ನಟಿ ರಿತಿಕಾ ಸಿಂಗ್ ನಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ ‘ಇನ್‌ಕಾರ್’ ಮಾರ್ಚ್ 3ರಂದು ತೆರೆಗೆ ಬರಲು ಸಜ್ಜಾಗಿದೆ. ಹರಿಯಾಣದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಘಟನೆಯ ನೈಜ ಅಂಶಗಳನ್ನು ಆರಿಸಿಕೊಂಡು ಅದನ್ನು ಚಿತ್ರರೂಪಕ್ಕೆ ತಂದಿದ್ದಾರೆ ನಿರ್ದೇಶಕ ಹರ್ಷವರ್ಧನ್. ಚಿತ್ರಕಥೆಯೂ ಅವರದ್ದೇ. ಇನ್‌ಬಾಕ್ಸ್ ಪಿಕ್ಚರ್ಸ್‌ನಡಿ ಅಂಜುಮ್ ಖುರೇಶಿ ಹಾಗೂ ಸಾಜಿದ್ ಖುರೇಶಿ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
‘ಇದು ಒಂದು ದಿನದಲ್ಲಿ ನಡೆಯುವ ಕಥೆಯಾಗಿದೆ. ಹೀಗಾಗಿ ಎರಡು ಗಂಟೆಯ ಸಿನಿಮಾಗಾಗಿ ಒಂದೇ ರೀತಿಯಲ್ಲಿ ಕಾಣುವುದು ಅಗತ್ಯವಾಗಿತ್ತು. ಇದು ಸವಾಲಿನಿಂದ ಕೂಡಿತ್ತು. ಇದಕ್ಕಾಗಿ ಎರಡು ವಾರ ನಾನು ತಲೆಗೆ ಸ್ನಾನ ಮಾಡಿರಲಿಲ್ಲ’ ಎನ್ನುತ್ತಾರೆ ‘ಸಾಕ್ಷಿ ಗುಲಾಟಿ’ ಎಂಬ ಪಾತ್ರದಲ್ಲಿ ನಟಿಸಿರುವ ರಿತಿಕಾ. ಕಾಲೇಜು ವಿದ್ಯಾರ್ಥಿನಿಯೋರ್ವಳ ಅಪಹರಣದ ಬೆನ್ನಲ್ಲೇ ನಡೆಯುವ ಘಟನೆಗಳನ್ನು ಚಿತ್ರಕಥೆಯು ಹೊಂದಿದೆ. ಮಾಥ್ಯೂಸ್ ಡುಪ್ಲೆಸ್ಸಿ ಸಂಗೀತ, ಮಿಥುನ್ ಗಂಗೋಪಾಧ್ಯಾಯ ಛಾಯಾಗ್ರಹಣ, ಸುನಿಲ್ ರೋಡ್ರಿಗಸ್ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಸಿನಿಮಾ ಹಿಂದಿ ಸೇರಿದಂತೆ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಕಾಣಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.