ಬೆಂಗಳೂರು: ಕಣ್ ಹೊಡೆದು ರಾತ್ರೋರಾತ್ರಿ ಪ್ರಖ್ಯಾತಿ ಗಳಿಸಿದ್ದ ಮಲಯಾಳಂ ಬೆಡಗಿ ಪ್ರಿಯಾ ವಾರಿಯರ್ ಈಗ ಮತ್ತೆ ಸುದ್ದಿಯಲ್ಲಿದ್ದಾರೆ.

2018ರಲ್ಲಿ ಗೂಗಲ್ ಸರ್ಚ್ ಎಂಜಿನ್‌ನಲ್ಲಿ ಅತಿ ಹೆಚ್ಚು ಬಾರಿ ಬಳಕೆಯಾದ ಹೆಸರು ಪ್ರಿಯಾ ಪ್ರಕಾಶ್ ಅವರದು. ಕಣ್ಣು ಮಿಟುಕಿಸುವ ವಿಡಿಯೊ ಕಳೆದ ವರ್ಷ ಸಾಮಾಜಿಕ ಜಾಲಣಗಳಲ್ಲಿ ಹರಿದಾಡಲು ಆರಂಭವಾದ ಕ್ಷಣದಿಂದಲೂ ಲಕ್ಷಾಂತರ ಮಂದಿಪ್ರಿಯಾಗೆ ಅಭಿಮಾನಿಗಳಾದರು. ಪ್ರತಿ ನಿತ್ಯ ಅವರ ಫೋಟೊ ಅಥವಾ ಸುದ್ದಿಗಾಗಿ ಅಂತರ್ಜಾಲ ತಾಣದಲ್ಲಿ ಹುಡುಕಾಡುವುದು ಸಾಮಾನ್ಯವಾಗಿ ಹೋಯಿತು.

ಈ ಬಾರಿ ಪ್ರಿಯಾ ಸುದ್ದಿಯಲ್ಲಿರುವುದು ‘ಶ್ರೀದೇವಿ ಬಂಗಲೊ’ ಸಿನಿಮಾದಿಂದಾಗಿ. ಅಭಿನಯ ಹಾಗೂ ಸೌಂದರ್ಯದಿಂದಲೇ ಬಾಲಿವುಡ್‌ನಲ್ಲಿ ಛಾಪು ಮೂಡಿಸಿದ್ದ ಪಂಚಭಾಷಾ ನಟಿ ಶ್ರೀದೇವಿ ನಿಗೂಢ ಸಾವಿನ ಕಥೆಯನ್ನೇ ಹೋಲುವ ಎಳೆ ಈ ಸಿನಿಮಾದಲ್ಲಿದೆ ಎನ್ನುವುದು ಇತ್ತೀಚೆಗಷ್ಟೇ ಬಿಡುಗಡೆಯಾದ ಈ ಸಿನಿಮಾದಟೀಸರ್‌ನಿಂದ ಚರ್ಚೆಗೆ ಗ್ರಾಸವಾಗಿದೆ. ಇದರಲ್ಲಿ ಶ್ರೀದೇವಿ ಹೆಸರಿನ ಪಾತ್ರವನ್ನು ಪ್ರಿಯಾ ನಿರ್ವಹಿಸುತ್ತಿದ್ದಾರೆ.

ಕಳೆದ ಫೆಬ್ರುವರಿಯಲ್ಲಿ ನಟಿ ಶ್ರೀದೇವಿ ಹೋಟೆಲ್‌ವೊಂದರ ಬಾತ್‌ಟಬ್‌ನಲ್ಲಿ ನಿಗೂಢವಾಗಿ ಮೃತಪಟ್ಟಿದ್ದರು. ಅದಕ್ಕೆ ಹೋಲುವ ದೃಶ್ಯಾವಳಿಗಳು 1 ನಿಮಿಷ 49 ಸೆಕೆಂಡ್‌ನಟೀಸರ್‌ನಲ್ಲಿವೆ.

ಇದನ್ನು ಆಕ್ಷೇಪಿಸಿ ಶ್ರೀದೇವಿ ಪತಿ ಬೋನಿ ಕಪೂರ್ ಚಿತ್ರತಂಡಕ್ಕೆ ನೋಟಿಸ್ ನೀಡಿದ್ದಾರೆ.‘ನಟಿಯ ಹೆಸರನ್ನು ಬಳಸಿಕೊಳ್ಳಲಾಗಿದೆ ಮತ್ತು ಅವರ ಜೀವನ ಆಧಾರಿಸಿಯೇ ಈ ಸಿನಿಮಾ ಮಾಡಲಾಗಿದೆ ಎಂದು ಆಕ್ಷೇಪಿಸಿದ್ದು,24 ತಾಸಿನೊಳಗೆ ಸಿನಿಮಾದ ಹೆಸರು ಬದಲಿಸಬೇಕು’ ಎಂದು ನೋಟಿಸ್‌ನಲ್ಲಿಹೇಳಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಿಯಾ, ‘ಶ್ರೀದೇವಿ ಎನ್ನುವುದು ಕೇವಲ ನನ್ನ ಪಾತ್ರದ ಹೆಸರು. ಆ ಸಿನಿಮಾಗೂ ಶ್ರೀದೇವಿ ಅವರ ಜೀವನಕ್ಕೂ ಯಾವುದೇ ಸಂಬಂಧವಿಲ್ಲ. ಈ ವಿವಾದವನ್ನು ಯಾರು ಸೃಷ್ಟಿಸುತ್ತಿದ್ದಾರೊ? ಬಹುಶಃ ಟೀಸರ್‌ನಿಂದಾಗಿ ಎಲ್ಲರಲ್ಲೂ ಕುತೂಹಲ ಹುಟ್ಟಿಕೊಂಡಿದೆ. ಅದು ಒಳ್ಳೆಯದೆ. ಇದು ನಟಿ ಶ್ರೀದೇವಿ ಜೀವನ ಆಧಾರಿತ ಸಿನಿಮಾವೇ, ಅಲ್ಲವೇ ಎನ್ನುವುದನ್ನು ವೀಕ್ಷಕರೇ ನಿರ್ಧರಿಸಲಿ’ ಎಂದು ಹೇಳಿದರು.

ನಿರ್ದೇಶಕ ಪ್ರಶಾಂತ್ ಮಾಂಬುಳ್ಳಿ, ‘ನನ್ನ ಸಿನಿಮಾಶ್ರೀದೇವಿ ಅವರ ಕಥೆಯನ್ನೇ ಹೇಳುತ್ತಿರುವು ಕೇವಲ ಕಾಕತಾಳೀಯ. ಶ್ರೀದೇವಿ ಎನ್ನುವುದು ಸಾಮಾನ್ಯ ಹೆಸರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸುವುದರಲ್ಲಿ ಅರ್ಥವೇ ಇಲ್ಲ’ ಎಂದರು.

ಸಂಬಂಧಿಕರೊಬ್ಬರ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೋಳ್ಳಲು ಶ್ರೀದೇವಿ ಪತಿ ಬೋನಿ ಕಪೂರ್ ಹಾಗೂ ಕಿರಿಯ ಪುತ್ರಿ ಖುಷಿ ಜತೆ ದುಬೈಗೆ ತೆರಳಿದ್ದರು. ಆ ವೇಳೆ ಬಾತ್‌ಟಬ್‌ನಲ್ಲಿ ಅವರ ಮೃತಪಟ್ಟಿದ್ದರು. ಆ ನಂತರ ಕೆಲ ದಿನಗಳು ಅವರ ಸಾವಿನ ಕುರಿತು ಸಾಕಷ್ಟು ಚರ್ಚೆಗಳು ಶುರುವಾಗಿದ್ದವು.

ಪ್ರಿಯಾಗೆಇದು ಬಾಲಿವುಡ್‌ನ ಚೊಚ್ಚಲ ಸಿನಿಮಾವಾಗಿದೆ. ಚಿತ್ರರಂಗಕ್ಕೆ ಕಾಲಿಡುತ್ತಿದ್ದಂತೆ ಹಲವು ಹೆಗ್ಗಳಿಕೆ ಮತ್ತು ವಿವಾದ ಪ್ರಿಯಾ ಹೆಗಲೇರಿವೆ. ಆದರೆ ಈ ಚಿತ್ರರಂಗದಲ್ಲಿ ಅವರ ಭವಿಷ್ಯ ಹೇಗಿರುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.