ಶನಿವಾರ, ಆಗಸ್ಟ್ 13, 2022
23 °C

ಬಾಲಯ್ಯರ ಮುಂದಿನ ಚಿತ್ರದ ಅತಿಥಿ ಪಾತ್ರದಲ್ಲಿ ಕಲ್ಯಾಣ್‌ರಾಮ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೋಯಪತಿ ಶ್ರೀನು ಹಾಗೂ ನಂದಮುರಿ ಬಾಲಕೃಷ್ಣ ಕಾಂಬಿನೇಷನ್‌ನಲ್ಲಿ ಹೊಸ ಚಿತ್ರವೊಂದು ತಯಾರಾಗುತ್ತಿರುವುದು ಹಳೆಯ ವಿಷಯ. ಈ ಚಿತ್ರದ ಕುರಿತು ಬಾಲಯ್ಯ ಅಭಿಮಾನಿಗಳು ಬಹಳ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಅಲ್ಲದೇ ಚಿತ್ರದ ಕುರಿತು ಒಂದಿಲ್ಲೊಂದು ಗಾಳಿಸುದ್ದಿಗಳು ದಿನಕ್ಕೊಂದರಂತೆ ಹರಡುತ್ತಲೇ ಇವೆ. ಈ ಹಿಂದೆ ಬಾಲಯ್ಯ ಹಾಗೂ ಶ್ರೀನು ಕಾಂಬಿನೇಷನ್‌ನಲ್ಲಿ ಲೆಜೆಂಡ್‌, ಸಿಂಹದಂತಹ ಸೂಪರ್‌ ಹಿಟ್ ಸಿನಿಮಾಗಳು ತೆರೆ ಕಂಡಿದ್ದವು. ಈ ಜೋಡಿ ಈಗ ಮತ್ತೆ ಒಂದಾಗಿದ್ದು ಅಭಿಮಾನಿಗಳು ಮನರಂಜನೆಯೊಂದಿಗೆ ಆ್ಯಕ್ಷನ್, ಪವರ್‌ಫುಲ್ ಡೈಲಾಗ್‌ಗಳನ್ನು ಎದುರು ನೋಡುತ್ತಿದ್ದಾರೆ.

ಸಿನಿಮಾಕ್ಕೆ ಮಿರ್ಯಾಲಾ ರವೀಂದ್ರ ರೆಡ್ಡಿ ಹಣ ಹೂಡಿಕೆ ಮಾಡಿದ್ದಾರೆ. ಎಸ್‌. ತಮನ್ ಸಂಗೀತ ನಿರ್ದೇಶನವಿದೆ. ಸದ್ಯ ಗಾಳಿಸುದ್ದಿಯ ಪ್ರಕಾರ ಚಿಕ್ಕಪ್ಪನ ಈ ಚಿತ್ರದಲ್ಲಿ ನಂದಮುರಿ ಕಲ್ಯಾಣ್ ರಾಮ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಮೂಲಗಳ ಪ್ರಕಾರ್ ಕಲ್ಯಾಣ್ ಅವರದ್ದು ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯ ಪಾತ್ರ. ಇದು ಅಭಿಮಾನಿಗಳಲ್ಲಿ ಇನ್ನಷ್ಟು ಖುಷಿ ಹೆಚ್ಚುವಂತೆ ಮಾಡಿದೆ. ಈ ಸುದ್ದಿಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ ಅಭಿಮಾನಿಗಳು ಮಾತ್ರ ಇದು ನಿಜವಾಗಲಿ ಎನ್ನುತ್ತಿದ್ದಾರೆ.

ಚಿತ್ರಕ್ಕೆ ಹೊಸ ನಟಿಯನ್ನು ಪರಿಚಯಿಸಲಿದ್ದೇವೆ ಎಂದು ಇತ್ತೀಚೆಗೆ ಬೋಯಪತಿ ಶ್ರೀನು ಹೇಳಿದ್ದರು. ಈ ಹಿಂದೆ ಎನ್‌ಟಿಆರ್ ಜೀವನಾಧಾರಿತ ಸಿನಿಮಾದಲ್ಲಿ ಕಲ್ಯಾಣ್‌ ತಮ್ಮ ತಂದೆ ಹರಿಕೃಷ್ಣರ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಎನ್‌ಟಿಆರ್ ಪಾತ್ರದಲ್ಲಿ ಬಾಲಯ್ಯ ಕಾಣಿಸಿಕೊಂಡಿದ್ದರು. ಮತ್ತೆ ಚಿಕ್ಕಪ್ಪನ ಜೊತೆ ಕಲ್ಯಾಣ್ ತೆರೆ ಹಂಚಿಕೊಳ್ಳುತ್ತಾರಾ ಕಾದು ನೋಡಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು