ಬೆಂಗಳೂರು: ರೇಣುಕಾಸ್ವಾಮಿಯಿಂದ ನನಗೆ ಯಾವುದೇ ಅಶ್ಲೀಲ ಸಂದೇಶ ಬಂದಿಲ್ಲ. ಚಾರ್ಜ್‌ಶೀಟ್‌ನಲ್ಲಿ ಈ ಅಂಶವಿದೆ ಎಂಬ ಸುದ್ದಿ ಹರಿದಾಡಿದೆ. ಆದರೆ ಈ ಕುರಿತು ನನಗೆ ಮಾಹಿತಿ ಇಲ್ಲ ಎಂದು ನಟಿ ರಾಗಿಣಿ ಹೇಳಿದರು.
‘ಸಾಮಾನ್ಯವಾಗಿ ಸೆಲೆಬ್ರೆಟಿಗಳ ಸಾಮಾಜಿಕ ಜಾಲತಾಣಗಳನ್ನು ಏಜೆನ್ಸಿಗಳು ನಿಭಾಯಿಸುತ್ತವೆ. ಹೀಗಾಗಿ ಅಲ್ಲಿ ಹಾಕಿದ ಸಂದೇಶಗಳು ನಮ್ಮವರೆಗೆ ತಲುಪುವುದೇ ಇಲ್ಲ. ತೀರ ಕ್ಷುಲ್ಲಕ ವಿಚಾರವಿದು. ಎಲ್ಲದಕ್ಕೂ ನಮ್ಮ ಹೆಸರು ತಳುಕು ಹಾಕುವುದು ಹಾಸ್ಯಾಸ್ಪದ ಎನಿಸುತ್ತದೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.