ಭಾನುವಾರ, ಅಕ್ಟೋಬರ್ 24, 2021
21 °C

ಶಾರುಕ್‌ ಖಾನ್‌ ಕ್ಷಮೆಯಾಚಿಸಬೇಕು ಎಂದು ಪರೋಕ್ಷವಾಗಿ ಸೂಚಿಸಿದ ಕಂಗನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್ ನಟ ಶಾರುಕ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರುಕ್‌ ಖಾನ್‌ ಕ್ಷಮೆ ಕೋರಬೇಕು ಎಂದು ನಟಿ ಕಂಗನಾ ಪರೋಕ್ಷವಾಗಿ ಹೇಳಿದ್ದಾರೆ.

ಹಾಲಿವುಡ್ ನಟ ಜಾಕಿಚಾನ್‌ ಮಗನ ಡ್ರಗ್ಸ್‌ ಪ್ರಕರಣವನ್ನು ಉಲ್ಲೇಖಿಸಿ ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕಿದ್ದಾರೆ. 

ಡ್ರಗ್ಸ್ ಪ್ರಕರಣದಲ್ಲಿ ಜಾಕಿಚಾನ್‌ ಪುತ್ರ ಸಿಲುಕಿಕೊಂಡಿದ್ದಾಗ ಅವರು ಬಹಿರಂಗವಾಗಿ ಅಭಿಮಾನಿಗಳ ಕ್ಷಮೆಯಾಚಿಸಿದ್ದರು. ಜವಾಬ್ದಾರಿಯುತ ತಂದೆಯಾಗಿ ಶಾರುಕ್ ಖಾನ್‌ ಕೂಡ ಕ್ಷಮೆ ಕೇಳಬೇಕು ಎಂದು ಪರೋಕ್ಷವಾಗಿ ಸೂಚಿಸಿದ್ದಾರೆ.

ಓದಿ: ನಟಿ ರಾಕುಲ್ ಪ್ರೀತ್ ಸಿಂಗ್ ಇನಿಯ ಯಾರೆಂಬುದು ಬಹಿರಂಗ

’ಈ ಘಟನೆಯಿಂದ ನಾನು ನಾಚಿಕೆ ಪಡುವಂತೆ ಆಗಿದೆ, ಇದು ನನ್ನ ಸೋಲು, ಯಾವುದೇ ಕಾರಣಕ್ಕೂ ಈ ಪ್ರಕರಣದಲ್ಲಿ ನನ್ನ ಮಗನನ್ನು ರಕ್ಷಣೆ ಮಾಡುವುದಿಲ್ಲ’ ಎಂದು ಜಾಕಿಚಾನ್‌ ಬಹಿರಂಗವಾಗಿ ಹೇಳಿದ್ದರು. ನಂತರ ಜಾಕಿಚಾನ್‌ ಮಗ 6 ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದರು. ಆಗ ಅವರು ’ನನ್ನ ಮಗನ ತಪ್ಪಿಗಾಗಿ ನಾನು ಕ್ಷಮೆಯಾಚಿಸುತ್ತೇನೆ’ ಎಂದಿದ್ದರು ಎಂಬ ಪೋಸ್ಟ್‌ ಹಾಕಿ, ಜಸ್ಟ್ ಸೇಯಿಂಗ್ ( #justsaying) ಎಂದು ಹ್ಯಾಶ್‌ಟ್ಯಾಗ್‌ ಹಾಕಿ ಪೋಸ್ಟ್‌ ಹಾಕಿದ್ದಾರೆ. 

ಓದಿ: ನನ್ನ ಆ ಟ್ವೀಟ್ ಸಮಂತಾಳಿಗೆ ಸಂಬಂಧಿಸಿದ್ದಲ್ಲ, ನಾನೇನು ಮಾಡಲಿ ಎಂದ ನಟ ಸಿದ್ಧಾರ್ಥ್

ಆ ಮೂಲಕ ಮಗನ ವಿಚಾರದಲ್ಲಿ ಶಾರುಕ್‌ ಕೂಡ ಜಾಕಿಚಾನ್‌ ನಡೆಯನ್ನು ಅನುಸರಿಸಬೇಕು ಎಂದು ಪರೋಕ್ಷವಾಗಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು