ಶನಿವಾರ, ನವೆಂಬರ್ 23, 2019
23 °C

ಕರಿಷ್ಮಾ ಪಾತ್ರಕ್ಕೆ ನ್ಯಾಯ ಸಲ್ಲಿಸುತ್ತೇನೆ: ಸಾರಾ ಅಲಿ ಖಾನ್‌

Published:
Updated:
prajavani

ನಟಿ ಸಾರಾ ಅಲಿ ಖಾನ್‌ ‘ಕೂಲಿ ನಂ.1' ಚಿತ್ರದ ರಿಮೇಕ್‌ನಲ್ಲಿ ನಟ ವರುಣ್‌ ಧವನ್‌ ಜೊತೆ ಜೋಡಿಯಾಗಿ ನಟಿಸುತ್ತಿದ್ದಾರೆ.  ಇದು ರಿಮೇಕ್‌ ಚಿತ್ರವಾದರೂ ಚಿತ್ರದಲ್ಲಿ ಸಾರಾ ಪಾತ್ರಕ್ಕೆ ಮಾಡರ್ನ್‌ ಟ್ವಿಸ್ಟ್‌ ನೀಡಿದ್ದಾರಂತೆ. ಮೂಲ ಚಿತ್ರದ ಪಾತ್ರಕ್ಕೆ ಕೊಂಚ ಹೋಲಿಕೆಯಿದೆ ಅಷ್ಟೇ ಎಂದು ಹೇಳಿಕೊಂಡಿದ್ದಾರೆ.

‘ಮೂಲ ಚಿತ್ರದಲ್ಲಿ ನಟಿ ಕರಿಷ್ಮಾ ತೆರೆ ಮೇಲೆ ಮ್ಯಾಜಿಕ್‌ ಸೃಷ್ಟಿ ಮಾಡಿದ್ದರು. ಆ ಪಾತ್ರಕ್ಕೆ ಅಷ್ಟೊಂದು ಜನಪ್ರಿಯವಾಗಿತ್ತು. ರಿಮೇಕ್‌ ಚಿತ್ರದಲ್ಲಿ ಆ ಪಾತ್ರಕ್ಕೆ ನ್ಯಾಯ ಸಲ್ಲಿಸುವ ಪ್ರಯತ್ನ ಮಾಡುತ್ತಿದ್ದೇನೆ’ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

‘ನಾನು ಮೂಲಚಿತ್ರವನ್ನು ನೋಡಿದ್ದೇನೆ. ನಾನು ಡೇವಿಡ್‌ ಧವನ್‌ ಅಭಿಮಾನಿ. ಅವರ ಬೀವಿ ನಂ.1 ಸಿನಿಮಾದಿಂದ ಕೂಲಿ ನಂ.1 ಸಿನಿಮಾದ ತನಕ ಎಲ್ಲಾ ಸಿನಿಮಾಗಳನ್ನು ನೋಡಿದ್ದೇನೆ.  ಈಗ ಕೂಲಿ ನಂ.1 ರಿಮೇಕ್‌ ಚಿತ್ರ ನಿರ್ದೇಶಿಸುತ್ತಿರುವ ಇಮ್ತಿಯಾಜ್‌ ಅಲಿ ಹಾಗೂ ಡೇವಿಡ್‌ ಧವನ್‌ ಇಬ್ಬರೂ ಭಿನ್ನ ನಿರ್ದೇಶಕರು’ ಎಂದು ಸಾರಾ ಅನುಭವ ಹಂಚಿಕೊಂಡಿದ್ದಾರೆ.

‘ಕೇದಾರನಾಥ’ ಸಿನಿಮಾ ಮೂಲಕ ಬಾಲಿವುಡ್‌ ಪ್ರವೇಶಿಸಿದ ಸಾರಾ ಅವರು ಕಡಿಮೆ ಸಮಯದಲ್ಲಿಯೇ ಸ್ಟಾರ್‌ ನಟಿಯಾಗಿ ಜನಪ್ರಿಯರಾಗಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, ‘ನನಗೆ ಸ್ಟಾರ್‌ ಪಟ್ಟ ಬೇಕಾಗಿಲ್ಲ. ಉತ್ತಮ ನಟಿ ಎಂದು ಗುರುತಿಸಿಕೊಳ್ಳಬೇಕಾಗಿದೆ. ಭಿನ್ನ ಭಿನ್ನ ಸಿನಿಮಾಗಳಲ್ಲಿ ಭಿನ್ನ ಪಾತ್ರಗಳಲ್ಲಿ ನಟಿಸಬೇಕು ಎಂಬುದು ನನ್ನ ಕನಸು. ನನ್ನ ಕೊನೆ ಉಸಿರಿರುವ ತನಕ ನಟಿಸಬೇಕು ಎಂಬುದು ನನ್ನಾಸೆ. ಈ ಕನಸು ಕೈಗೂಡಲು ಸಮಯ ಬೇಕಾಗುತ್ತದೆ’ ಎಂದು ಅವರು ಹೇಳಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)