ಸೋಮವಾರ, ಮೇ 23, 2022
30 °C

’ಆದಿಪುರುಷ’ ಪ್ರಭಾಸ್‌ನನ್ನು ಮದುವೆಯಾಗುವೆ: ನಟಿ ಕೃತಿ ಸನೊನ್‌

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮುಂಬೈ: ಸೌತ್‌ ಸ್ಟಾರ್‌ ಹಾಗೂ 'ಬಾಹುಬಲಿ’ ಖ್ಯಾತಿಯ ನಟ ಪ್ರಭಾಸ್‌ನನ್ನು ಮದುವೆಯಾಗುವುದಾಗಿ ಬಾಲಿವುಡ್‌ ಚೆಲುವೆ ಕೃತಿ ಸನೊನ್‌ ಹೇಳಿದ್ದಾರೆ.

ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿಈ ಮಾತು ಹೇಳಿದ್ದಾರೆ. ನಿರೂಪಕಿ ಕೇಳಿದ ರ‍್ಯಾಪಿಡ್‌ ಫೈರ್‌ ಪ್ರಶ್ನೆಗಳಿಗೆ ಉತ್ತರಿಸುತ್ತ ಪ್ರಭಾಸ್‌ನನ್ನು ಮದುವೆಯಾಗುವುದಾಗಿ ಹೇಳಿದ್ದಾರೆ.

ನೀವು ಯಾರ ಜತೆ ಫ್ಲರ್ಟ್‌ ಮಾಡ್ತೀರಾ? ಯಾರ ಜತೆ ಡೇಟಿಂಗ್‌ ಮಾಡ್ತೀರಾ? ಯಾರನ್ನು ಮದುವೆಯಾಗುತ್ತೀರಾ? ಎಂಬ ಪ್ರಶ್ನೆಗಳಿಗೆ ಕೃತಿ ತಮಾಷೆಯಾಗಿ ಉತ್ತರಿಸಿದ್ದಾರೆ.

ಕಾರ್ತಿಕ್‌ ಆರ್ಯನ್‌ ಜೊತೆ ಫ್ಲರ್ಟ್‌, ಟೈಗರ್‌ ಶ್ರಾಫ್ ಜತೆ ಡೇಟಿಂಗ್‌ ಮಾಡಿ ಪ್ರಭಾಸ್‌ನನ್ನು ಮದುವೆಯಾಗುವುದಾಗಿ ಹೇಳಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಪ್ರಭಾಸ್‌ ಅಭಿಮಾನಿಗಳು 'ಮುದ್ದಾದ ಜೋಡಿ' ಎಂಬ ಕಮೆಂಟ್‌ಗಳನ್ನು ಹಾಕುತ್ತಿದ್ದಾರೆ. 

ಸದ್ಯ ಕೃತಿ ಸನೊನ್‌ ಬಹು ನಿರೀಕ್ಷಿತ ‘ಆದಿಪುರುಷ್‌’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರಲ್ಲಿ ಪ್ರಭಾಸ್‌ಗೆ ನಾಯಕಿಯಾಗಿದ್ದಾರೆ. ಪ್ಯಾನ್‌ ಇಂಡಿಯಾ ಸಿನಿಮಾವಾಗಿರುವ ಆದಿಪುರುಷ್‌ ಹಿಂದೂ ಮಹಾಕಾವ್ಯ ರಾಮಾಯಣ ಆಧಾರಿತವಾಗಿದೆ.

ಇದನ್ನೂ ಓದಿ: ‘ಮಿಮಿ’ ಮುಗಿಯುತ್ತಲೇ 15 ಕೆಜಿ ತೂಕ ಕಳೆದುಕೊಂಡ ಮಮ್ಮಿ ಕೃತಿ ಸನೊನ್!

ಈ ಸಿನಿಮಾಗೆ ಖ್ಯಾತ ನಿರ್ದೇಶಕ ಓಂ ರಾವತ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಬಹು ತಾರಾಗಣದ ಈ ಚಿತ್ರದಲ್ಲಿ ಸೈಫ್ ಅಲಿ ಖಾನ್ ಲಂಕೇಶನಾಗಿ ಕಾಣಿಸಿಕೊಳ್ಳಲಿದ್ದಾರೆ. ಅನೇಕ ಹಾಲಿವುಡ್‌ ತಂತ್ರಜ್ಞರು ಇದರಲ್ಲಿ ಕೆಲಸ ಮಾಡಲಿದ್ದಾರೆ.

ಟಿ–ಸಿರೀಸ್ ಸಂಸ್ಥೆ ಸುಮಾರು ₹ 500 ಕೋಟಿ ವೆಚ್ಚದಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಆದಿಪುರುಷ್‌ ಚಿತ್ರವು ತೆಲುಗು, ತಮಿಳು, ಕನ್ನಡ, ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಲಿದೆ. 

ಇದನ್ನೂ ಓದಿ: ಆದಿಪುರುಷ್‌’ನಲ್ಲಿ ಪ್ರಭಾಸ್‌ಗೆ ತಾಯಿಯಾಗಲಿದ್ದಾರಾ ಕನಸಿನ ರಾಣಿ ಹೇಮಮಾಲಿನಿ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು