ಪ್ರಜಾವಾಣಿ ವಾರ್ತೆ

ಲಖನೌ: ‘ನಟಿ ನೋರಾ ಫತೇಹಿಯಂತೆ ಮೈಕಟ್ಟು ಹೊಂದಿರಬೇಕು ಎಂದು ಕಿರಿಕಿರಿ ಮಾಡಿದ ನನ್ನ ಪತಿ, ಗಂಟೆಗಟ್ಟಲೆ ದೈಹಿಕ ಕಸರತ್ತು ಮಾಡಿಸಿದರು. ಒಲ್ಲೆ ಎಂದಿದ್ದಕ್ಕೆ ಹಲವು ದಿನಗಳ ಕಾಲ ಆಹಾರ ನೀಡದೇ ನನ್ನನ್ನು ಕೂಡಿ ಹಾಕಿದ್ದರು’ ಎಂದು ಆರೋಪಿಸಿ ಉತ್ತರ ಪ್ರದೇಶದ ಘಾಜಿಯಾಬಾದ್ನ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

‘ಪ್ರತಿ ದಿನ ಎರಡರಿಂದ ಮೂರು ಬಾರಿ ವ್ಯಾಯಾಮ ಮಾಡಿಸುತ್ತಿದ್ದರು. ಅನಾರೋಗ್ಯದಿಂದಾಗಿ ನಾನು ವ್ಯಾಯಾಮ ಮಾಡಲು ಆಗುತ್ತಿರಲಿಲ್ಲ. ತುಂಬಾ ದಿನ ನನಗೆ ಊಟವನ್ನೂ ಕೊಟ್ಟಿರಲಿಲ್ಲ’ ಎಂದು ಮಹಿಳಾ ಠಾಣೆಗೆ ಕೊಟ್ಟ ದೂರಿನಲ್ಲಿ ತಿಳಿಸಿದ್ದಾರೆ.

‘ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ನನ್ನ ಪತಿ ದೇಹಾಕಾರದ ವಿಷಯದಲ್ಲಿ ವಿಲಕ್ಷಣವಾಗಿ ವರ್ತಿಸುತ್ತಿದ್ದರು. ನಿನ್ನ ಮೈಕಟ್ಟು ಸರಿಯಿಲ್ಲ. ನೀನು ನೋರಾ ಫತೇಹಿ ರೀತಿ ಆಗಬೇಕು ಎನ್ನುತ್ತಿದ್ದರು. ಗಂಡನ ಮನೆಯವರೂ ಕಿರುಕುಳ ನೀಡುತ್ತಿದ್ದರು. ದೈಹಿಕ ಮತ್ತು ಮಾನಸಿಕ ಹಿಂಸೆಯಿಂದ ನನಗೆ ಗರ್ಭಪಾತವೂ ಆಗಿದೆ’ ಎಂದು ಮಹಿಳೆ ದೂರಿದ್ದಾರೆ.

‘ಜುಲೈನಲ್ಲಿ ತವರು ಮನೆಗೆ ಹೋಗಿ ಬಂದಾದ ಮೇಲೆ ನನ್ನನ್ನು ಮನೆಯೊಳಗೂ ಬಿಟ್ಟುಕೊಂಡಿಲ್ಲ. ಪತಿ ಮತ್ತು ಅವರ ಮನೆಯವರ ವಿರುದ್ಧ ಕಠಿಣ ಕ್ರಮ ಜರುಗಿಸಿ’ ಎಂದು ಮಹಿಳೆ ಆಗ್ರಹಿಸಿದ್ದಾರೆ. ಇದೇ ವರ್ಷ ಮಾರ್ಚ್ನಲ್ಲಿ ಆಕೆಗೆ ಮದುವೆ ಆಗಿತ್ತು ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.