ಸೋಮವಾರ, ಜನವರಿ 27, 2020
28 °C

ರಾಜಾಹುಲಿಗೆ ರ‍್ಯಾಪಿಡ್ ಫೈರ್ ಪ್ರಶ್ನೆ: ಜೊತೆಯಲಿ ಜೊತೆಜೊತೆಯಲಿ ಯಶ್‌ ಇಷ್ಟದ ಹಾಡು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಕಿಂಗ್‌ ಸ್ಟಾರ್ ಯಶ್‌ 34ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರು 5 ರ‍್ಯಾಪಿಡ್ ಫೈರ್ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಪ್ರಜಾವಾಣಿ ವರದಿಗಾರ್ತಿ ನೀನಾ ಜಾರ್ಜ್‌ ಅವರು ಯಶ್‌ ಅವರಿಗೆ ಕೇಳಿದ ರ‍್ಯಾಪಿಡ್ ಫೈರ್‌ ಪ್ರಶ್ನೆಗಳು ಇವು...

1) ಕನ್ನಡದಲ್ಲಿ ಸ್ಫೂರ್ತಿ ನೀಡುವಂತಹ ಒಬ್ಬ ನಿರ್ದೇಶಕ?

ಯಶ್‌: ಸಾಕಷ್ಟು ಜನರಿದ್ದಾರೆ, ದುನಿಯಾ ಸೂರಿ ಉತ್ತಮ ತಂತ್ರಜ್ಞ

2) ಕೋಪ ಬಂದಾಗ ತಕ್ಷಣ ನೆನಪಾಗುವ ಒಂದು ಡೈಲಾಗ್‌

ಯಶ್‌: ಸಂದರ್ಭಕ್ಕ ತಕ್ಕಂತೆ, ಆದರೆ 'ಥಿಂಕ್‌ ಯುವರ್ ಬ್ಯಾಡ್‌, ಐ ಆ್ಯಮ್‌ ಯುವರ್‌ ಡ್ಯಾಡ್‌' ಇದು ಒಂದು ಉತ್ತಮ ಡೈಲಾಗ್

3) ಮನಸ್ಸಿನಲ್ಲಿ ಮನೆ ಮಾಡಿರುವ ಒಂದು ಹಾಡು?

ಯಶ್‌: ಗೀತಾ ಚಿತ್ರದ 'ಜೊತೆಯಲಿ ಜೊತೆಜೊತೆಯಲಿ' ಸಾಂಗ್‌

4) ನಮಗಾಗಿ ಒಂದು ಸಾಲು ಹಾಡಿ..

ಯಶ್‌: 'ಜೊತೆಯಲಿ ಜೊತೆಜೊತೆಯಲಿ ಇರುವೆನು ಹೀಗೆ ಎಂದು..ಹೊಸ ಹರುಷವ ತರುವೆನು ಇನ್ನು ಎಂದು'...

5) ಒಂದು ರ‍್ಯಾಪ್‌ ಡೈಲಾಗ್‌

ಯಶ್‌: 'ಅಣ್ತಮ್ಮ, ಇಲ್ಲಿ ಯಾರು ಹೀರೋಗಳನ್ನು ಹುಟ್‌ಹಾಕಲ್ಲ. ನಮಗ್‌ನಾವೇ ಹೀರೋ ಆಗಬೇಕು'...

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು