ಗುರುವಾರ , ಆಗಸ್ಟ್ 5, 2021
28 °C

ಪಿಯಾನೊ ನುಡಿಸಿದ ಕಂಗನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಯಲಲಿತಾ ಬಯೋಪಿಕ್ ಆಧರಿತ ‘ತಲೈವಿ‘ ಸಿನಿಮಾದ ಗುಂಗಿನಲ್ಲಿರುವ ನಟಿ ಕಂಗನಾ ರನೋಟ್‌ ಈಗ ಮನಾಲಿಯಲ್ಲಿನ ತಮ್ಮ ಐಷಾರಾಮಿ ಮನೆಯಲ್ಲಿ‘ಲಾಕ್‌ಡೌನ್‘ ಆಗಿದ್ದಾರೆ.

ಈಚೆಗೆ ಅವರು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಹಂಚಿಕೊಳ್ಳುವ ಪ್ರತಿ ಪೋಸ್ಟ್‌ಗಳಲ್ಲಿ ತಮ್ಮ ಕುರಿತಾದ ಹೊಸ ಹೊಸ ಆಸಕ್ತಿಕರ ಸಂಗತಿಗಳನ್ನು ಹೊರಗೆಡಹುತ್ತಾರೆ. ಈಗ ತಮ್ಮ ಮನೆಯಲ್ಲಿ ಪಿಯಾನೊ ನುಡಿಸುತ್ತಿರುವ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದು, ಆ ವಿಡಿಯೊ ವೈರಲ್‌ ಆಗಿದೆ. ಕೆಲವೇ ಗಂಟೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. 

ಕಂಗನಾ 1970ರ ಕ್ಲಾಸಿಕ್‌ ಹಾಲಿವುಡ್‌ ‘ವೇರ್‌ ಡು ಐ ಬಿಗಿನ್‌’ ಲವ್‌ ಸ್ಟೋರಿ’ಯ ಜನಪ್ರಿಯ ಹಾಡಿನ ಥೀಮ್‌ ಟ್ರಾಕ್‌ನ್ನು ಪಿಯಾನೊದಲ್ಲಿ ನುಡಿಸಿದ್ದಾರೆ. ಆಗ ಅದಕ್ಕೆ ಸಂಗೀತ ನಿರ್ದೇಶನ ಮಾಡಿದವರು ಫ್ರಾನ್ಸಿಸ್‌ ಲೈ ಹಾಗೂ ಗೀತೆ ರಚಿಸಿದವರು ಕಾರ್ಲ್‌ ಸಿಗ್ಮನ್‌.

ಆ ವಿಡಿಯೊದಲ್ಲಿ ಕಂಗನಾ ವಿಶಾಲವಾದ ಮನೆಯಲ್ಲಿ ದೊಡ್ಡ ಪಿಯಾನೊ ಮುಂದೆ ಬಿಳಿ ಶರ್ಟ್ ಮತ್ತು ಕಪ್ಪು ಬಣ್ಣದ ಸ್ಕರ್ಟ್‌ ಧರಿಸಿ ಕುಳಿತು, ಪಿಯಾನೊ ನುಡಿಸುತ್ತಿರುವ ದೃಶ್ಯವಿದೆ. ಅವರು ನುಡಿಸುತ್ತಿರುವ ಸಂಗೀತ ಕೇಳಲು ಇಂಪಾಗಿದೆ. ಏಕಾಗ್ರತೆಯಿಂದ ಪಿಯಾನೊ ನುಡಿಸುತ್ತಿರುವ ಕಂಗನಾಳಿಗೆ ಅಭಿಮಾನಿಗಳು ಹಾರ್ಟ್‌ ಚಿಹ್ನೆಯ ಎಮೋಜಿಗಳ  ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. 

ಒಳಾಂಗಣ ವಿನ್ಯಾಸಕಿ ಕಂಗನಾ

ನಟಿ ಕಂಗನಾ ಲಾಕ್‌ಡೌನ್ ಅವಧಿಯಲ್ಲಿ ಒಳಾಂಗಣ ವಿನ್ಯಾಸಕಿಯಾಗಿಯೂ ಬದಲಾಗಿದ್ದಾರೆ. ಅವರ ಸಹೋದರಿ ರಂಗೋಲಿ ಚಾಂದೇಲ್‌ ಇತ್ತೀಚೆಗೆ ಹಿಮಾಚಲ ಪ್ರದೇಶದಲ್ಲಿನ ತಮ್ಮ ಮನೆಯ ಒಳಾಂಗಣ ವಿನ್ಯಾಸದ ಫೋಟೊಗಳನ್ನು ಹಂಚಿಕೊಂಡಿದ್ದರು. ಪುರಾತನ, ಹಳೆಯ ಕಾಲದ ವಸ್ತುಗಳನ್ನು ಬಳಸಿ, ಸಹೋದರಿ ಮನೆಯ ಒಳಾಂಗಣ ವಿನ್ಯಾಸವನ್ನು ಅಂದವಾಗಿ ಮಾಡಿಕೊಟ್ಟಿದ್ದರು ಕಂಗನಾ. ಇದಲ್ಲದೇ ಲಾಕ್‌ಡೌನ್‌ ಅವಧಿಯಲ್ಲಿ ಕವಿತೆಗಳನ್ನು ಬರೆಯಲು ಕಂಗನಾ ಆರಂಭಿಸಿದ್ದರಂತೆ.ಕಂಗನಾ ಇನ್‌ಸ್ಟಾಗ್ರಾಂ ಖಾತೆ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು