ಮುಂಬೈ: ಕೊರೊನಾ ವೈರಸ್ ಹಾವಳಿಗೆ ಇಡೀ ಜಗತ್ತೆ ಬೆಸ್ತು ಬಿದ್ದುರುವಾಗ ಈ ಮಾಹಾಮಾರಿ ವೈರಸ್ ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ಅವರ ವಿಚ್ಛೇದಿತ ಪತ್ನಿ ಸೂಸಾನ್ಖಾನ್ ಅವರನ್ನು ಜೊತೆಗೂಡಿಸಿದೆ.

ಹೌದು, ಸೂಸಾನ್ಖಾನ್ ಅವರು ಕೆಲ ದಿನಗಳ ಹಿಂದಷ್ಟೆ ಹೃತಿಕ್ ರೋಷನ್ ಮನೆಗೆ ಬಂದು ವಾಸ ಮಾಡುತ್ತಿದ್ದಾರೆ. ಈ ಬಗ್ಗೆ ಹೃತಿಕ್ ಅವರೇ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ವೊಂದನ್ನು ಹಾಕಿದ್ದಾರೆ.

ಕೊರೊನಾ ದಾಳಿಗೆ ಇಡೀ ದೇಶವೇ ಲಾಕ್ಡೌನ್ ಆಗಿರುವುದರಿಂದ ಸೂಸಾನ್ ಮಕ್ಕಳ ಜೊತೆ ಕಾಲ ಕಳೆಯಲು ಹೃತಿಕ್ ಮನೆಗೆ ಬಂದಿದ್ದಾರೆ. ಈ ದಂಪತಿಗೆ ರೆಹಾನ್ ಮತ್ತು ರಿದಾನ್ ಎಂಬ ಇಬ್ಬರು ಪುತ್ರರಿದ್ದಾರೆ. ಇವರಿಬ್ಬರೂಈಗಲೂಮಕ್ಕಳಿಗೆತಂದೆ-ತಾಯಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ದೇಶ ಲಾಕ್ಡೌನ್ನಲ್ಲಿ ಇರುವುದು ಹೇಗೆ ಎಂದು ಅಭ್ಯಾಸ ಮಾಡಿಕೊಳ್ಳುತ್ತಿರುವ ವೇಳೆಯಲ್ಲಿ ಮಕ್ಕಳು ನಮ್ಮಿಂದ ದೂರವಿದ್ದರೆ ಅದನ್ನು ಯಾವ ಪೋಷಕರು ಸಹಿಸಿಕೊಳ್ಳುವುದಿಲ್ಲ. ಕೊರೊನಾ ತಡೆಗಟ್ಟಲು ಇಡೀ ವಿಶ್ವ ಒಟ್ಟಾಗಿರುವುದನ್ನು ನೋಡಿದರೆ ಹೃದಯತುಂಬಿ ಬರುತ್ತದೆ. ನನ್ನ ಮಾಜಿ ಪತ್ನಿ ಸೂಸಾನ್ ಖಾನ್ ಮಕ್ಕಳಿಗಾಗಿ ಮನೆಗೆ ಬಂದಿದ್ದಾಳೆ. ಮಕ್ಕಳಿಗೂ ಅಪ್ಪ -ಅಮ್ಮನ ಪ್ರೀತಿ ಸಿಕ್ಕಿದೆ. ನನ್ನಅರ್ಥಮಾಡಿಕೊಂಡಿದ್ದಕ್ಕೆ, ಪ್ರೋತ್ಸಾಹ ನೀಡಿದ್ದಕ್ಕೆ ಸೂಸನ್ಗೆ ಧನ್ಯವಾದಗಳು" ಎಂದು ಹೃತಿಕ್ ಬರೆದುಕೊಂಡಿದ್ದಾರೆ.

ಬಾಲಿವುಡ್ನಲ್ಲಿ ಡಾನ್ಸ್ಗೂ ಹೃತಿಕ್ ಹೆಸರುವಾಸಿಯಾಗಿದ್ದಾರೆ. ಇತ್ತೀಚಿನ ಅವರ ವಾರ್ ಸಿನಿಮಾ ದೊಡ್ಡಮಟ್ಟದಲ್ಲಿ ಹೆಸರು ತಂದುಕೊಟ್ಟಿದೆ. ಇದೀಗ ವಾರ್–2 ಸಿನಿಮಾದಲ್ಲಿ ನಟಿಸಲು ಹೃತಿಕ್ ತಯಾರಿ ನಡೆಸಿದ್ದಾರೆ.

ಸೂಸಾನ್ ಖಾನ್ ಅವರನ್ನು ಇಷ್ಟಪಟ್ಟು ಮದುವೆಯಾಗಿದ್ದರು. ಆದರೆ 14 ವರ್ಷಗಳ ದಾಂಪತ್ಯ 2014ರಲ್ಲಿ ಮುರಿದುಬಿತ್ತು. ವಿಚ್ಛೇದನದ ನಂತರವೂ ಸೂಸಾನ್ ಅವರೊಡನೆ ಹೃತಿಕ್ಗೆಳೆತನ ಉಳಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.