ಶುಕ್ರವಾರ, ಅಕ್ಟೋಬರ್ 22, 2021
29 °C

ಆರ್ಯನ್ ಖಾನ್‌ಗೆ ಸೆಲೆಬ್ರಿಟಿಗಳ ಬೆಂಬಲ: ಬಾಲಿವುಡ್ ವಿರುದ್ಧ ಕಂಗನಾ ಗರಂ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Actress Kangana Ranaut. File Photo.

ಬೆಂಗಳೂರು: ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನು ಡ್ರಗ್ಸ್ ಪ್ರಕರಣದಲ್ಲಿ ಎನ್‌ಸಿಬಿ ಬಂಧಿಸಿ ವಿಚಾರಣೆ ನಡೆಸುತ್ತಿದೆ.

ಈ ಸಂಬಂಧ ಸೆಲೆಬ್ರಿಟಿಗಳು ಆರ್ಯನ್ ಖಾನ್ ಬೆಂಬಲಿಸಿ ಹೇಳಿಕೆ ನೀಡುತ್ತಿರುವ ಬೆನ್ನಲ್ಲೇ ನಟಿ ಕಂಗನಾ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆರ್ಯನ್ ಖಾನ್ ಬೆಂಬಲಿಸಿ ನಟ ಹೃತಿಕ್ ರೋಷನ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಒಂದನ್ನು ಮಾಡಿದ್ದರು.


ಕಂಗನಾ ರನೌತ್ ಇನ್‌ಸ್ಟಾಗ್ರಾಂ ಸ್ಟೋರೀಸ್‌

ಇದಕ್ಕೆ ಪ್ರತಿಯಾಗಿ ನಟಿ ಕಂಗನಾ ರನೌತ್, ತಮ್ಮ ಇನ್‌ಸ್ಟಾಗ್ರಾಂ ಖಾತೆಯ ಸ್ಟೋರೀಸ್‌ನಲ್ಲಿ, ಬಾಲಿವುಡ್‌ ಮಾಫಿಯಾ ಈಗ ಆರ್ಯನ್ ಸಮರ್ಥನೆಗೆ ಇಳಿದಿದೆ. ನಾವು ತಪ್ಪು ಮಾಡಿದಾಗ ಅದನ್ನು ತಿದ್ದಬೇಕೇ ಹೊರತು ಸಮರ್ಥಿಸಿಕೊಳ್ಳಬಾರದು. ಅಪರಾಧವನ್ನು ಬೆಂಬಲಿಸುವುದು ಕೂಡ ಸರಿಯಲ್ಲ ಎಂಬರ್ಥದಲ್ಲಿ ಪೋಸ್ಟ್ ಮಾಡಿದ್ದಾರೆ.

ಆರ್ಯನ್ ಖಾನ್ ಬೆಂಬಲಿಸಿ ಸುನಿಲ್ ಶೆಟ್ಟಿ, ಸುಸಾನೆ ಖಾನ್ ಕೂಡ ಪೋಸ್ಟ್ ಮಾಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು