ಬುಧವಾರ, ಜನವರಿ 29, 2020
26 °C

ಜ. 24ಕ್ಕೆ ‘ಇಂಡಿಯಾ ವರ್ಸಸ್‌ ಇಂಗ್ಲೆಂಡ್‌’ ಸಿನಿಮಾ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಾಗತಿಹಳ್ಳಿ ಚಂದ್ರಶೇಖರ್‌ ನಿರ್ದೇಶನದ ‘ಇಂಡಿಯಾ ವರ್ಸಸ್ ಇಂಗ್ಲೆಂಡ್‌’ ಸಿನಿಮಾದ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ. ಈಗಾಗಲೇ, ಇಂಗ್ಲೆಂಡ್‌ನಲ್ಲಿ ಪ್ರೀಮಿಯರ್‌ ಶೋ ಕಂಡಿರುವ ಈ ಚಿತ್ರ ಜನವರಿ 24ರಂದು ವಿಶ್ವದಾದ್ಯಂತ ಏಕಕಾಲಕ್ಕೆ ತೆರೆ ಕಾಣಲಿದೆ.

ಈ ಚಿತ್ರದ ಕಥೆ ಹೊಸೆದಿರುವುದು ನಾಗತಿಹಳ್ಳಿ ಅವರ ಪುತ್ರಿ ಕನಸು ನಾಗತಿಹಳ್ಳಿ. ಭಾರತದಿಂದ ಬ್ರಿಟನ್‌ಗೆ ಕಾಣ್ಕೆಯ ರೂಪದಲ್ಲಿ ಹೋದ ಅಪರೂಪದ ವಸ್ತು ‘ಕೊಹಿನೂರ್ ವಜ್ರ’ವನ್ನು ರೂಪಕವಾಗಿಟ್ಟುಕೊಂಡು ಚಿತ್ರಕಥೆ ಹೆಣೆಯಲಾಗಿದೆ. ಇದಕ್ಕೆ ಪೂರಕವಾಗಿಯೇ ಪ್ರೇಮಕಥೆ ಬೆಸೆದುಕೊಂಡಿದೆ. ಅಪರಾಧ, ಸಸ್ಪೆನ್ಸ್‌, ಥ್ರಿಲ್ಲರ್‌ ಚಿತ್ರ ಇದಾಗಿದೆ.

ಮೊದಲಿಗೆ ಈ ಚಿತ್ರಕ್ಕೆ ‘ಅಕ್ಷಾಂಶ ರೇಖಾಂಶ’ ಎಂಬ ಟೈಟಲ್ ಇಡುವ ಉದ್ದೇಶ ನಿರ್ದೇಶಕರಿಗೆ ಇತ್ತಂತೆ. ಆದರೆ,  ಚಿತ್ರತಂಡದ ಸದಸ್ಯರು ಇದಕ್ಕೆ ಸಹಮತ ಸೂಚಿಸಲಿಲ್ಲ. ಕೊನೆಗೆ, ‘ಇಂಡಿಯಾ ವರ್ಸಸ್‌ ಇಂಗ್ಲೆಂಡ್‌’ ಶೀರ್ಷಿಕೆಯನ್ನು ಅಂತಿಮಗೊಳಿಸಲಾಯಿತಂತೆ.

ಇದು ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಯುದ್ಧ ಕುರಿತು ಕಥೆಯಲ್ಲ. ಆದರೆ, ಚರಿತ್ರೆಯಲ್ಲಿ ಗತಿಸಿಹೋದ ಈ ಎರಡೂ ದೇಶಗಳ ನಡುವಿನ ವಾಗ್ವಾದದ ಪ್ರಸಂಗವೊಂದನ್ನು ನಿರ್ದೇಶಕರು ಪರದೆ ಮೇಲೆ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ಎಂಬುದು ಚಿತ್ರತಂಡದ ವಿವರಣೆ.

ಖಳನಟನಾಗಿಯೇ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿರುವ ವಸಿಷ್ಠ ಸಿಂಹ ಮೊದಲ ಬಾರಿಗೆ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅವರು ಬ್ರಿಟಿಷ್‌ ಬಾರ್ನ್‌ ದೇಸಿ ಬಾಯ್ ಆಗಿ ಬಣ್ಣ ಹಚ್ಚಿದ್ದಾರೆ. ಇಲ್ಲಿಯವರೆಗೂ ಹೊಡೆಬಡಿ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಅವರಿಗೆ ಇದೊಂದು ಸವಾಲಿನ ಪಾತ್ರವೂ ಹೌದು. ಮಾನ್ವಿತಾ ಹರೀಶ್‌ ಅವರಿಗೆ ಜೋಡಿಯಾಗಿದ್ದಾರೆ.

ಇದನ್ನೂ ಓದಿ: ಎಲ್ಲಿಯೂ ನಿಲ್ಲದ ಪಯಣಿಗ: ನಾಗತಿಹಳ್ಳಿ ಚಂದ್ರಶೇಖರ್

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು