ಬೆಂಗಳೂರು: ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಬಹುನೀರಿಕ್ಷಿತ ‘ಜವಾನ್‘ ಸಿನಿಮಾದ ಟ್ರೈಲರ್ ಇಂದು (ಆಗಸ್ಟ್ 31) ಬಿಡುಗಡೆಯಾಗಿದೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ರೈಲರ್ ವಿಡಿಯೊ ಹಂಚಿಕೊಂಡಿರುವ ಶಾರುಖ್, ತಾಯಿ–ಮಗನ ಬಾಂಧವ್ಯ, ಮಹಿಳೆಯರ ಪ್ರತೀಕಾರ, ಸೈನಿಕನ ತ್ಯಾಗ, ಸೇರಿದಂತೆ ಹಲವು ದೃಶ್ಯಗಳನ್ನೂ ಒಳಗೊಂಡ ಚಿತ್ರ ( ಜವಾನ್) ನೋಡಲು ನೀವು ( ಪ್ರೇಕ್ಷಕರು) ಸಜ್ಜಾಗಿದ್ದೀರಾ ಎಂದು ಬರೆದುಕೊಂಡಿದ್ದಾರೆ.
ಮುಂಬೈನಲ್ಲಿ ನಡೆದ ಘಟನೆಯೊಂದನ್ನು ಹೇಳುವ ಮೂಲಕ ಆರಂಭವಾಗುವ ಟ್ರೈಲರ್, ಬೋಳು ತಲೆ ಸೇರಿದಂತೆ ವಿಭಿನ್ನ ಪಾತ್ರಗಳಲ್ಲಿ ಶಾರುಖ್ ಮಾಸ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಯನತಾರಾ ಲೇಡಿ ಬಾಸ್ ಪಾತ್ರದಲ್ಲಿ ತೆರೆ ಮೇಲೆ ಮಿಂಚಲಿದ್ದಾರೆ.