ಬೆಂಗಳೂರು: ಜೀ ಪವರ್ ಚಾನೆಲ್ ಪ್ರಸಾರವಾಗುತ್ತಿದ್ದ, ಅಕುಲ್ ಬಾಲಾಜಿ ನಡೆಸಿಕೊಡುತ್ತಿದ್ದ 'ಹಳ್ಳಿ ಪವರ್' ರಿಯಾಲಿಟಿ ಶೋ ಅಂತಿಮ ಘಟ್ಟ ತಲುಪಿದೆ.

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಜೀ ಪವರ್, ‘ ಈ ಕಾರ್ಯಕ್ರಮದಫಿನಾಲೆ ಸಂಚಿಕೆಗಳು ಡಿಸೆಂಬರ್27ಮತ್ತು28 ರಂದು ರಾತ್ರಿ 8:30 ರಿಂದ 10:30 ಗಂಟೆಯವರೆಗೆ ಜೀ ಪವರ್ನಲ್ಲಿ ಪ್ರಸಾರವಾಗಲಿದೆ. 'ಹಳ್ಳಿ ಪವರ್' ಸೀಸನ್1ರ ವಿಜೇತೆ ಯಾರು ಎಂಬ ವೀಕ್ಷಕರ ಪ್ರಶ್ನೆಗೆ ಉತ್ತರ ಸಿಗಲಿದೆ.
.ಸಿನಿ ತಾರೆಯರ ಕ್ರಿಸ್ಮಸ್ ಸಂಭ್ರಮ: ಇಲ್ಲಿವೆ ಫೋಟೊಗಳು.
'ಹಳ್ಳಿ ಪವರ್' ಒಂದು ವಿಭಿನ್ನ ಶೋ ಆಗಿದ್ದು, ನಗರದಲ್ಲಿ ಬೆಳೆದ ಯುವತಿಯರು ಸಿಟಿ ಜೀವನ ತ್ಯಜಿಸಿ ಹಳ್ಳಿ ಬದುಕು ರೂಢಿಸಿಕೊಳ್ಳಬೇಕಿತ್ತು. ಇಡೀ ಸೀಸನ್ನಲ್ಲಿ ಸ್ಪರ್ಧಿಗಳು ಹಳ್ಳಿ ಜೀವನದ ದಿನನಿತ್ಯದ ಕೆಲಸ ಹಾಗೂ  ಟಾಸ್ಕ್ಗಳನ್ನು ಮಾಡಿ ಅಂಕ ಗಳಿಸುವುದು ಈ ಕಾರ್ಯಕ್ರಮದ ನಿಯಮ ಆಗಿತ್ತು. ವ್ಯವಸಾಯ, ಜಾನುವಾರುಗಳ ಪೋಷಣೆ ಸೇರಿದಂತೆ ಹಳ್ಳಿ ಜನರು ಮಾಡುವ ಪ್ರತಿಯೊಂದು ಕೆಲಸವನ್ನು ಟಾಸ್ಕ್ ರೂಪದಲ್ಲಿ 'ಹಳ್ಳಿ ಪವರ್' ಸ್ಪರ್ಧಿಗಳಿಗೆ ನೀಡಲಾಗಿತ್ತು.

ಈ ರಿಯಾಲಿಟಿ ಶೋ ಉತ್ತರ ಕರ್ನಾಟಕದ ಸಂಗೊಳ್ಳಿಯಲ್ಲಿ ನಡೆದಿದ್ದು, ಹಳ್ಳಿ ಸೊಗಡು, ಅಕುಲ್ ಬಾಲಾಜಿ ಅವರ ನಿರೂಪಣೆ, ಸ್ಪರ್ಧಿಗಳ ಛಲವೇ ಈ ಕಾರ್ಯಕ್ರಮದ ಗೆಲುವಿಗೆ ಕಾರಣವಾಗಿದೆ. 'ಹಳ್ಳಿ ಪವರ್'ನಲ್ಲಿ ರಗಡ್ ರಶ್ಮಿ, ಸಕ್ಕತ್ ಸೋನಿಯಾ, ಘಾಟಿ ಗಾನವಿ, ಮಿಲ್ಕಿ ಬ್ಯೂಟಿ ಮೋನಿಷಾ ಹಾಗೂ ಮಣ್ಣಿನ ಮಗಳು ಫರೀನ್ ಅವರು ಫೈನಲಿಸ್ಟ್ಗಳಾಗಿ ಹೊರಹೊಮ್ಮಿದ್ದಾರೆ. ಸೀಸನ್1ರ ಕಿರೀಟವನ್ನು ಯಾರು ಮುಡಿಗೇರಿಸಿಕೊಳ್ಳಲಿದ್ದಾರೆ ಎಂಬುದಕ್ಕೆ ಉತ್ತರ ಇದೆ ಶನಿವಾರ ಮತ್ತು ಭಾನುವಾರ ದೊರೆಯಲಿದೆ. ಇನ್ನು ಫಿನಾಲೆ ಸಂಚಿಕೆಗಳು ಭಾವನಾತ್ಮಕ, ರೋಚಕ ಕ್ಷಣಗಳನ್ನು ಹೊಂದಿದ್ದು ವೀಕ್ಷಕರಿಗೆ ಮನರಂಜನೆ ನೀಡಲಿದೆ ಎಂದು ಜೀ ಪವರ್ ಹೇಳಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.