ಇಂದು ಅಂತರರಾಷ್ಟ್ರೀಯ ಯೋಗ ದಿನ. ಇದರ ಅಂಗವಾಗಿ ಅನೇಕ ನಟ–ನಟಿಯರು ತಮ್ಮ ಯೋಗದ ಭಂಗಿಯ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ. ಬಹುಭಾಷಾ ನಟಿ ರುಕಲ್ ಪ್ರೀತ್ ಸಿಂಗ್ ಕೂಡ ಇದಕ್ಕೆ ಹೊರತಾಗಿಲ್ಲ. ಸದಾ ಫಿಟ್ನೆಸ್ ಮೇಲೆ ಕಾಳಜಿ ಹೊಂದಿರುವ ರಕುಲ್ ತಮ್ಮ ಯೋಗದ ಭಂಗಿಯ ಫೋಟೊವನ್ನು ಇನ್ಸ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಜೊತೆಗೆ ’ಯೋಗ ಮಾಡುವುದು ಕೇವಲ ದೇಹಕ್ಕೆ ಆಕಾರ ನೀಡುವುದಕ್ಕಾಗಿ ಅಲ್ಲ; ಜೀವನಕ್ಕೆ ಆಕಾರಕ್ಕೆ ನೀಡಲು’ ಎಂದಿದ್ದಾರೆ.

ಇಂದು ಬೆಳಿಗ್ಗೆ ಇನ್ಸ್ಸ್ಟಾಗ್ರಾಂ ಖಾತೆಯಲ್ಲಿ ಫೋಟೊ ಅಪ್ಲೋಡ್ ಮಾಡುವ ಜೊತೆಗೆ ‘ನಿಜವಾದ ಯೋಗ ಎಂದರೆ ಕೇವಲ ದೇಹಕ್ಕೆ ಆಕಾರ ನೀಡಲು ಮಾತ್ರವಲ್ಲ, ಬದುಕಿಗೆ ಆಕಾರ ನೀಡಲು ಯೋಗ ಮಾಡಬೇಕು. ಕೇವಲ ಕಾಲಿನ ಬೆರಳನ್ನು ಮುಟ್ಟುವುದು ಯೋಗವಲ್ಲ. ಸಂಪೂರ್ಣ ದೇಹವನ್ನು ಬಗ್ಗಿಸಿ ಯೋಗಭ್ಯಾಸ ಮಾಡಬೇಕು. ಹೊರಗಡೆ ದೇಹದ ಸುತ್ತಲೂ ಸುಳಿದಾಡುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ ದೇಹದ ಒಳಗಡೆ ಹೋಗುವುದನ್ನು ನಾವು ನಿಯಂತ್ರಿಸಬಹುದು. ನಿಶ್ಚಲತೆಯ ಭಾವ ನಮ್ಮಲಿರಬೇಕು. ದೇಹ, ಮನಸ್ಸು ಸದಾ ಪ್ರತಿಫಲಿಸುತ್ತಿರಬೇಕು. ಜೀವನ ಪೂರ್ತಿ ದೇಹದಲ್ಲಿ ಒಂದು ಕಂಪನವಿರಬೇಕು. ಇದರಿಂದ ದೇಹ ಹಾಗೂ ಮನಸ್ಸು ಎರಡೂ ನಿಯಂತ್ರಣದಲ್ಲಿರುತ್ತದೆ. ಅಂತರರಾಷ್ಟ್ರೀಯ ಯೋಗದ ದಿನದ ಶುಭಾಶಯಗಳು, ನನ್ನ ಆತ್ಮದ ಸಹೋದರಿ ಅನುಷ್ಕಾಯೋಗ ಅವರಿಗೆ ವಂದನೆಗಳು. ಯೋಗವನ್ನು ನನ್ನ ಜೀವನದ ಭಾಗವಾಗಿದ್ದಕ್ಕೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ ರಕುಲ್.

ಕನ್ನಡ, ಹಿಂದಿ, ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿರುವ ರಕುಲ್ ಇತ್ತೀಚೆಗೆ ಅತಿಯಾಗಿ ದೇಹದಂಡಿಸಿ ತುಂಬಾ ತೆಳ್ಳಗಾಗಿದ್ದರು. ಆ ಕಾರಣಕ್ಕೆ ಆಕೆಗೆ ಸಿನಿಮಾ ಅವಕಾಶಗಳು ಸಿಗುತ್ತಿಲ್ಲ ಎಂಬ ಮಾತೂ ಕೇಳಿಬಂದಿತ್ತು. ಸದಾ ಫಿಟ್ನೆಸ್ ಮೇಲೆ ಕಾಳಜಿ ವಹಿಸುವ ಈಕೆ ಆಹಾರ ಕ್ರಮದಲ್ಲೂ ಕಟ್ಟುನಿಟ್ಟು.

ಸದ್ಯಕ್ಕೆ ಹಿಂದಿಯ ‘ಚಲೇ ಚಲೊ’, ತಮಿಳಿನ ’ಅಟ್ಯಾಕ್’ ಹಾಗೂ ’ಇಂಡಿಯನ್ 2’ ಸಿನಿಮಾಗಳು ಈಕೆಯ ಕೈಯಲ್ಲಿವೆ.

ಯೋಗ ದಿನಾಚರಣೆ ಕುರಿತ ಇನ್ನಷ್ಟು ಸುದ್ದಿ, ಲೇಖನ, ವಿಡಿಯೊಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ:https://www.prajavani.net/tags/international-yoga-day

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.