ಬೆಂಗಳೂರು: ರಿಷಬ್ ಶೆಟ್ಟಿ ನಟನೆ ಮತ್ತು ನಿರ್ದೇಶನದ ಕನ್ನಡ ಚಿತ್ರ ‘ಕಾಂತಾರ‘ ದೇಶದಲ್ಲಿ ಐಎಂಡಿಬಿ ಅತಿ ಹೆಚ್ಚು ವೋಟ್ ಮತ್ತು ರೇಟಿಂಗ್ ಪಡೆದುಕೊಂಡ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಕಾಂತಾರ ಹಿಂದಿ ಅವತರಣಿಕೆ ಅಕ್ಟೋಬರ್ 14 ಶುಕ್ರವಾರ ಬಿಡುಗಡೆಯಾಗುತ್ತಿದೆ.
ಐಎಂಡಿಬಿಯಲ್ಲಿ ಕಾಂತಾರ ಚಿತ್ರಕ್ಕೆ ಆರಂಭದ ದಿನದಿಂದಲೂ ಉತ್ತಮ ಪ್ರತಿಕ್ರಿಯೆ ಕಂಡುಬಂದಿತ್ತು. ಪ್ರಸ್ತುತ 10ರಲ್ಲಿ 9.6 ರೇಟಿಂಗ್ ಪಡೆದುಕೊಂಡು, ದೇಶದಲ್ಲಿ ಗರಿಷ್ಠ ರೇಟಿಂಗ್ ಕಾಯ್ದುಕೊಂಡಿರುವ ಚಿತ್ರ ಎಂಬ ಖ್ಯಾತಿಗೆ ಪಾತ್ರವಾಗಿದೆ.
ಐಎಂಡಿಬಿಯಲ್ಲಿ 13,000 ವೋಟಿಂಗ್ ಬಂದಿದ್ದು, ಅದರಲ್ಲಿ 11 ಸಾವಿರಕ್ಕೂ ಅಧಿಕ ಮಂದಿ 10/10 ರೇಟಿಂಗ್ ನೀಡಿದ್ದಾರೆ.
ರಕ್ಷಿತ್ ಶೆಟ್ಟಿ ನಿರ್ದೇಶನದ 777 ಚಾರ್ಲಿ ಚಿತ್ರಕ್ಕೆ 9.0 ರೇಟಿಂಗ್ ಬಂದಿದ್ದರೆ, ಕಮಲ್ ಹಾಸನ್ ಅವರ ವಿಕ್ರಂ ಮತ್ತು ಯಶ್ ಅವರ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕೆ 8.4 ಐಎಂಡಿಬಿ ರೇಟಿಂಗ್ ಬಂದಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.