ಶುಕ್ರವಾರ, 13 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಮೋದ್ ಶೆಟ್ಟಿ ನಾಯಕನಾಗಿರುವ ‘ಲಾಫಿಂಗ್ ಬುದ್ಧ’ ಸಿನಿಮಾದ ಟ್ರೇಲರ್ ಹೇಗಿದೆ?

Published 16 ಆಗಸ್ಟ್ 2024, 0:16 IST
Last Updated 16 ಆಗಸ್ಟ್ 2024, 0:16 IST
ಅಕ್ಷರ ಗಾತ್ರ

ನಟ ರಿಷಬ್ ಶೆಟ್ಟಿ ನಿರ್ಮಿಸಿ, ಪ್ರಮೋದ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ‘ಲಾಫಿಂಗ್ ಬುದ್ಧ’ ಚಿತ್ರದ ಟ್ರೇಲರ್‌ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಪೊಲೀಸ್‌ ಕಾನ್‌ಸ್ಟೇಬಲ್‌ ಕಥೆ ಹೊಂದಿರುವ ಚಿತ್ರ ಆಗಸ್ಟ್‌ 30ರಂದು ತೆರೆಗೆ ಬರಲಿದೆ. 

ಪೊಲೀಸ್ ಕಾನ್‌ಸ್ಟೇಬಲ್‌ ಗೋವರ್ಧನನಾಗಿ ಪ್ರಮೋದ್ ಶೆಟ್ಟಿ ನಟಿಸಿದ್ದಾರೆ. ತನ್ನ ದಢೂತಿ ದೇಹದಿಂದ ತಮಾಷೆಗೆ ಒಳಗಾಗುವ ಗೋವರ್ಧನ, ಹಿರಿಯ ಅಧಿಕಾರಿಗಳಿಂದ ಟೀಕೆ, ನಿಂದನೆಗೆ ಗುರಿಯಾಗುತ್ತಾನೆ. ಬಳಿಕ ದೇಹ ಕರಗಿಸಲು ನಡೆಸುವ ಕಸರತ್ತೇ ಚಿತ್ರಕಥೆ ಎಂಬುದು ಟ್ರೇಲರ್‌ನಿಂದ ಗೊತ್ತಾಗುತ್ತಿದೆ. 

ಚಿತ್ರಕ್ಕೆ ಭರತ್ ರಾಜ್ ನಿರ್ದೇಶನವಿದೆ. ‘ಪೊಲೀಸ್ ಕುಟುಂಬ ಹಾಗೂ ಅವರ ಭಾವನೆಗಳ ಸುತ್ತ ಈ ಸಿನಿಮಾದ ಕಥೆ ಸಾಗುತ್ತದೆ. ನಾನೂ ಈ ಸಿನಿಮಾದಲ್ಲಿ ನಟಿಸಬೇಕಿತ್ತು. ಆದರೆ ‘ಕಾಂತಾರ’ ಸಿನಿಮಾದ ಚಿತ್ರೀಕರಣದ ಕಾರಣದಿಂದ ಹಿಂದಕ್ಕೆ ಸರಿದೆ. ನನ್ನ ಆ ಪಾತ್ರದ ಜಾಗಕ್ಕೆ ದಿಗಂತ್‌ ಅವರು ಸೇರ್ಪಡೆಯಾದರು’ ಎಂದಿದ್ದರು ನಿರ್ಮಾಪಕ ರಿಷಬ್‌ ಶೆಟ್ಟಿ.

ತೇಜು ಬೆಳವಾಡಿ ‘ಸತ್ಯವತಿ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿಗಂತ್ ಕೂಡ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ಭದ್ರಾವತಿ ಹಾಗೂ ಸುತ್ತಮುತ್ತಲಿನ ಸ್ಥಳದಲ್ಲೇ ಹೆಚ್ಚು ಚಿತ್ರೀಕರಣ ನಡೆದಿದೆ‌. ಕೆ.ಎಸ್ ಚಂದ್ರಶೇಖರ್ ಅವರ ಛಾಯಾಚಿತ್ರಗ್ರಹಣ, ಕೆ.ಎಂ.ಪ್ರಕಾಶ್ ಅವರ ಸಂಕಲನ‌ ಈ ಚಿತ್ರಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT