ಭಾನುವಾರ, ಅಕ್ಟೋಬರ್ 24, 2021
28 °C

ನಿಮ್ಮ ದೇಹಕ್ಕೆ ಧನ್ಯವಾದ ಹೇಳಿ: ಇಲಿಯಾನಾ ಡಿಕ್ರೂಜ್

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

Ileana DCruz Instagram Post

ಬೆಂಗಳೂರು: ನಟಿ ಇಲಿಯಾನಾ ಡಿಕ್ರೂಜ್ ನಟಿಸಿರುವುದು ಕಡಿಮೆ ಸಂಖ್ಯೆಯ ಚಿತ್ರಗಳಾದರೂ ಅವರ ಅಭಿಮಾನಿಗಳ ಬಳಗ ದೊಡ್ಡದಿದೆ.

ಇಲಿಯಾನಾ ಕೂಡ ಅಭಿಮಾನಿಗಳ ಜತೆ ಸಾಮಾಜಿಕ ತಾಣಗಳ ಮೂಲಕ ಸಂಪರ್ಕದಲ್ಲಿದ್ದು, ವಿವಿಧ ಪೋಸ್ಟ್‌ಗಳನ್ನು ಹಾಕುತ್ತಿರುತ್ತಾರೆ.

ಈ ಬಾರಿ ಇಲಿಯಾನಾ ಫೋಟೊ ಒಂದನ್ನು ಪೋಸ್ಟ್ ಮಾಡಿದ್ದು, ನಾವೆಲ್ಲರೂ ನಮ್ಮ ದೇಹದ ಬಗ್ಗೆ ಅಭಿಮಾನ ಹೊಂದಿರಬೇಕು, ಗೌರವ ಇರಬೇಕು. ನಮ್ಮ ದೇಹವನ್ನು ಪ್ರೀತಿಸಬೇಕು ಮತ್ತು ಸರಿಯಾದ ರೀತಿಯಲ್ಲಿ ಆರೈಕೆ ಮಾಡಬೇಕು ಎಂದು ಹೇಳಿದ್ದಾರೆ.

ನಮ್ಮ ಜೀವನದ ವಿವಿಧ ಸಂದರ್ಭದಲ್ಲಿ, ಹಲವು ಬದಲಾವಣೆಗಳಿಗೆ ನಾವು ತೆರೆದುಕೊಳ್ಳುತ್ತೇವೆ, ವೃತ್ತಿ ಜೀವನದ ಮಧ್ಯೆ ಖಾಸಗಿ ಬದುಕಿಗೆ ನಾವು ಸಮಯ ನೀಡಬೇಕು, ದೇಹಕ್ಕೆ ವಿಶ್ರಾಂತಿ ನೀಡುವುದು ಕೂಡ ಅಷ್ಟೇ ಅಗತ್ಯವಾಗಿದೆ ಎಂದು ಇಲಿಯಾನಾ ಹೇಳಿದ್ದಾರೆ.

ಇಲಿಯಾನಾ ಪೋಸ್ಟ್‌ಗೆ ಅಭಿಮಾನಿಗಳು ಮತ್ತು ಬಾಲಿವುಡ್ ಮಂದಿ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು