ಮಂಗಳವಾರ, ಆಗಸ್ಟ್ 20, 2019
27 °C

‘ಕಬೀರ್ ಸಿಂಗ್‌’ ನೋಡಲ್ಲ ಎಂದ ‘ಅರ್ಜುನ್‌ ರೆಡ್ಡಿ’

Published:
Updated:
Prajavani

ವಿಜಯ್‌ ದೇವರಕೊಂಡ ಅಭಿನಯದ ಬ್ಲಾಕ್‌ ಬಸ್ಟರ್‌ ಸಿನಿಮಾ ‘ಅರ್ಜುನ್ ರೆಡ್ಡಿ’ ಬಾಲಿವುಡ್‌ನಲ್ಲಿ ರಿಮೇಕ್‌ ಆಗಿ ₹250 ಕೋಟಿಗೂ ಹೆಚ್ಚು ಗಳಿಸಿದೆ.

‘ಕಬೀರ್‌ ಸಿಂಗ್‌’ ಹಿಂದಿ ಸಿನಿಮಾದಲ್ಲಿ ಕಿಯಾರಾ ಅಡ್ವಾಣಿ, ಶಾಹಿದ್ ಕಪೂರ್ ನಟಿಸಿದ್ದಾರೆ. ಈಗಲೂ ಆ ಸಿನಿಮಾ ಬಾಕ್ಸ್‌ ಆಫೀಸ್‌ನಲ್ಲಿ ಗಳಿಕೆ ಮಾಡುತ್ತಲೇ ಇದೆ. ಆದರೆ ಈ ಸಿನಿಮಾದ ಮೂಲ ನಟ ವಿಜಯ್‌ ದೇವರಕೊಂಡ ‘ಕಬೀರ್‌ ಸಿಂಗ್‌’ ಸಿನಿಮಾವನ್ನು ಏಕೆ ನೋಡಬೇಕು ಎಂದು ಪ್ರಶ್ನಿಸಿದ್ದಾರೆ.

‘ಡಿಯರ್ ಕಾರ್ಮೇಡ್‌’ ಸಿನಿಮಾ ಪ್ರಚಾರದ ವೇಳೆ ಮಾಧ್ಯಮದವರಿಂದ ಎದುರಾದ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಅವರು ಈ ರೀತಿ ಹೇಳಿದ್ದಾರೆ.
‘ಕಬೀರ್‌ ಸಿಂಗ್‌’ ಸಿನಿಮಾ ಚೆನ್ನಾಗಿ ಓಡುತ್ತಿದೆ. ಶಾಹಿದ್ ನಟಿಸಿದ್ದಾರೆ. ಆದರೆ ಮೂಲ ಸಿನಿಮಾದಲ್ಲಿ ನಟಿಸಿರುವ ನನಗೆ ಕತೆ ಗೊತ್ತು, ಎಲ್ಲವೂ ಗೊತ್ತು. ಹೀಗಿದ್ದಾಗ ಮತ್ತೊಮ್ಮೆ ಯಾಕೆ ಈ ಸಿನಿಮಾ ನೋಡಲಿ? ಎಂದು ಪ್ರಶ್ನಿಸಿದ್ದಾರೆ.

‘ಸಂದೀಪ್‌ ವಾಂಗಾ ಅವರು ನನಗೆ ತುಂಬಾ ಬೇಕಾದವರು. ಹೀಗಾಗಿ ಹಿಂದಿ ಸಿನಿಮಾ ಯಶಸ್ವಿಯಾಗಲಿ ಎಂಬ ಬಯಕೆ ನನಗೂ ಇತ್ತು. ಆದರೆ ನಿರೀಕ್ಷೆಗಿಂತ ಈ ಸಿನಿಮಾ ಬ್ಲಾಕ್‌ಬಸ್ಟರ್‌ ಆಗಿ ಹೊರಹೊಮ್ಮಿದೆ. ಇಲ್ಲಿ ಅದರ ಬಗ್ಗೆ ಚರ್ಚೆ ಬೇಡ’ ಎಂದು ಹೇಳಿದ್ದಾರೆ.

Post Comments (+)