ಭಾನುವಾರ, ಜನವರಿ 23, 2022
26 °C

PHOTOS: ಮೇಕಪ್ ಇಲ್ಲದೇ ಕಾಣಿಸಿಕೊಂಡ ಬಾಲಿವುಡ್ ಬೇಬಿ ಜಾಹ್ನವಿ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸದ್ಯ ಹದಿ ಹರೆಯದ ಹುಡುಗರ ನಿದ್ದೆ ಕದ್ದಿರುವ ಚೆಲುವೆ ಎಂದರೆ ಅದು ಬಾಲಿವುಡ್ ಬೇಬಿ, ನಟಿ ಜಾಹ್ನವಿ ಕಪೂರ್. ದಢಕ್ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಮಾಡಿರುವ ಈ 24 ರ ಬೆಡಗಿ ನ್ಯಾಷನಲ್ ಕ್ರಶ್ ಆಗಿದ್ದಾರೆ.

ಅಳೆದು ತೂಗಿ ಸಿನಿಮಾಗಳನ್ನು ಒಪ್ಪಿಕೊಳ್ಳುವ ಜಾಹ್ನವಿ ಬಹುತೇಕ ಬಿಡುವಿನ ವೇಳೆ ಪ್ರವಾಸ, ಮೋಜು–ಮಸ್ತಿಯಲ್ಲೇ ತೊಡಗಿರುತ್ತಾರೆ. ಆಗಾಗ ತಮ್ಮ ಸುಂದರ ಫೋಟೊಗಳನ್ನು ಸಾಮಾಜಿಕ ಜಾಲಾತಣಗಳಲ್ಲಿ ಜಾಹ್ನವಿ ಹಂಚಿಕೊಳ್ಳುತ್ತಾ ಇರುತ್ತಾರೆ.

ಅವರ ಸಹಜ ಸೌಂದರ್ಯದ ಜೊತೆ ಮೇಕಪ್‌ನಲ್ಲಿ ಅವರು ಕಂಗೊಳಿಸುವುದನ್ನು ಅವರ ಅಭಿಮಾನಿಗಳು ನೋಡುತ್ತಲೇ ಇರುತ್ತಾರೆ. ಇದೀಗ ಜಾಹ್ನವಿ ಮೇಕಪ್ ಇಲ್ಲದ ಕೆಲವು ಫೋಟೊಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ತಾವೇಷ್ಟು ಸಹಜ ಸುಂದರಿ ಎನ್ನುವುದನ್ನು ತೋರಿಸಿದ್ದಾರೆ.

ಅಭಿಮಾನಿಗಳು ‘ಜಾಹ್ನವಿ ನೀವು ಮೇಕಪ್ ಇಲ್ಲದೆಯೂ ಅತ್ಯಂತ ಸುಂದರವಾಗಿ ಕಾಣುತ್ತೀರಾ’ ಎಂದು ಉದ್ಘಾರ ತೆಗೆದಿದ್ದಾರೆ. ಲಕ್ಷಾಂತರ ಜನ ಈ ಫೋಟೊಗಳನ್ನು ಇಷ್ಟಪಟ್ಟಿದ್ದಾರೆ.


ತನ್ನ ತಂಗಿ ಖುಷಿ ಕಪೂರ್ ಜೊತೆ ಜಾಹ್ನವಿ

ಪ್ರಸ್ತುತ ಜಾಹ್ನವಿ ಅಭಿನಯದ ‘ಭೇದಿಯಾ’ ಸಿನಿಮಾ ಬಿಡುಗಡೆಗೆ ಸಿದ್ದವಾಗಿದ್ದು, ‘ಗುಡ್‌ ಲಕ್ ಜೆರ್ರೀ’, ‘ದೊಸ್ತಾನಾ 2’ ಹಾಗೂ ‘ಮಿ’ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.