ಸೋಮವಾರ, ಆಗಸ್ಟ್ 8, 2022
23 °C

ನಾನು ಜಗಳಗಂಟಿಯಂತೆ ಕಾಣಿಸಿಕೊಳ್ಳಬಹುದು, ಆದರೆ ಅದು ನಿಜವಲ್ಲ: ಕಂಗನಾ ರನೌತ್

ಎಎನ್ಐ Updated:

ಅಕ್ಷರ ಗಾತ್ರ : | |

Kangana Ranaut

ನವದೆಹಲಿ: ಸುಶಾಂತ್ ಸಿಂಗ್ ಸಾವಿನ ನಂತರ ಡ್ರಗ್ಸ್ ಮಾಫಿಯಾ ಮತ್ತು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಟ್ವಿಟರ್‌ನಲ್ಲಿ ಟೀಕೆಗಳ ಸುರಿಮಳೆಗೈಯ್ಯುತ್ತಿರುವ ಬಾಲಿವುಡ್ ನಟಿ ಕಂಗನಾ ರನೌತ್, ನಾನು 'ಲಡಾಕು'ವಿನಂತೆ (ಜಗಳಗಂಟಿ ಅಥವಾ ಕಲಹಪ್ರಿಯೆ) ಕಾಣಿಸಿಕೊಳ್ಳಬಹುದು ಆದರೆ ಅದು ನಿಜವಲ್ಲ ಎಂದು ಹೇಳಿದ್ದಾರೆ.

ಕಳೆದ ಕೆಲವು ವಾರಗಳಿಂದ ಶಿವಸೇನಾ ಸಂಸದ ಸಂಜಯ್ ರಾವುತ್ ಮತ್ತು ಹಲವಾರು ಬಾಲಿವುಡ್ ನಟ-ನಟಿಯರೊಂದಿಗಿನ ಜಗಳದಿಂದಾಗಿ ಮುನ್ನೆಲೆಗೆ ಬಂದಿರುವ ನಟಿ ಕಂಗನಾ, ತಮ್ಮ ಬಗ್ಗೆ ಟ್ವಿಟರ್ ಮೂಲಕವೇ ಸ್ಪಷ್ಟನೆ ನೀಡಿದ್ದಾರೆ.

'ನಾನು ತುಂಬಾ ಜಗಳ ಮಾಡುವ ವ್ಯಕ್ತಿಯಾಗಿ ಕಾಣಿಸಬಹುದು ಆದರೆ ಅದು ನಿಜವಲ್ಲ, ನಾನೆಂದಿಗೂ ಜಗಳವನ್ನು ಪ್ರಾರಂಭಿಸದ ದಾಖಲೆ ನನ್ನ ಬಳಿಯಿದೆ. ಯಾರಾದರೂ ನಾನು ಕಲಹಪ್ರಿಯೆ ಎಂಬುದನ್ನು ಸಾಬೀತುಪಡಿಸಿದ್ದೇ ಆದಲ್ಲಿ ನಾನು ಟ್ವಿಟರ್‌ನಿಂದ ಹೊರನಡೆಯುತ್ತೇನೆ' ಎಂದು ಟ್ವೀಟ್ ಮಾಡಿದ್ದಾರೆ.

'ಯಾರಾದರೂ ಸಾಬೀತುಪಡಿಸಿದರೆ ನಾನು ಟ್ವಿಟರ್ ತೊರೆಯುತ್ತೇನೆ. ನಾನೆಂದಿಗೂ ಹೋರಾಟವನ್ನು ಪ್ರಾರಂಭಿಸುವುದಿಲ್ಲ. ಆದರೆ, ಪ್ರತಿ ಹೋರಾಟವನ್ನು ನಾನು ಮುಗಿಸುತ್ತೇನೆ. ಭಗವಾನ್ ಕೃಷ್ಣ, ಯಾರಾದರೂ ನಿಮ್ಮನ್ನು ಹೋರಾಡುವಂತೆ ಕೇಳಿದಾಗ ನೀವು ಅವರನ್ನು ನಿರಾಕರಿಸಬಾರದು ಎಂದು ಹೇಳಿದ್ದಾರೆ' ಎಂದು 33 ವರ್ಷದ ನಟಿ ತಿಳಿಸಿದ್ದಾರೆ.

ಹಿಂದಿನ ದಿನ ಅವರು ಚಲನಚಿತ್ರ ನಿರ್ಮಾಪಕ ಅನುರಾಗ್ ಕಶ್ಯಪ್ ಅವರೊಂದಿಗೆ ಟ್ವೀಟ್ ಮೂಲಕವೇ ವಾಕ್ಸಮರದಲ್ಲಿ ತೊಡಗಿಕೊಂಡ ಬಳಿಕ ಈ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು