ಮಂಗಳವಾರ, ನವೆಂಬರ್ 24, 2020
26 °C
ನ.23, 24ರಂದು ವಿಚಾರಣೆಗೆ ಹಾಜರಾಗಲು ಸೂಚನೆ

ಬಾಲಿವುಡ್‌ ನಟಿ ಕಂಗನಾ, ಸಹೋದರಿ ರಂಗೋಲಿಗೆ ಮೂರನೇ ಬಾರಿ ಸಮನ್ಸ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಬಾಲಿವುಡ್‌ ನಟಿ ಕಂಗನಾ ರನೌತ್‌ ಹಾಗೂ ಅವರ ಸಹೋದರಿ ರಂಗೋಲಿ ಚಾಂಡೇಲಾಗೆ ಮುಂಬೈ ಪೊಲೀಸರು ಮೂರನೇ ಬಾರಿ ಸಮನ್ಸ್‌ ನೀಡಿದ್ದಾರೆ.

ಇದನ್ನು ಓದಿ: ಸಂಪಾದಕರ ಮಾತು | ಪ್ರಜಾವಾಣಿ ಆಂಡ್ರಾಯ್ಡ್ ಮತ್ತು ಐಒಎಸ್ ಆ್ಯಪ್ ಲೋಕಾರ್ಪಣೆ

ಇದೇ 23 (ಕಂಗನಾ) ಮತ್ತು 24 (ರಂಗೋಲಿ) ರಂದು ವಿಚಾರಣೆಗೆ ಬರುವಂತೆ ಇಬ್ಬರಿಗೂ ಪೊಲೀಸರು ಬುಧವಾರ ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುವ ಮೂಲಕ ಕೋಮು ಸಾಮರಸ್ಯ ಕದಡುತ್ತಿರುವ ಆರೋಪ ಇಬ್ಬರ ಮೇಲಿದೆ.

ಅಕ್ಟೋಬರ್ 26 ಮತ್ತು 27ರಂದು ಬಾಂದ್ರಾ ಪೊಲೀಸರ ಎದುರು ಹಾಜರಾಗುವಂತೆ ಮೊದಲ ಸಮನ್ಸ್‌ನಲ್ಲಿ ಸೂಚಿಸಲಾಗಿತ್ತು. ಇದಕ್ಕೆ ಕಂಗನಾ ಮತ್ತು ಅವರ ಸಹೋದರಿ ಉತ್ತರಿಸಿರಲಿಲ್ಲ. ನ.9 ಮತ್ತು 10 ರಂದು ವಿಚಾರಣೆಗೆ ಬರುವಂತೆ ಮತ್ತೊಮ್ಮೆ (ನ. 3) ಸಮನ್ಸ್‌ ನೀಡಲಾಗಿತ್ತು. ಕುಟುಂಬದ ಸದಸ್ಯರೊಬ್ಬರ ವಿವಾಹ ಕಾರ್ಯಕ್ರಮ ಇರುವುದರಿಂದ ತಾನು ಹಿಮಾಚಲ ಪ್ರದೇಶದಲ್ಲಿದ್ದು, ನ. 15ರವರೆಗೂ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ ಎಂದು ಕಂಗನಾ ತಮ್ಮ ವಕೀಲರ ಮೂಲಕ ‍ಪೊಲೀಸರಿಗೆ ತಿಳಿಸಿದ್ದರು.   

ಕಂಗನಾ ಮತ್ತು ರಂಗೋಲಿ ಅವರ ಟ್ವೀಟ್‌ ಹಾಗೂ ಇತರ ಹೇಳಿಕೆಗಳು ಕೋಮು ಸಾಮರಸ್ಯ ಕದಡುವಂತಿದ್ದು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಾಲಿವುಡ್‌ನ ಫಿಟ್‌ನೆಸ್‌ ಟ್ರೈನರ್ ಮುನಾವರ್‌ ಅಲಿ ಸೈಯದ್‌ ಅವರು ದೂರು ನೀಡಿದ್ದರು. ಇದರ ಆಧಾರದಲ್ಲಿ ಪೊಲೀಸರು ಕಂಗನಾ ಮತ್ತು ರಂಗೋಲಿ ವಿರುದ್ಧ ಐಪಿಸಿ ಸೆಕ್ಷನ್‌ 153-ಎ ಹಾಗೂ 295-ಎ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು