ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಿ ಕೃತಿ ಜೊತೆಗಿನ ಡೇಟಿಂಗ್ ಕುರಿತು ಪ್ರಭಾಸ್ ಸ್ಪಷ್ಟನೆ

Last Updated 31 ಡಿಸೆಂಬರ್ 2022, 9:43 IST
ಅಕ್ಷರ ಗಾತ್ರ

ನಟಿ ಕೃತಿ ಸೈನಾನ್ ಜೊತೆಗಿನ ಡೇಟಿಂಗ್‌ಗೆ ಸಂಬಂಧಿಸಿದಂತೆ ಬಾಹುಬಲಿ ಖ್ಯಾತಿಯ ಪ್ರಭಾಸ್ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು 'ಎನ್‌ಡಿಟಿವಿ'ವರದಿ ಮಾಡಿದೆ.

'ಅನ್‌ಸ್ಟಾಪೆಬಲ್ ವಿತ್ ಎನ್‌ಬಿಕೆ 2' ಕಾರ್ಯಕ್ರಮದಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಪ್ರಭಾಸ್, ಇದು ಹಳೆಯ ಸುದ್ದಿ ಎಂದಷ್ಟೇ ಉತ್ತರಿಸಿದರು.

ಈ ಮೂಲಕ ಕೃತಿ ಸೈನಾನ್ ಜೊತೆಗಿನ ಡೇಟಿಂಗ್ ವದಂತಿಗಳನ್ನು ನಿರಾಕರಿಸಿದರು.

ಈ ಸಂದರ್ಭದಲ್ಲಿ ಪ್ರಭಾಸ್‌ಗೆ ಮತ್ತೊಂದು ಪ್ರಶ್ನೆ ಎದುರಾಗಿತ್ತು. ಮದುವೆ ಕುರಿತು ಕೇಳಿದಾಗ, ನನಗೆ ಗೊತ್ತಿಲ್ಲ ಸರ್! ಇದುವರೆಗೆ ಯೋಚಿಸಿಲ್ಲ. ಖಂಡಿತವಾಗಿಯೂ ಮದುವೆಯಾಗುತ್ತೇನೆ. ಇದುವರೆಗೆ ಯೋಗ ಕೂಡಿ ಬಂದಿಲ್ಲ ಎಂದು ತಿಳಿಸಿದರು.

ಬಾಲಿವುಡ್‌ನ ಖ್ಯಾತ ನಿರ್ದೇಶಕ ಓಂ ರಾವತ್ ನಿರ್ದೇಶನದ ಬಹುನಿರೀಕ್ಷಿತ ಆದಿಪುರುಷ್ ಚಿತ್ರದಲ್ಲಿ ಪ್ರಭಾಸ್ ಹಾಗೂ ಕೃತಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಮುಂದಿನ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT