ಹುಬ್ಬಳ್ಳಿ: ನಟ ವಿಕಾಸ್ ಹಾಗೂ ನಟಿ ಸಿಂಧೂ ಲೋಕನಾಥ್ ಅಭಿನಯನದ ‘ಕಾಣದಂತೆ ಮಾಯವಾದನು’ ಸಿನಿಮಾ ಜ. 31ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ.

‘ಕಾಮಿಡಿ, ಫ್ಯಾಂಟಸಿ, ಹಾರರ್ ಹಾಗೂ ಲವ್ ಸುತ್ತ ಚಿತ್ರದ ಕಥೆಯನ್ನು ಹೆಣೆಯಲಾಗಿದ್ದು, ರಾಜ ಪತ್ತಿಪಾಥಿ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಇದುವರೆಗೆ ಧಾರವಾಹಿ ಹಾಗೂ ಸಿನಿಮಾದಲ್ಲಿ ಸಣ್ಣ ಪಾತ್ರಗಳಲ್ಲಿ ನಟಿಸಿದ್ದ ನಾಣು, ‘ಕಾಣದಂತೆ ಮಾಯವಾದನು’ ಮೂಲಕ ನಾಯಕ ನಟನಾಗಿ ಪದಾರ್ಪಣೆ ಮಾಡುತ್ತಿದ್ದೇನೆ’ ಎಂದು ಚಿತ್ರದ ನಾಯಕ ವಿಕಾಸ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಆತ್ಮಗಳಿಗೆ ಶಕ್ತಿ ಇರುವುದಿಲ್ಲ. ಅವು ಬೇರೆಯವರ ಮೂಲಕ, ತಮ್ಮ ಕೆಲಸ ಮಾಡಿಸಿಕೊಳ್ಳಬಲ್ಲವು. ಅದೇ ರೀತಿ ಚಿತ್ರದಲ್ಲಿ ನಾಯಕ ಕೊಲೆಯಾದ ಬಳಿಕ, ಆತನ ಆತ್ಮ ಹೇಗೆ ತನ್ನ ಸೇಡು ತೀರಿಸಿಕೊಳ್ಳುತ್ತದೆ ಎಂಬುದು ಸಿನಿಮಾದ ತಿರುಳು’ ಎಂದು ಕಥೆಯ ಎಳೆಯನ್ನು ಬಿಚ್ಚಿಟ್ಟ ಅವರು, ‘ಚಿತ್ರ ರಾಜ್ಯದಾದ್ಯಂತ ಅಂದಾಜು 80 ಥಿಯೇಟರ್‌ಗಳಲ್ಲಿ ತೆರೆ ಕಾಣಲಿದೆ. ಇದು ಖಳ ನಟ ಉದಯ್ ನಟಿಸಿರುವ ಕಡೆಯ ಚಿತ್ರ’ ಎಂದರು.

ನಟಿ ಸಿಂಧೂ ಲೋಕನಾಥ್ ಮಾತನಾಡಿ, ‘ವಿಭಿನ್ನವಾದ ಕಥೆ ಇದಾಗಿದ್ದು, ಎಲ್ಲಾ ವಯೋಮಾನದವರನ್ನು ರಂಜಿಸಲಿದೆ. ಎನ್‌ಜಿಒದಲ್ಲಿ ಕೆಲಸ ಮಾಡುವ ವಂದನಾ ಎಂಬ ಪಾತ್ರಕ್ಕೆ ನಾನು ಬಣ್ಣ ಹಚ್ಚಿದ್ದೇನೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಬೆಂಗಳೂರು ಹಾಗೂ ಕಾಶ್ಮೀರದಲ್ಲಿ ಚಿತ್ರೀಕರಿಸಲಾಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.